Video Viral: ವಂದೇ ಭಾರತ್ ರೈಲಿನಲ್ಲಿ ಕೊಳಲಿನ ಮೂಲಕ ವಂದೇ ಮಾತರಂ ಟ್ಯೂನ್ ನುಡಿಸಿದ ಬೆಂಗಳೂರಿನ ವಿದ್ಯಾರ್ಥಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2022 | 5:09 PM

ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೊಳಲಿನಲ್ಲಿ ವಂದೇ ಮಾತರಂ ಟ್ಯೂನ್ ನುಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Video Viral: ವಂದೇ ಭಾರತ್ ರೈಲಿನಲ್ಲಿ ಕೊಳಲಿನ ಮೂಲಕ ವಂದೇ ಮಾತರಂ ಟ್ಯೂನ್ ನುಡಿಸಿದ ಬೆಂಗಳೂರಿನ ವಿದ್ಯಾರ್ಥಿ
A student from Bengaluru who played Vande Mataram tune through flute on Vande Bharat train
Follow us on

ಬೆಂಗಳೂರು: ಪ್ರಧಾನಿ ಮೋದಿ (Narendra Modi) ನಿನ್ನೆ (ನ.11) ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Express) ಚಾಲನೆ ನೀಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೊಳಲಿನಲ್ಲಿ ವಂದೇ ಮಾತರಂ ಟ್ಯೂನ್ ನುಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು. ಇದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸಲು ಸಜ್ಜಾಗಿದೆ.

ಭಾರತೀಯ ರೈಲ್ವೆ ಖಾತೆಗಳ ಸೇವೆ (IRAS) ಅಧಿಕಾರಿ ಅನಂತ್ ರೂಪನಗುಡಿ ಅವರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿ ರೈಲು ಚಲಿಸುತ್ತಿರುವಾಗಲೇ ಕೊಳಲು ನುಡಿಸಿದ್ದಾನೆ.  ಬೆಂಗಳೂರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಪ್ರಮೇಯ ಶೇಷಾದ್ರಿ ಕೊಳಲಿನಲ್ಲಿ ಅದ್ಭುತವಾಗಿ ವಂದೇ ಮಾತರಂ ರಾಗವನ್ನು ನುಡಿಸಿದ್ದಾರೆ ಎಂದು ಭಾರತೀಯ ರೈಲು ಇಲಾಖೆಯ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಇದನ್ನು ಓದಿ: Vande Bharat Express: ವಂದೇ ಭಾರತ್ ಎಕ್ಸ್​ಪ್ರೆಸ್, ಆನ್​ಲೈನ್​ ಟಿಕೆಟ್ ಬುಕಿಂಗ್ ವಿಧಾನ ಇಲ್ಲಿದೆ ನೋಡಿ

ವೀಡಿಯೊ ಇದುವರೆಗೆ ಸುಮಾರು 4,900 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇತನ ಈ ಪ್ರತಿಭೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಒಳಭಾಗವು ವಿಮಾನದಂತೆ ಕಾಣುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವಂದೇ ಭಾರತ್ ರೈಲು ನನಗೆ ತುಂಬಾ ಇಷ್ಟವಾಗಿದೆ. ಇದು ನಮ್ಮ ರೈಲುಗಳಿಗೆ ಆಧುನಿಕ ನೋಟವನ್ನು ನೀಡುತ್ತದೆ. ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಶತಾಬ್ದಿಗಳಗಿಂತ ಹೇಗೆ ವಿಭಿನ್ನವಾಗಿದೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ.

 

Published On - 5:09 pm, Sat, 12 November 22