ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡುವ ವಿಚಾರಕ್ಕೆ ಸಂಬಂಧಿಸಿ ಬಹುತೇಕ ಕಡೆ ಅಮಾನವೀಯ ಘಟನೆಗಳು ನಡೆದಿವೆ. ಆ ಅಂತ್ಯ ಸಂಸ್ಕಾರವನ್ನು ನೋಡಿದ ಜನ ಕೆಂಡಾಮಂಡಲವಾಗಿದುಂಟು. ಇಷ್ಟೆನಾ ಮನುಷ್ಯ ಜೀವನ ಎಂದು ಜಿಗುಫ್ಸೆ ಬಂದಿದುಂಟು.
ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಸೋಂಕಿತರ ದೇಹವನ್ನು ಅಂತ್ಯ ಸಂಸ್ಕಾರ ಮಾಡುವುದರಲ್ಲಿ ಬಹುತೇಕ ಬಾರಿ ಎಡವಿದ್ದಾರೆ. ಬಳ್ಳಾರಿ, ದಾವಣಗೆರೆ ಹೀಗೆ ಅನೇಕ ಕಡೆ ನಡೆದ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಆಕ್ರೋಶಗಳು ಕೂಡ ವ್ಯಕ್ತವಾಗಿದ್ದವು. ಆದ್ರೆ ಇಲ್ಲೊಂದು ತಂಡ ಬೆಂಗಳೂರಿನ ಪಾಲಿಗೆ ಕರುಣಾಮಯಿಗಳಾಗಿದ್ದಾರೆ. ಕೋವಿಡ್ನಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು.
ಈ ನಡುವೆ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಸಂಬಂಧಿಕರಿಗೆ ಕೊರೊನಾದಿಂದ ಮೃತಪಟ್ಟವರ ಶವವನ್ನು ಹಸ್ತಾತರಿಸುವಂತಿಲ್ಲ. ಯಾಕೆಂದರೆ ಸೋಂಕು ಮತ್ತಷ್ಟು ಹರಡುವ ಭೀತಿ ಇದೆ. ಆದರೆ ಸರ್ಕಾರ ಕೂಡ ಮೃತರ ಅಂತ್ಯ ಸಂಸ್ಕಾರವನ್ನು ಸರಿಯಾದ ನಿಯಮ ಪಾಲನೆಯಿಂದ ಮಾಡುತ್ತಿಲ್ಲ. ಹೇಗೆಂದರೆ ಹಾಗೆ ಮೃತದೇಹವನ್ನು ಎಳೆಯಲಾಗುತ್ತಿದೆ. ಇದನ್ನು ಗಮನಿಸಿದ ತಂಡವೊಂದು ಸ್ವಯಂ ಪ್ರೇರಿತರಾಗಿ ಮೃತರ ಧರ್ಮದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
Published On - 9:36 am, Tue, 7 July 20