ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದ ಮಹಿಳೆ ಜತೆ ಯುವಕ ಅಸಭ್ಯ ವರ್ತನೆ

ಜಾಲಹಳ್ಳಿಯ ಹೆಚ್​ಎಂಟಿಯಿಂದ ದಾಸರಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ರ‍್ಯಾಪಿಡೊ ಬೈಕ್ ಚಾಲಕಿಗೆ ಯುವಕನಿಂದ ಅಸಭ್ಯ ವರ್ತನೆ ಆರೋಪಿಸಿದ್ದಾರೆ. ಘಟನೆ ಬಳಿಕ ಬೈಕ್ ನಿಲ್ಲಿಸಿ ಹೊಯ್ಸಳ ಪೊಲೀಸ್​ರಿಗೆ ಮಹಿಳೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದು ಜೈಪುರ ಮೂಲದ ಮಹೇಶ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದ ಮಹಿಳೆ ಜತೆ ಯುವಕ ಅಸಭ್ಯ ವರ್ತನೆ
ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದ ಮಹಿಳೆ ಜತೆ ಯುವಕ ಅಸಭ್ಯ ವರ್ತನೆ
Updated By: ಗಂಗಾಧರ​ ಬ. ಸಾಬೋಜಿ

Updated on: Jul 28, 2024 | 3:57 PM

ನೆಲಮಂಗಲ, ಜುಲೈ 28: ರ‍್ಯಾಪಿಡೊ (rapido) ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದ ಮಹಿಳೆಗೆ (woman) ಬೈಕ್ ಟ್ಯಾಕ್ಸಿ ಬುಕ್‌ ಮಾಡಿದ್ದ ಯುವಕನಿಂದ ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ. 35 ವರ್ಷದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಜೈಪುರ ಮೂಲದ ಮಹೇಶ್ (27) ಎಂಬಾತನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಲಹಳ್ಳಿಯ ಹೆಚ್​ಎಂಟಿಯಿಂದ ದಾಸರಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ಯುವಕನಿಂದ ಅಸಭ್ಯ ವರ್ತನೆ ಮಾಡಿದ್ದಾರೆ ಮಹಿಳೆ ಆರೋಪಿಸಿದ್ದಾರೆ. ಘಟನೆ ಬಳಿಕ ಬೈಕ್ ನಿಲ್ಲಿಸಿ ಹೊಯ್ಸಳ ಪೊಲೀಸ್​ರಿಗೆ  ಮಹಿಳೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದು ಮಹೇಶ್​ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಾಸಗಿ ಫೈನಾನ್ಸ್​ಗಳಿಂದ ಕಿರುಕುಳ ಆರೋಪ: ತಹಶಿಲ್ದಾರರ ಕಚೇರಿ ಮುಂದೆ ಜನರಿಂದ ಪ್ರತಿಭಟನೆ

ಹಾವೇರಿ: ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಹಶಿಲ್ದಾರರ ಕಚೇರಿ ಮುಂದೆ ಜನರು ಪ್ರತಿಭಟನೆ ಮಾಡಿದ ಘಟನೆ ರಾಣೇಬೆನ್ನೂರಿನಲ್ಲಿ ನಡೆದಿತ್ತು. ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಗುಡ್ಡದಬೇವಿನಹಳ್ಳಿಯಲ್ಲಿ ಖಾಸಗಿ ಫೈನಾನ್ಸ್​ಗಳು ಸಾಲವನ್ನ ಕೊಟ್ಟು, ಪದೆ ಪದೇ ಕಿರುಕುಳ ನೀಡಿದ್ದರು.

ಇದನ್ನೂ ಓದಿ: ಕಾರು ತರಬೇತಿ ವೇಳೆ ಯುವತಿ ಎದುರೇ ಹಸ್ತಮೈಥುನ: ತರಬೇತುದಾರನ ವಿರುದ್ಧ ಕೇಸ್ ಬುಕ್, ಲೈಸೆನ್ಸ್ ರದ್ದು

ಸಾಲ ಮರುಪಾವತಿಗೆ ಕಾಲಾವಧಿಯಲ್ಲಿ ನೀಡದೆ ಮನೆ ಮುಂದೆ ಚಿತ್ರಹಿಂಸೆ ನೀಡುತ್ತಿದ್ದರು. ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್​ಗಳು ಸಂಖ್ಯೆ ಹೆಚ್ಚಾಗುತ್ತಿದೆ. ಕಾನೂನು ಗಾಳಿಗೆ ತೂರಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾಡಳಿತ ಖಾಸಗಿ ಫೈನಾನ್ಸ್​ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ನೊಂದು ಗ್ರಾಹಕರು ಮನವಿ ಮಾಡಿದ್ದರು. ಫೈನಾನ್ಸ್ ವಿರುದ್ಧ ನೊಂದ ಜನರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪುರಸಭೆ ಪ್ರಭಾರಿ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿತ

ಗದಗ: ಪುರಸಭೆ ಪ್ರಭಾರಿ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿಸಿದ್ದ ಘಟನೆ ಇತ್ತೀಚೆಗೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿತ್ತು. ಪುರಸಭೆ ಪ್ರಭಾರಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಪತಿ ಅಂದಪ್ಪ ಉಳ್ಳಾಗಡ್ಡಿಗೆ ಮಹಿಳೆಯರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಕಪಾಳಮೋಕ್ಷ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆಯಾ? ರಾಜಸ್ಥಾನದಿಂದ ಬಂದ ಮಾಂಸದ ಬಾಕ್ಸ್​ಗೆ ತಡೆ

ಓರ್ವ ಕುಟುಂಬದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹಿನ್ನೆಲೆ ಮಹಿಳೆಯರು ಥಳಿಸಿ ತರಾಟೆಗೆ ತೆಗೆದುಕೊಂಡಿದ್ದರು. ಮನೆಗೆ ಕರೆಯಿಸಿ ಕಪಾಳಮೋಕ್ಷ ಮಾಡಿ ಚಳಿ ಮಹಿಳೆಯರು ಚಳಿಬಿಡಿಸಿದ್ದರು. ಮಹಿಳೆಯರ ಸಿಟ್ಟು ಹೆಚ್ಚಾಗುತ್ತಿದ್ದಂತೆ ಕಂಪೌಂಡ ಹಾರಿ ಮನೆಗೆ ಓಡಿ ಬಂದಿದ್ದಾನಂತೆ. ಮನೆಗೆ ಬಂದಿದ್ದ ಅಂದಪ್ಪನಿಗೆ ಸಹೋದರಿಯರು ಕೂಡ ಥಳಿಸಿದ್ದಾರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.