ಉರುಸ್ ಆಚರಣೆ ವೇಳೆ ಬಾಬಾ ಬುಡನ್​ಸ್ವಾಮಿ ದರ್ಗಾದಲ್ಲಿ ಬೆಂಕಿ: ಕ್ರಮಕ್ಕೆ ಆಗ್ರಹಿಸಿದ ಹಿಂದೂ ಮುಖಂಡರು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 25, 2024 | 6:19 PM

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಹುಲ್ಲುಗಾವಲು ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ.  ಮಸ್ಲಿಂ ಸಮುದಾಯದಿಂದ ಉರುಸ್ ಆಚರಣೆ ವೇಳೆ ಟೆಂಟ್ ಹಾಕಿ ಅಡುಗೆ ಮಾಡುವಾಗ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.

ಉರುಸ್ ಆಚರಣೆ ವೇಳೆ ಬಾಬಾ ಬುಡನ್​ಸ್ವಾಮಿ ದರ್ಗಾದಲ್ಲಿ ಬೆಂಕಿ: ಕ್ರಮಕ್ಕೆ ಆಗ್ರಹಿಸಿದ ಹಿಂದೂ ಮುಖಂಡರು
ಉರುಸ್ ಆಚರಣೆ ವೇಳೆ ಆಕಸ್ಮಿಕ ಬೆಂಕಿ
Follow us on

ಚಿಕ್ಕಮಗಳೂರು, ಮಾರ್ಚ್​ 25: ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ (Inam Dattatreya Baba Budanswamy Dargah) ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಹುಲ್ಲುಗಾವಲು ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ.  ಮಸ್ಲಿಂ ಸಮುದಾಯದಿಂದ ಉರುಸ್ ಆಚರಣೆ ವೇಳೆ ಟೆಂಟ್ ಹಾಕಿ ಅಡುಗೆ ಮಾಡುವಾಗ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಆಕಸ್ಮಿಕ ಬೆಂಕಿಯಿಂದ 2 ಟೆಂಟ್​ಗಳು ಕೂಡ ಸಂಪೂರ್ಣ ಭಸ್ಮವಾಗಿದೆ. ಬೆಂಕಿ, ಹುಲ್ಲುಗಾವಲು ಪ್ರದೇಶ ಭಸ್ಮ ಇಡೀ ಬೆಟ್ಟವನ್ನು ಆವರಿಸಿಕೊಂಡಿದೆ. ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸಲು ಸ್ಥಳೀಯರಿಂದ ಹರಸಾಹಸ ಮಾಡಲಾಯಿತು.

ರಾಜ್ಯದ ನಾನಾ ಭಾಗದಿಂದ ಮುಸ್ಲಿಂ ಸಮುದಾಯದವರು ಆಗಮಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಅಡುಗೆ ತಯಾರಿ ಮಾಡದಂತೆ ಜಿಲ್ಲಾಡಳಿತ ಸೂಚನೆ ಇದ್ದರೂ ಧಿಕ್ಕರಿಸಿ ಅಡುಗೆ ತಯಾರು ಮಾಡಲಾಗಿದೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಸರ್ಕಾರಿ ಶಾಲೆ ಪಕ್ಕದಲ್ಲಿಯೇ ಟೈರ್ ಗೋದಾಮಿನಲ್ಲಿ ಬೆಂಕಿ: ತಪ್ಪಿದ ಭಾರಿ ಅವಘಡ

ಬೆಂಗಳೂರು: ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವಿಟ್ಟಸಂದ್ರ ಬಳಿಯ ಸರ್ಕಾರಿ ಪ್ರೌಢಶಾಲೆಗೆ ಹೊಂದಿಕೊಂಡಿರುವ ಹಳೆ ಟೈರ್ ಮತ್ತು ಟ್ಯೂಬ್ ಗೋದಾಮಿಗೆ ಇತ್ತೀಚೆಗೆ ಬೆಂಕಿ ಬಿದ್ದಿತ್ತು. ಕ್ಷಣ ಮಾತ್ರದಲ್ಲಿ ಇಡೀ ಗೋದಾಮಿಗೆ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆ ಜೊತೆ ದಟ್ಟ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಹರಡಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಪಟಾಕಿ ದುರಂತ: ಓರ್ವ ಕಾರ್ಮಿಕ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ!

ಬೆಂಕಿ ಮತ್ತು ಹೊಗೆ ಹೆಚ್ಚಾಗುತ್ತಿದ್ದಂತೆ ಕೂಡಲೇ ಎಚ್ಚೆತ್ತ ಶಾಲಾ ಶಿಕ್ಷಕರು ಮಕ್ಕಳನ್ನು ಹೊರ ಕಳುಹಿಸಿ ಕೂಡಲೇ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಬೆಂಕಿ ಅವಘಡದ ಬಗ್ಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಲಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ನಾಲ್ಕು ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದರು. ಅದಾಗಲೇ ಬೆಂಕಿಯ ಜ್ವಾಲೆ ಇಡೀ ಗೋದಾಮಿಗೆ ವ್ಯಾಪಿಸಿದ್ದರಿಂದ ಸುಮಾರು 3 ತಾಸು ಹರಸಾಹಸಪಟ್ಟು ಬೆಂಕಿ ನದಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಗೆ ಬೆಂಕಿ ಹಚ್ಚಿದ ವ್ಯಕ್ತಿ; ಇಲ್ಲಿದೆ ವಿಡಿಯೋ

ಇದರ ನಡುವೆ ಬೇಸಿಗೆ ಹಿನ್ನೆಲೆ ಬೆಂಕಿ ನಂದಿಸಲು ನೀರಿನ ಅಭಾವ ಎದುರಾಗಿ ಸಮೀಪದ ಅಪಾರ್ಟ್ಮೆಂಟ್ ನಲ್ಲಿ ನೀರು ತಂದು ಬೆಂಕಿ ನಿಯಂತ್ರಣಕ್ಕೆ ತರಲಾಗಿತ್ತು. ಸಮೀಪದ ನೀಲಗಿರಿ ತೋಪಿಗೆ ಬೆಂಕಿ ತಗುಲಿ ಬಳಿಕ ಗೋದಾಮಿಗೆ ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಅಗ್ನಿಶಾಮಕ ಠಾಣೆ ಅಧಿಕಾರಿ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.