Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ಟೋಪಿ ಧರಿಸಿದ ಕಾಗೇರಿ ಫೋಟೋ ವೈರಲ್; ಹೆಗಡೆಯನ್ನು ಟ್ರೋಲ್ ಮಾಡಿದ ವಿರೋಧಿ ಬಣ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಬೆಂಬಲಿಗರು ಕಾಗೇರಿ ಹಿಂದೂ ವಿರೋಧಿ ಎಂದು ಬಿಂಬಿಸುವ ಫೋಟೋಗಳನ್ನು ವೈರಲ್ ಮಾಡಿದ್ದಾರೆ. ಇತ್ತ, ಅನಂತಕುಮಾರ್ ಹೆಗೆಡೆ ತಾಕತ್ತಿನ ಬಗ್ಗೆ ನೀಡಿದ ಹೇಳಿಕೆಯನ್ನು ಆಧರಿಸಿ ವಿರೋಧಿ ಬಣ ಹೆಗಡೆ ಅವರನ್ನು ಟ್ರೋಲ್ ಮಾಡಿದೆ.

ಮುಸ್ಲಿಂ ಟೋಪಿ ಧರಿಸಿದ ಕಾಗೇರಿ ಫೋಟೋ ವೈರಲ್; ಹೆಗಡೆಯನ್ನು ಟ್ರೋಲ್ ಮಾಡಿದ ವಿರೋಧಿ ಬಣ
ಮುಸ್ಲಿಂ ಟೋಪಿ ಧರಿಸಿದ ಕಾಗೇರಿ ಫೋಟೋ ವೈರಲ್; ಹೆಗಡೆಯನ್ನು ಟ್ರೋಲ್ ಮಾಡಿದ ವಿರೋಧಿ ಬಣ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: Rakesh Nayak Manchi

Updated on: Mar 25, 2024 | 6:04 PM

ಕಾರವಾರ, ಮಾ.25: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ (Vishweshwar Hegde Kageri) ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಗೇರಿ ಮತ್ತು ಹಾಲಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಬೆಂಬಲಿಗರ ನಡುವೆ ಜಟಾಪಟಿಗಳು ಆರಂಭವಾಗಿವೆ. ಕಾಗೇರಿ ಹಿಂದೂ ವಿರೋಧಿ ಎಂದು ಬಿಂಬಿಸುವ ಫೋಟೋಗಳನ್ನು ಹೆಗಡೆ ಬೆಂಬಲಿಗರು ವೈರಲ್ ಮಾಡಿದ್ದಾರೆ. ಇತ್ತ, ತಾಕತ್ತಿನ ಬಗ್ಗೆ ನೀಡಿದ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವಿರೋಧಿ ಬಣ ಹೆಗಡೆ ಅವರನ್ನು ಟ್ರೋಲ್ ಮಾಡಿದೆ.

ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಭಟ್ಕಳ ಹಾಗೂ ಶಿರಸಿ ತಾಲೂಕಿನ ಅನಂತಕುಮಾರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕಾಗೇರಿ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಕಾಗೇರಿ ಅವರು 2013 ರಲ್ಲಿ ಶಿರಸಿಯ ಕಸ್ತೂರ ಬಾ ನಗರದಲ್ಲಿ ಮುಸ್ಲಿಮರ ಇಫ್ತಾರ ಕೂಟದಲ್ಲಿ ಭಾಗಿಯಾಗಿ ಮುಸ್ಲಿಂ ಟೋಪಿ ಧರಿಸಿದ ಫೋಟೋಗಳನ್ನು ಧರಿಸಿ ಆಹಾರ ಸೇವಿಸಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಹೆಗಡೆ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

Photo of Vishweshwar Hegde Kageri wearing Muslim cap goes viral Anti faction trolled Anantkumar Hegade

2013 ರಲ್ಲಿ ಶಿರಸಿಯ ಕಸ್ತೂರ ಬಾ ನಗರದಲ್ಲಿ ಮುಸ್ಲಿಮರ ಇಫ್ತಾರ ಕೂಟದಲ್ಲಿ ಮುಸ್ಲಿಂ ಟೋಪಿ ಧರಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ

ಇದನ್ನೂ ಓದಿ: ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ಮಿಸ್ ಆಗಲು ಒಂದಲ್ಲ, ಎರಡಲ್ಲ ಹಲವು ಕಾರಣ!

ಅನಂತಕುಮಾರ್ ಹೆಗಡೆ ಟ್ರೋಲ್

ಕಾಗೇರಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಂಸದ ಅನಂತ ಕುಮಾರ್ ಹೆಗಡೆ ಕುರಿತ ವಿಡಿಯೋ ಟ್ರೋಲ್ ಮೂಲಕ ವೈರಲ್ ಆಗಲು ಆರಂಭವಾಗಿದೆ. ಮಾ.4 ರಂದು ಭಟ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೆಗಡೆ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿರೋಧಿಗಳು ಟ್ರೋಲ್ ಮಾಡಿದ್ದಾರೆ.

ಸಂಸದನಾಗುವುದು ಸುಲಭದ ಮಾತಲ್ಲ, ಧಮ್ ಇದ್ರೆ ಈ ಖುರ್ಚಿಯಲ್ಲಿ ಕುಳಿತುಕೊಳ್ಳಿ ಎಂದು ಹೇಳಿ ಹೆಗಡೆ ಅವರು ಕುರ್ಚಿಯನ್ನು ವೇದಿಕೆ ಮುಂದಿಟ್ಟಿದ್ದರು. ಅದರಂತೆ, ಸಂಸದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕಾಗೇರಿ ಅವರು ಬೈಕ್ ಮೇಲೇರಿ ಹೋಗುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗಿದೆ. ಹೆಗಡೆಯವರ ಧಮ್​ ಹೇಳಿಕೆಯ ವಿಡಿಯೋಗೆ, “ದಾರಿ ಬಿಡ್ರೋ” ಎಂದು ಹೇಳಿ ಕಾಗೇರಿ ಅವರು ಬೈಕ್ ಮೇಲೆ ಕುಳಿತುಕೊಂಡು ಹೋಗುವ ವಿಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ