AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2020ರ ಅಕ್ಟೋಬರ್​​ ತಿಂಗಳಲ್ಲಿ ಸಿಡಿ ತಯಾರಿ ಶಂಕೆ; ವಿಧಾನಸೌಧ ಸಿಬ್ಬಂದಿ ಜತೆಗೂ ಆರೋಪಿ ನರೇಶ್​ ವಾಟ್ಸಪ್​ ಚಾಟ್​!

ರಮೇಶ್​ ಜಾರಕಿಹೊಳಿ ಅವರ ಮಾಹಿತಿ ಕಲೆಹಾಕುತ್ತಿದ್ದ ನರೇಶ್​, ವಿಧಾನಸೌಧದ ಕೆಲ ಸಿಬ್ಬಂದಿ ಜೊತೆಗೂ ಸಂಪರ್ಕ ಹೊಂದಿದ್ದ. ಸಿಬ್ಬಂದಿ ಜತೆಗೆ ವಾಟ್ಸಪ್ ಚಾಟ್​ ಸಹ ಮಾಡಿದ್ದ ಎಂಬ ಮಾಹಿತಿ ಇದೆ. ಅಲ್ಲದೇ, ರಮೇಶ್​ ಜಾರಕಿಹೊಳಿಯ ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ಎನ್ನುವುದು ಬಯಲಾಗಿದೆ.

2020ರ ಅಕ್ಟೋಬರ್​​ ತಿಂಗಳಲ್ಲಿ ಸಿಡಿ ತಯಾರಿ ಶಂಕೆ; ವಿಧಾನಸೌಧ ಸಿಬ್ಬಂದಿ ಜತೆಗೂ ಆರೋಪಿ ನರೇಶ್​ ವಾಟ್ಸಪ್​ ಚಾಟ್​!
ರಮೇಶ್​ ಜಾರಕಿಹೊಳಿ
Skanda
| Updated By: guruganesh bhat|

Updated on: Mar 18, 2021 | 12:01 PM

Share

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಹಿಂದಿನ ಸೂತ್ರಧಾರಿಗಳು ಸಿಡಿ ತಯಾರಿಸುವ ಮುನ್ನ ತಿಂಗಳುಗಟ್ಟಲೆ ಪೂರ್ವತಯಾರಿ ನಡೆಸಿದ್ದರು ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಪ್ರಕರಣದ ಪ್ರಮುಖ ಆರೋಪಿ ನರೇಶ್​ ಇದಕ್ಕೆ ಬೇಕಾದ ಸಕಲ ತಯಾರಿಗಳನ್ನೂ ಮಾಡಿಕೊಂಡಿದ್ದ, ರಮೇಶ್​ ಜಾರಕಿಹೊಳಿ ಎಲ್ಲೆಲ್ಲಿಗೆ ಹೋಗುತ್ತಿದ್ದರು? ಅವರ ಕಾರ್ಯಕ್ರಮಗಳೇನು? ಎಷ್ಟು ಹೊತ್ತಿಗೆ ಹೋಗ್ತಾರೆ? ಯಾವಾಗ ಬರ್ತಾರೆ? ಸಭೆ ಬಳಿಕ ಎಲ್ಲಿಗೆ ತೆರಳುತ್ತಾರೆ? ಎಂಬ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕುತ್ತಿದ್ದ. 2020ರ ಆಗಸ್ಟ್​, ಸೆಪ್ಟೆಂಬರ್​​ನ ಕಾರ್ಯಕ್ರಮಗಳನ್ನು ವಿವರವಾಗಿ ಫಾಲೋ ಮಾಡುತ್ತಿದ್ದ. ಹೀಗಾಗಿ ಅಕ್ಟೋಬರ್​​ನಲ್ಲಿ ಸಿಡಿ ಮಾಡಿರುವ ಸಾಧ್ಯತೆ ಇದೆ ಎಂಬ ಗುಮಾನಿ ವ್ಯಕ್ತವಾಗುತ್ತಿದೆ.

ರಮೇಶ್​ ಜಾರಕಿಹೊಳಿ ಅವರ ಮಾಹಿತಿ ಕಲೆಹಾಕುತ್ತಿದ್ದ ನರೇಶ್​, ವಿಧಾನಸೌಧದ ಕೆಲ ಸಿಬ್ಬಂದಿ ಜೊತೆಗೂ ಸಂಪರ್ಕ ಹೊಂದಿದ್ದ. ಸಿಬ್ಬಂದಿ ಜತೆಗೆ ವಾಟ್ಸಪ್ ಚಾಟ್​ ಸಹ ಮಾಡಿದ್ದ ಎಂಬ ಮಾಹಿತಿ ಇದೆ. ಅಲ್ಲದೇ, ರಮೇಶ್​ ಜಾರಕಿಹೊಳಿಯ ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ಆತ, ವಿಧಾನಸೌಧಕ್ಕೆ ಎಷ್ಟು ಗಂಟೆಗೆ ಬರ್ತಾರೆ, ಎಲ್ಲಿಗೆ ಹೋಗ್ತಾರೆ? ಬೆಂಗಳೂರು, ಬೆಳಗಾವಿ, ದೆಹಲಿ ಕಾರ್ಯಕ್ರಮಗಳಲ್ಲಿ ಯಾವಾಗ ಪಾಲ್ಗೊಳ್ತಾರೆ ಎಂಬ ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದ ಎಂಬ ಅಂಶ ತಿಳಿದುಬಂದಿದೆ. ಹೀಗೆ ಪಕ್ಕಾ ಮಾಹಿತಿಯ ಆಧಾರದ ಮೇಲೆಯೇ ಸಿಡಿ ಮಾಡಲಾಗಿದೆ ಎಂಬ ಶಂಕೆ ಬಲವಾಗಿದೆ.

ಲಕ್ಷಗಟ್ಟಲೆ ವ್ಯವಹಾರದ ಹಿಂದೆ ಯಾರಿದ್ದಾರೆ? ಏತನ್ಮಧ್ಯೆ ಆರೋಪಿ ನರೇಶ್​ ಬ್ಯಾಂಕ್​ ಖಾತೆಯ ಇಂಚಿಂಚೂ ಮಾಹಿತಿ ಕಲೆಹಾಕುತ್ತಿರುವ ಎಸ್​ಐಟಿ ಹಣ ಡೆಪಾಸಿಟ್​ ಮಾಡಿದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅವರೇನಾದರೂ ಪತ್ತೆಯಾದರೆ ಪ್ರಕರಣಕ್ಕೆ ದೊಡ್ಡ ತಿರುವು ಲಭಿಸುವ ಸಾಧ್ಯತೆ ಇದೆ. ನರೇಶ್ ಗೌಡ ಜೀಪ್ ಬುಕ್ ಮಾಡಲು ಅಡ್ವಾನ್ಸ್​ ಕೊಟ್ಟಿರುವ ಬಗ್ಗೆ, 2 ಬಾರಿ ಕಾರು ಬುಕ್ ಮಾಡಿ ಮತ್ತೆ ಕ್ಯಾನ್ಸಲ್ ಮಾಡಿರುವ ಬಗ್ಗೆ, ₹10 ಲಕ್ಷ ಮೌಲ್ಯದ ಚಿನ್ನದ ಚೈನ್ ಖರೀದಿಸಿರುವ ಬಗ್ಗೆ ಹಾಗೂ ಮೈಸೂರು, ಕೊಡಗು, ಸೋಮವಾರಪೇಟೆ ಭಾಗದಲ್ಲಿ ಜಮೀನು ಖರೀದಿಗೆ ಹುಡುಕಾಟ ನಡೆಸಿದ್ದ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ಈತನ ಬೆನ್ನ ಹಿಂದೆ ಯಾರಿರಬಹುದು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರಿನ ಉದ್ಯಮಿ ನಾಪತ್ತೆ! ಇನ್ನೊಂದೆಡೆ, ಇದಕ್ಕೆ ಸಂಬಂಧಿಸಿದಂತೆ ನರೇಶ್ ಜೊತೆ ನಾಲ್ವರು ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ನರೇಶ್​, ಶ್ರವಣ್ ಹಾಗೂ ಯುವತಿಯ ಜೊತೆಗೆ ಓರ್ವ ಉದ್ಯಮಿಯೂ ನಾಪತ್ತೆಯಾಗಿರುವ ಸಂಗತಿ ಬಯಲಾಗಿದೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾಗಿರುವ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಸಿಡಿ ಕೇಸ್​ನಲ್ಲಿ ನರೇಶ್​ಗೆ ನೆರವು ನೀಡಿದ್ದ ಎಂಬ ಆರೋಪ ಕೇಳಿಬಂದಿದೆ. ರಿಯಲ್ ಎಸ್ಟೇಟ್​, ಗುತ್ತಿಗೆದಾರನ ಕೆಲಸ ಮಾಡ್ತಿದ್ದ ಉದ್ಯಮಿ ನರೇಶ್ ಜತೆ ಒಂದೇ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಯುವತಿಯಿದ್ದ ಪಿಜಿಯಲ್ಲಿ 9.20 ರೂ. ಲಕ್ಷ ಹಣ ಪತ್ತೆ! ಸಿಡಿ ಹಿಂದೆ ಉದ್ಯಮಿ ಕೈವಾಡ?

ಅಶ್ಲೀಲ ಸಿಡಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ; ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲು