ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್‌ಗಾಗಿ ಅನೇಕರು ಸರತಿ ಸಾಲಲ್ಲಿ ನಿಂತಿದ್ದರು. ಆದ್ರೆ ನವರಸ ನಾಯಕ ಜಗ್ಗೇಶ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಸದ್ಯ ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ.
ಜಗ್ಗೇಶ್ ಬಳಿ ಒಟ್ಟು 17,64,23,378 ರೂ ಆಸ್ತಿ ಇದೆ. ಸ್ಥಿರಾಸ್ತಿ: 13,25,00,000 ರೂ. ಮತ್ತು ಚರಾಸ್ತಿ- 4,39,23,378 ರೂ ಹೊಂದಿದ್ದಾರೆ. ಕೈಯಲ್ಲಿರುವ ಹಣ: 2,00,000 ರೂ. ಪತ್ನಿ ಬಳಿ ಇರುವ ಹಣ: 1,60,000 ರೂ. ಜಗ್ಗೇಶ್ ಬಳಿ 500 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇದೆ. ಹಾಗೂ ಅವರ ಪತ್ನಿ ಬಳಿ 500 ಗ್ರಾಂ. ಚಿನ್ನ, 3 ಕೆಜಿ ಬೆಳ್ಳಿ ಇದೆ. ಕೃಷಿ ಭೂಮಿ- 6,75,00,000 ರೂ. ಮನೆ -6,50,00,000 ರೂ. ಪತ್ನಿ ಹೆಸರಲ್ಲಿರುವ ಮನೆ- 4,50,00,000 ರೂ. 2 ಬಿಎಂಡಬ್ಲ್ಯು, 1 ಇನ್ನೋವಾ, ರಾಯಲ್ ಎನ್‌ಫೀಲ್ಡ್ ಬೈಕ್, ಎಕ್ಸೆಸ್ ಯು.ಝಡ್ ಸ್ಕೂಟಿ ಇಟ್ಟುಕೊಂಡಿದ್ದಾರೆ. ಜಗ್ಗೇಶ್ ಹೆಸರಲ್ಲಿ 2,91,24,140 ರೂ ಸಾಲ ಇದ್ದು ಅವರ ಪತ್ನಿ ಹೆಸರಲ್ಲಿ 4,00,000 ರೂ ಸಾಲ ಇದೆ. ಇದನ್ನೂ ಓದಿ: ದೇಶದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಕೈಯಲ್ಲಿದೆ 17,200 ರೂ ಹಣ, ಒಟ್ಟು ಆಸ್ತಿ ಮೌಲ್ಯ ಎರಡೂವರೆ ಕೋಟಿ ರೂ ಅಷ್ಟೇಯಾ!
ಜಗ್ಗೇಶ್‌ಗೆ ಟಿಕೆಟ್! ಬಿಜೆಪಿಯಲ್ಲೇ ಅಸಮಾಧಾನದ ಹೊಗೆ!
ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್‌ಗಾಗಿ ಅನೇಕರು ಸರತಿ ಸಾಲಲ್ಲಿ ನಿಂತಿದ್ದರು. ಆದ್ರೆ, ನಟ ಜಗ್ಗೇಶ್‌ಗೆ ದೆಹಲಿಗೆ ವಿಮಾನವೇರುವ ಅವಕಾಶ ಸಿಕ್ಕಿದೆ. ಜಗ್ಗೇಶ್‌ಗೆ ಟಿಕೆಟ್ ನೀಡೋದ್ರಲ್ಲಿ ಪ್ರಾದೇಶಿಕತೆ ಮತ್ತು ಜಾತಿ ಪ್ರಾತನಿಧ್ಯದ ಲೆಕ್ಕಾಚಾರವಿದೆ ಅನ್ನೋದು ಬಿಜೆಪಿ ಮೂಲಗಳ ಮಾತು. ಆದ್ರೆ, ಜಗ್ಗೇಶ್ ಇತ್ತೀಚಿನ ದಿನಗಳಲ್ಲಿ ಪಕ್ಷದ ಪರವಾಗಿ ಹೆಚ್ಚಾಗಿ ಗುರುತಿಸಿಕೊಳ್ಳಲಿಲ್ಲ. ಎಲ್ಲೂ ಗದ್ದಲ ಎಬ್ಬಿಸಲಿಲ್ಲ. ಎಲ್ಲೂ ಪಕ್ಷದ ನಿಲುವುಗಳನ್ನೂ ಸಮರ್ಥಿಸಿಕೊಳ್ಳಲಿಲ್ಲ. ತಮ್ಮ ಪಾಡಿಗೆ ತಾವು ಸೈಲೆಂಟ್ ಆಗಿದ್ರು. ಇಷ್ಟಾದ್ರೂ ಜಗ್ಗೇಶ್‌ಗೆ ಟಿಕೆಟ್ ಯಾಕೆ ಅನ್ನೋ ಅಪಸ್ವರ ಮೂಡಿದೆ.
ಪ್ರಮುಖ ಸುದ್ದಿ ಓದಲು ಇದರ ಮೇಲೆ ಕ್ಲಿಕ್ ಮಾಡಿ
ಒಂದು ವೇಳೆ ಒಕ್ಕಲಿಗರ ಕೋಟಾದಲ್ಲೇ ಟಿಕೆಟ್ ನೀಡಿರೋದೇ ಆದ್ರೂ, ಒಕ್ಕಲಿಗರ ಕೋಟಾದಡಿ ಬೇರೆ ನಾಯಕರು ಇರಲಿಲ್ವಾ ಅನ್ನೋ ಮಾತುಗಳು ಬಿಜೆಪಿಯಲ್ಲೇ ಚರ್ಚೆಯಾಗುತ್ತಿದೆ. ಪಕ್ಷಕ್ಕಾಗಿ ದುಡಿದ ಒಕ್ಕಲಿಗರು ಸಾಕಷ್ಟು ಜನ ಇದ್ದಾರೆ ಎಂದು, ಒಕ್ಕಲಿಗ ಪದಾಧಿಕಾರಿಗಳೇ ಅಸಮಾಧಾನ ಹೊರಹಾಕಿದ್ದಾರೆ.