ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ವಿರುದ್ಧ ವಾರಂಟ್ ಜಾರಿಗೊಳಿಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ

2018ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆ ಶಾಸಕ ಅನಿಲ್ ಬೆನಕೆ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿತ್ತು. ಜೂನ್ 27ರಂದು ಶಾಸಕರನ್ನು ಹಾಜರುಪಡಿಸುವಂತೆ ವಾರಂಟ್ ಜಾರಿಗೊಳಿಸಲಾಗಿದೆ.

ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ವಿರುದ್ಧ ವಾರಂಟ್ ಜಾರಿಗೊಳಿಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ
ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ
Follow us
TV9 Web
| Updated By: ಆಯೇಷಾ ಬಾನು

Updated on:May 31, 2022 | 8:41 PM

ಬೆಂಗಳೂರು: ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. 5 ಬಾರಿ ವಾರಂಟ್ ಜಾರಿಗೊಳಿಸಿದರೂ ಹಾಜರುಪಡಿಸದ ಹಿನ್ನೆಲೆ 42ನೇ ಎಸಿಎಂಎಂ ಕೋರ್ಟ್ ನ್ಯಾ.ಜೆ.ಪ್ರೀತ್ ಅಸಮಾಧಾನಗೊಂಡಿದ್ದಾರೆ. ಹಾಗೂ ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರಿಗೆ ವಾರಂಟ್ ಜಾರಿ ವೈಫಲ್ಯಕ್ಕೆ ಕಾರಣ ತಿಳಿಸುವಂತೆ ನೋಟಿಸ್ ನೀಡಲಾಗಿದೆ.

2018ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆ ಶಾಸಕ ಅನಿಲ್ ಬೆನಕೆ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿತ್ತು. ಜೂನ್ 27ರಂದು ಶಾಸಕರನ್ನು ಹಾಜರುಪಡಿಸುವಂತೆ ವಾರಂಟ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಕುಟುಂಬದವರು ಬಲವಂತವಾಗಿ ದೂರ ಮಾಡಿದ್ದ ಲೆಸ್ಬಿಯನ್ ಜೋಡಿ ನೂರಾ- ಆದಿಲಾಳನ್ನು ಒಂದಾಗಿಸಿದ ಕೇರಳ ಹೈಕೋರ್ಟ್

Published On - 8:41 pm, Tue, 31 May 22