‘ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು’ ಹಾಡು ಹೇಳಿ, ಎಲ್ಲರಿಗೂ ಇದೊಂದು ಪದವೇ ಸಾಕು ಎಂದ ನಟ ಜಗ್ಗೇಶ್

| Updated By: ganapathi bhat

Updated on: Mar 28, 2021 | 3:59 PM

ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಸಿನಿಮಾಗಳ ನಿರ್ಮಾಪಕರು. ಡಿ.ಕೆ.ಶಿವಕುಮಾರ್ ನನ್ನನ್ನು ರಾಜಕೀಯಕ್ಕೆ ಕರೆ ತಂದವರು ಎಂದು ನಟ ಜಗ್ಗೇಶ್​ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ್ದಾರೆ.

‘ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು’ ಹಾಡು ಹೇಳಿ, ಎಲ್ಲರಿಗೂ ಇದೊಂದು ಪದವೇ ಸಾಕು ಎಂದ ನಟ ಜಗ್ಗೇಶ್
ನಟ ಜಗ್ಗೇಶ್
Follow us on

ಚಿತ್ರದುರ್ಗ: ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಸಿನಿಮಾಗಳ ನಿರ್ಮಾಪಕರು. ಡಿ.ಕೆ.ಶಿವಕುಮಾರ್ ನನ್ನನ್ನು ರಾಜಕೀಯಕ್ಕೆ ಕರೆ ತಂದವರು. ಎಲ್ಲರೂ ನನಗೆ ಉತ್ತಮ ಸ್ನೇಹಿತರು. ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕತೆಗಿಂತ ವಾಮ ಮಾರ್ಗಗಳೇ ಪ್ರಧಾನ ಎಂದು ನಟ ಜಗ್ಗೇಶ್ ಹೇಳಿಕೆ ನೀಡಿದ್ದಾರೆ.

ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಟ ಜಗ್ಗೇಶ್​ ನಿರಾಕರಿಸಿದ್ದು, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಹಾಡು ಹೇಳಿ ಎಲ್ಲರಿಗೂ ಇದೊಂದು ಪದವೇ ಸಾಕು ಎಂಬುದು ನನ್ನ ಭಾವನೆ. ತಂತ್ರಕ್ಕೆ ಪ್ರತಿತಂತ್ರ ಈವತ್ತಿನ ಸೈದ್ಧಾಂತಿಕ ನೆಲೆಯಲ್ಲಿದೆ. ಹೆಚ್​.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್​ ಇಬ್ಬರೂ ನನಗೆ ಉತ್ತಮ ಸ್ನೇಹಿತರು ಎಂದಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕತೆಗಿಂತ ವಾಮ ಮಾರ್ಗಗಳೇ ಪ್ರಧಾನವಾಗಿವೆ ಎಂದು ಮಾತನಾಡಿದ್ದಾರೆ.

ಇನ್ನು, ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಪೊಲೀಸರನ್ನು ರಾಜಕೀಯವಾಗಿ ನಿಯಂತ್ರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿ.ಎಸ್.ಉಗ್ರಪ್ಪ ಆರೋಪ ಮಾಡಿದ್ದಾರೆ. ನನಗೂ, ಆಕೆಗೆ ಸಂಬಂಧವಿಲ್ಲವೆಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಆರೋಪಿ ರಮೇಶ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಲಿ. ರಾಜ್ಯದ ಮಾನ ಮರ್ಯಾದೆ ಮೂರು ಕಾಸಿಗೆ ಹೋಗಿದೆ. ಇದಕ್ಕೆ ನೇರ ಕಾರಣ ರಾಜ್ಯ ಬಿಜೆಪಿ ಸರ್ಕಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ವಿಜಯ ಮಲ್ಯನೋ ಇಲ್ಲವೇ ನೀರವ್ ಮೋದಿಯೋ?; ವಿಪಕ್ಷ ನಾಯಕ ಸಿದ್ದರಾಮಯ್ಯ

ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್, ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ

Published On - 3:58 pm, Sun, 28 March 21