ಕನ್ನಡ ರಾಜ್ಯೋತ್ಸವ: ಕನ್ನಡಿಗರೂ ಅಭಿಮಾನ ಪಡುವಂತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ

|

Updated on: Nov 01, 2023 | 1:19 PM

ಪೂಜಾಗೆ ಸಂಗೀತ ಉಪಕರಣಗಳ ಬಗ್ಗೆಯೂ ಜ್ಞಾನವಿರುವಂತಿದೆ. ಅವರು ಡೋಲು ಬಾರಿಸುವುದು ನೋಡಿದರೆ ಗೊತ್ತಾಗುತ್ತದೆ. ಕೊನೆಯಲ್ಲಿ ಪೂಜಾ ತನ್ನ ಸಂಗಡಿಗರೊಂದಿಗೆ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳಿಗೆ, ಜೈ ಹಿಂದ್, ಜೈ ಕರ್ನಾಟಕ ಮಾತೆ ಅಂತ ಹೇಳುತ್ತಾರೆ. ಕನ್ನಡತಿ ಪೂಜಾಗೆ ಒಳ್ಳೆಯದಾಗಲಿ.

ಬೆಂಗಳೂರು: ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಈಗ ಪ್ರಬುದ್ಧೆ. ಬೇರೆ ರಾಜ್ಯದಿಂದ ಕರ್ನಾಟಕಕ್ಕೆ (Karnataka) ಬಂದು, ಕನ್ನಡವನ್ನು ಕಲಿತು ಕನ್ನಡ ನೆಲವನ್ನೇ ತನ್ನ ನೆಲೆಮಾಡಿಕೊಂಡು ಕನ್ನಡ ನೆಲ ಜಲದ ಬಗ್ಗೆ ಅತೀವ ಅಭಿಮಾನ ಬೆಳೆಸಿಕೊಂಡು ಬೆಂಗಳೂರಲ್ಲಿ ವಾಸವಾಗಿರುವ ಸುಂದರ ಮಹಿಳೆ. ನಿಮಗೆ ಆಶ್ಚರ್ಯ ಆಗಬಹುದು. ಪೂಜಾ ಈಗ ಕನ್ನಡ ಬರೆಯುವುದನ್ನೂ ಕಲಿತಿದ್ದಾರೆ. ಇಲ್ನೋಡಿ, ಪೂಜಾ ತಾನು ವಾಸವಾಗಿರುವ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನ ಇತರ ಮಹಿಳಾ ನಿವಾಸಿಗಳೊಂದಿಗೆ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಮೊದಲು ಅವರು ಮಹಿಳೆಯರೊಂದಿಗೆ ಕುಣಿಯುತ್ತಾರೆ, ಒಂದೇ ಶೈಲಿಯಲ್ಲಲ್ಲ, ಬಗೆಬಗೆಯ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಾರೆ. ಪೂಜಾಗೆ ಸಂಗೀತ ಉಪಕರಣಗಳ ಬಗ್ಗೆಯೂ ಜ್ಞಾನವಿರುವಂತಿದೆ. ಅವರು ಡೋಲು ಬಾರಿಸುವುದು ನೋಡಿದರೆ ಗೊತ್ತಾಗುತ್ತದೆ. ಕೊನೆಯಲ್ಲಿ ಪೂಜಾ ತನ್ನ ಸಂಗಡಿಗರೊಂದಿಗೆ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳಿಗೆ, ಜೈ ಹಿಂದ್, ಜೈ ಕರ್ನಾಟಕ ಮಾತೆ ಅಂತ ಹೇಳುತ್ತಾರೆ. ಕನ್ನಡತಿ ಪೂಜಾಗೆ ಒಳ್ಳೆಯದಾಗಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 01, 2023 01:16 PM