ಸಚಿವ ಸ್ಥಾನ ಬೇಕೆನ್ನುವವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಶಾಸಕ ರವಿ ಗಣಿಗಗೆ ಬಿಜೆಪಿ ಆಫರ್ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನನ್ನನ್ನೂ ಕೊಂಡುಕೊಳ್ಳುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ. ಈ ವಿಚಾರವಾಗಿ ನನ್ನ ಬಳಿ ಯಾರಾದರೂ ಮಾತನಾಡಿದರೆ ಅವರ ಬೀಜ ಕೊಯ್ಯುವೆ. ಕೋಲಾರಮ್ಮ ಆಣೆಗೂ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ ನ.01: ಕಾಂಗ್ರೆಸ್ನಲ್ಲಿ (Congress) ಸಚಿವ ಸ್ಥಾನಕ್ಕೆ ಲಾಭಿ ಹೆಚ್ಚಿದೆ. ಸಚಿವ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kotturu Manjunath) ಸ್ವಪಕ್ಷದ ಶಾಸಕರಿಗೆ ತಿರುಗೇಟು ನೀಡಿದ್ದಾರೆ. ಸಚಿವ ಸ್ಥಾನ ಬೇಕೆನ್ನುವವರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ. ಜನರು ನಮ್ಮನ್ನು ಗೆಲ್ಲಿಸಿರುವುದು ಅವರ ಸೇವೆ ಮಾಡುವುದಕ್ಕಾಗಿ ಎಂದು ಗರಂ ಆಗಿದ್ದಾರೆ.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು 136 ಶಾಸಕರಿದ್ದೇವೆ, ನಮ್ಮ ಸರ್ಕಾರ ಬೀಳಿಸಲು ಆಗುವುದಿಲ್ಲ. ಅಂತಹ ಕನಸು ಯಾರೂ ಕಾಣುವುದು ಬೇಡ, ಸ್ಟ್ರಾಂಗ್ ಆಗಿ ಇದ್ದೇವೆ. ಆಪರೇಷನ್ ಕಮಲನೂ ಇಲ್ಲ, ಮರನೂ ಇಲ್ಲ, ಗಿಡವೂ ಇಲ್ಲ. ಸರ್ಕಾರ ಪತನಗೊಳಿಸುವ ಹೇಳಿಕೆ ಕೇವಲ ಊಹಾಪೋಹ ಅಷ್ಟೇ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ, ಶಾಸಕ ಖಡಕ್ ಎಚ್ಚರಿಕೆ
ನನ್ನ ಬಳಿ ಯಾರಾದರೂ ಮಾತನಾಡಿದರೆ ಅವರ ಬೀಜ ಕೊಯ್ಯುವೆ
ಶಾಸಕ ರವಿ ಗಣಿಗಗೆ ಬಿಜೆಪಿ ಆಫರ್ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನನ್ನನ್ನೂ ಕೊಂಡುಕೊಳ್ಳುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ. ಈ ವಿಚಾರವಾಗಿ ನನ್ನ ಬಳಿ ಯಾರಾದರೂ ಮಾತನಾಡಿದರೆ ಅವರ ಬೀಜ ಕೊಯ್ಯುವೆ. ಕೋಲಾರಮ್ಮ ಆಣೆಗೂ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ನಮ್ಮ ಪಕ್ಷದವರು ಯಾರೂ ಸಿಎಂ ಬದಲಾವಣೆ ವಿಚಾರ ಎತ್ತುತ್ತಿಲ್ಲ. ಮೂವರಿಗೆ ಮಾತ್ರ ಸಿಎಂ ಬದಲಾವಣೆ ಮಾಡುವ ಶಕ್ತಿ ಇರುವುದು. ಅದು ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಸಿಎಂ ಬದಲಾವಣೆ ಮಾಡುವ ಶಕ್ತಿ ಇದೆ.ಆದರೆ ಸಿಎಂ ಬದಲಾವಣೆ ಅನ್ನೋದು ಸುಳ್ಳು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ