ಬೆಂಗಳೂರು: ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣ ಇಂದು ನಗರದಲ್ಲಿ ಸಭೆಯೊಂದನ್ನು ನಡೆಸಿದರು
ಕೇಂದ್ರ ಸಚಿವ ಸೋಮಣ್ಣ ಗಂಭೀರ ಸ್ವಭಾವದವರ ಹಾಗೆ ಗೋಚರಿಸಿದರೂ ಜೋಕ್ ಗಳನ್ನು ಕಟ್ ಮಾಡುತ್ತಾ ಜೊತೆಗಿರುವವರನ್ನು ನಗಿಸುತ್ತಿರುತ್ತಾರೆ. ಇವತ್ತಿನ ಸಭೆಯಲ್ಲಿ ಪಕ್ಷದ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಸಭೆ ಶುರುವಾಗುವ ಮೊದಲೇ ಹೊರಗೆ ಹೋಗಲು ಪ್ರಯತ್ನಿಸಿದಾಗ ಸೋಮಣ್ಣ, ಡಾಕ್ಟ್ರೇ, ನಾನು ಇಲ್ಲಿರುವವರೆಗೆ ನೀವು ಹೋಗುವಂತಿಲ್ಲ ಅಂತ ಹೇಳಿ ಇದು ನನ್ನ ರಿಕ್ವೆಸ್ ಎನ್ನುತ್ತಾರೆ!
ಬೆಂಗಳೂರು: ಕೇಂದ್ರದಲ್ಲಿ ಜಲಶಕ್ತಿ ಮತ್ತು ರೇಲ್ವೇ ಖಾತೆಯ ರಾಜ್ಯ ಸಚಿವರಾಗಿರುವ ವಿ ಸೋಮಣ್ಣ ಇಂದು ನಗರದ ಖಾಸಗಿ ಹೋಟೆಲೊಂದರಲ್ಲಿ ಕರ್ನಾಟಕದ ಸರ್ಕಾರದ ಕೆಲ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿದರು. ವಯಸ್ಸು 72ಆಗಿದ್ದರೂ ಸೋಮಣ್ಣ ಉತ್ಸಾಹ ಮತ್ತು ಲವಲವಿಕೆಯಿಂದ ಬೀಗುತ್ತಿದ್ದಾರೆ. ನಿನ್ನೆ 18ನೇ ಲೋಕಸಭೆಯ ಅಧಿವೇಶನದಲ್ಲಿ ಭಾಗವಹಿಸಿದ್ದ ಅವರು ರಾತ್ರಿ ಬೆಂಗಳೂರಿಗೆ ಬಂದು ಇಂದು ಸಭೆ ಕರೆದಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾಗಿರುವ ರಾಮಲಿಂಗಾರೆಡ್ಡಿ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಡಾ ಸಿಎನ್ ಅಶ್ವಥ್ ನಾರಾಯಣ, ಎಸ್ ಟಿ ಸೋಮಶೆಖರ್, ಶಾಸಕರಾಗಿರುವ ಮುನಿರತ್ನ, ಮಂಜುನಾಥ ಮತ್ತು ಇನ್ನೂ ಹಲವಾರು ಗಣ್ಯರು ಮತ್ತು ಅಧಿಕಾರಿ ವರ್ಗ ಭಾಗವಹಿಸಿದ್ದರು. ಮೀಟಿಂಗ್ ಅಜೆಂಡಾ ಏನು ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೆಟ್ರೋಲ್ ಬೆಲೆ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸಿದೆ: ವಿ ಸೋಮಣ್ಣ, ಕೇಂದ್ರ ಸಚಿವ