ನಾನು ಬಾಯಿ ಮುಚ್ಚಿಕೊಂಡು ಇರಲ್ಲ: ಡಿಕೆ ಶಿವಕುಮಾರ್​ ವಾರ್ನಿಂಗ್​ಗೆ​​ ಸಚಿವ ರಾಜಣ್ಣ ಡೋಂಟ್ ಕೇರ್

ರಾಜ್ಯದಲ್ಲಿಗ ಡಿಸಿಎಂ ವಾರ್ ದೆಹಲಿ ಅಂಗಳಕ್ಕೆ ತಲುಪಿದ್ದು, ಅತ್ತ ಹೈಕಮಾಂಡ್ ಎಲ್ಲಾ ನಾಯಕರಿಗೂ ಸುಮ್ಮನಿರಿ ಎನ್ನುತ್ತಿದೆ. ಡಿಕೆ ಶಿವಕುಮಾರ್​ ಕೂಡ ಆ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸಚಿವ ಕೆ.ಎನ್​ ರಾಜಣ್ಣ ಮಾತ್ರ ಡೋಂಟ್​ಕೇರ್ ಎಂದಿದ್ದಾರೆ. ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ ಎಂದು ಕಿಡಿಕಾರಿದ್ದಾರೆ.

ನಾನು ಬಾಯಿ ಮುಚ್ಚಿಕೊಂಡು ಇರಲ್ಲ: ಡಿಕೆ ಶಿವಕುಮಾರ್​ ವಾರ್ನಿಂಗ್​ಗೆ​​ ಸಚಿವ ರಾಜಣ್ಣ ಡೋಂಟ್ ಕೇರ್
ನಾನು ಬಾಯಿ ಮುಚ್ಚಿಕೊಂಡು ಇರಲ್ಲ: ಡಿಕೆ ಶಿವಕುಮಾರ್​ ವಾರ್ನಿಂಗ್​ಗೆ​​ ಸಚಿವ ರಾಜಣ್ಣ ಡೋಂಟ್ ಕೇರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 29, 2024 | 3:09 PM

ಬೆಂಗಳೂರು, ಜೂನ್​ 29: ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿರುವ ಹೆಚ್ಚುವರಿ ಡಿಸಿಎಂ (DCM) ಗುದ್ದಾಟದ ತೀವ್ರತೆ ಹೆಚ್ಚುತ್ತಲೇ ಇದೆ. ಚುನಾವಣೆಗೆ ಮೊದಲೇ ಶುರುವಾಗಿದ್ದ ಹೆಚ್ಚುವರಿ ಡಿಸಿಎಂ ಬೇಡಿಕೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಹೊಸ ಹೊಸ ಆಯಾಮ ತೆಗೆದುಕೊಳುತ್ತಿದೆ. ಈ ಮಧ್ಯೆ ಡಿಸಿಎಂ ಬಗ್ಗೆ ಹೇಳಿಕೆ ನೀಡದಂತೆ ಡಿಕೆ ಶಿವಕುಮಾರ್ (DK Shivakumar)​​ ವಾರ್ನಿಂಗ್​ ನೀಡಿದರೂ ಸಚಿವ ಕೆ.ಎನ್​ ರಾಜಣ್ಣ ಡೋಂಟ್​ಕೇರ್ ಎಂದಿದ್ದಾರೆ. ನೋಟಿಸ್​ ಕೊಡಲಿ ಬಿಡಿ, ಕೊಟ್ಮೇಲೆ ನಾನು ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೇಳಿದರೆ ಏನು ತಪ್ಪಾಗುತ್ತೆ. ವಾರ್ನಿಂಗ್​​ಗೆಲ್ಲಾ ನಾನು ಕೇಳುತ್ತೇನಾ. ಬಾಯಿಗೆ ಎಲ್ಲರೂ ಬೀಗ ಹಾಕಿಕೊಳ್ಳಬೇಕು. ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಬಗ್ಗೆ ಮಾತನಾಡಿದ್ರೆ ನೋಟಿಸ್, ಬಾಯಿಗೆ ಬೀಗ ಹಾಕೊಂಡಿರಿ: ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

ಸ್ವಾಮಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗುತ್ತಾ? ಎಲ್ಲರೂ ಸುಮ್ಮನೆ ಇದ್ರೆ ನಾನೂ ಸುಮ್ಮನೆ ಇರುತ್ತೇನೆ. ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ರೆ ಸುಮ್ಮನಿರಬೇಕಾ? ಸ್ವಾಮೀಜಿಗಳು ಹೇಳೋದನ್ನು ಕೇಳೋದಕ್ಕೆ ಆಗುತ್ತಾ ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ಸ್ವಾಮೀಜಿ ಹೇಳಿರೋದು ಪ್ರಜಾಪ್ರಭುತ್ವಕ್ಕೆ ಅವಮಾನ

ಶಾಮನೂರು ಶಿವಶಂಕರಪ್ಪ ಮಾಡಿ ಅಂತಾ ಶ್ರೀಗಳು ಕೇಳುತ್ತಾರೆ. ಸತೀಶ್ ಜಾರಕಿಹೊಳಿ ಮಾಡಿ ಅಂತಾ ಅವ್ರ ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿ ಹೇಳಿರೋದು ಪ್ರಜಾಪ್ರಭುತ್ವಕ್ಕೆ ಅವಮಾನ. ನಾನು ಸಿಎಂ ಪರ ಅಂತಲ್ಲ, ನಾನು ಪ್ರಜಾಪ್ರಭುತ್ವ ಪರ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರಂತೆ!

ನಾನು ಹಗರಣ ಮಾಡಿದರೆ ತನಿಖೆ ಮಾಡಲಿ. ಬಡವರ ಪರ ಸಿಎಂ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ. ಅದಕ್ಕೆ ಸಿದ್ದರಾಮಯ್ಯರ ಜೊತೆ ನಾವಿದ್ದೇವೆ. ಸಂಸದರಾಗಿ ಡಿ.ಕೆ.ಸುರೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ. ಪರಿಣಾಮಕಾರಿಯಾಗಿ ಕೆಲಸ ಮಾಡಿರುವವರಲ್ಲಿ ಪ್ರಮುಖರು. ಯಾರು ಸೋಲಿಸಿದ್ದು, ಸ್ವಾಮೀಜಿಗಳು ಒಂದಾಗಿ ಅವರನ್ನು ಸೋಲಿಸಿದ್ದರು. ದೇವೇಗೌಡರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು. ಯಾರನ್ನ ಸಿಎಂ ಮಾಡಬೇಕೆಂದು ವರಿಷ್ಠರು, ಶಾಸಕರು ನಿರ್ಧರಿಸುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ