ರೇಪ್ ಆಸ್ವಾದಿಸುವ ಹೇಳಿಕೆ: ಡಬಲ್ ಫಾಲ್ಟ್ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಬೆಳಗಾವಿಯಲ್ಲಿ ಹೇಳಿದ್ದೇನು?
ಸುವರ್ಣ ಸೌಧದಲ್ಲಿ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಮಾತನಾಡಿದ್ದು ಎಂಇಎಸ್ ಕಿಡಿಗೇಡಿತನ ವಿಚಾರವಾಗಿ ಪ್ರತಿಕ್ರಿಯಿಸದೆ ‘ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ. ನೀವು ಜೀವಂತವಾಗಿರುವವನ್ನು ಮಾತನಾಡಿಸಿ ಎಂದು ಕೈಮುಗಿದು ವಿಧಾನಸೌಧದೊಳಕ್ಕೆ ತೆರಳಿದರು.
ಬೆಳಗಾವಿ: ಅತ್ಯಾಚಾರ ಅನಿವಾರ್ಯವಾದಾಗ ಅನುಭವಿಸಿ- ವೆನ್ ರೇಪ್ ಈಸ್ ಇನ್ಎವಿಟಬಲ್ ಎಂಜಾಯ್ ಇಟ್ ಎಂಬ ಭಾವಲಹರಿಯಲ್ಲಿ ಡಬಲ್ ಫಾಲ್ಟ್ ಮಾಡಿ ( double fault) ದಣಿಸಿರುವ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ (former speaker) ಕೆ ಆರ್ ರಮೇಶ್‌ಕುಮಾರ್ (k r ramesh kumar) ಪ್ರಕರಣದಲ್ಲಿ (rape statement) ಬಸವಳಿದಂತೆ ಕಂಡುಬಂದಿದ್ದಾರೆ. ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಎಂಇಎಸ್ ಕಿಡಿಗೇಡಿತನದ ವಿಚಾರವಾಗಿ ಸುದ್ದಿಗಾರರು ರಮೇಶ್‌ಕುಮಾರ್ ಅವರ ಪ್ರತಿಕ್ರಿಯೆ ಕೇಳಬಯಸಿದಾಗ ‘ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ, ಜೀವಂತವಾಗಿರುವವರನ್ನು ಮಾತಾಡಿಸಿ‘ ಎಂದು ಮಾಧ್ಯಮಗಳಿಗೆ ಕೈಮುಗಿದು, ಕಾಂಗ್ರೆಸ್ ಶಾಸಕ ರಮೇಶ್‌ಕುಮಾರ್ ಸುವರ್ಣಸೌಧದೊಳಕ್ಕೆ (belagavi) ತೆರಳಿದರು.
ಸುವರ್ಣ ಸೌಧದಲ್ಲಿ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಮಾತನಾಡಿದ್ದು ಎಂಇಎಸ್ ಕಿಡಿಗೇಡಿತನ ವಿಚಾರವಾಗಿ ಪ್ರತಿಕ್ರಿಯಿಸದೆ ‘ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ. ನೀವು ಜೀವಂತವಾಗಿರುವವನ್ನು ಮಾತನಾಡಿಸಿ ಎಂದು ಕೈಮುಗಿದು ವಿಧಾನಸೌಧದೊಳಕ್ಕೆ ತೆರಳಿದರು.
2016ರಲ್ಲೇ ಕಾಯಿದೆ ಜಾರಿಗೆ ಕಾಂಗ್ರೆಸ್ ಮುಂದಾಗಿತ್ತು- ಸಿಎಂ ಬೊಮ್ಮಾಯಿ ಹೊಸ ಬಾಂಬ್ ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಸದನದಲ್ಲಿ ವಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ ಪ್ರತ್ಯಸ್ತ್ರ ಸಿದ್ದಪಡಿಸಿಟ್ಟುಕೊಂಡಿರುವ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಹಿಂದಿನ ಸರಕಾರವೇ ಕಾಯಿದೆ ತರಲು ಹೊರಟಿತ್ತು, ವಿಧೇಯಕ ಸಿದ್ಧಪಡಿಸಲು ಅಗತ್ಯವಿರುವ ಪ್ರಕ್ರಿಯೆಯನ್ನು ಸಿದ್ಧರಾಮಯ್ಯ ಸರಕಾರ ಮಾಡಿತ್ತು, ಕಾನೂನು ಇಲಾಖೆಯ ಮೂಲಕವೇ ವಿಧೇಯಕ ಕುರಿತು ತಯಾರಿ ನಡೆದಿತ್ತು, ಹಿಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಕುರಿತು ಸಿದ್ಧತೆ ಮಾಡಿದ್ದರು ಎಂದು ವಿಧಾನಸಭೆಯಲ್ಲಿ ದಾಖಲೆ ಮುಂದಿಡಲು ರಾಜ್ಯ ಸರಕಾರದ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರದ ಈ ನಡೆಯು ವಿಪಕ್ಷ ಕಾಂಗ್ರೆಸ್ ನಲ್ಲಿ ಸಂಚಲನವನ್ನುಂಟುಮಾಡಿದೆ.
2016 ರಲ್ಲಿ ಕಾಯಿದೆ ಜಾರಿ ಮಾಡಲು ತಮ್ಮ ಸರಕಾರ ತಯಾರಿ ಮಾಡಿತ್ತೇ? ವಿಧೇಯಕ ಸಿದ್ಧಪಡಿಸಲು ಕಾನೂನು ಇಲಾಖೆ ಮುಂದಾಗಿತ್ತೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆದೇಶಿಸಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ತಪ್ಪು ಮಾಹಿತಿಯನ್ನು ಸದನದ ಮುಂದಿಟ್ಟರೆ ಹೋರಾಟ ಮಾಡಲು ಕಾಂಗ್ರೆಸ್ ಪ್ಲಾನ್ ಹಾಕಿಕೊಂಡಿದೆ. ಈ ಮಧ್ಯೆ ನಗರದಲ್ಲಿ ರಾಜ್ಯ ವಿಧಾನ ಮಂಡಳ ಚಳಿಗಾಲದ ಜಂಟಿ ಅಧಿವೇಷನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವ ಹಿಂದೂ ಪರಿಷತ್ ಮಠಾಧೀಶರ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸುಮಾರು 40 ಸ್ವಾಮೀಜಿಗಳು ಮತಾಂತರ ಕಾಯ್ದೆ ಮಂಡಿಸುವಂತೆ ಒಕ್ಕೂರಲಿನಿಂದ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು.
ಇದನ್ನೂ ಓದಿ:
Published On - 10:35 am, Mon, 20 December 21