ನಾಳೆಯಿಂದ ಪುನರಾರಂಭವಾಗಲಿವೆ ಪದವಿ ಕಾಲೇಜುಗಳು, ಹೇಗಿದೆ ಸಿದ್ಧತೆ..

ಬೆಂಗಳೂರು: ಕಾಲೇಜು ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದ್ದು ನಾಳೆಯಿಂದ ರಾಜ್ಯದಲ್ಲಿ ಕಾಲೇಜುಗಳು ರೀ-ಓಪನ್ ಆಗಲಿವೆ. 8 ತಿಂಗಳಿಂದ ಬಂದ್ ಆಗಿದ್ದ ತರಗತಿಗಳ ಪ್ರಾರಂಭಕ್ಕೆ ಭರ್ಜರಿ ತಯಾರಿ ನಡೀತಿದೆ. ಕಾಲೇಜುಗಳಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ? ಕೊರೊನಾ ತಡೆಯೋಕೆ ಏನೆಲ್ಲಾ ಕಸರತ್ತು ಮಾಡಲಾಗ್ತಿದೆ ಅನ್ನೋದ್ರ ರಿಪೋರ್ಟ್ ‌ಇಲ್ಲಿದೆ. ಡೆಡ್ಲಿ ವೈರಸ್ ಕಾಲಿಟ್ಟಿದ್ದೇ ಇಟ್ಟಿದ್ದು.. ಎಲ್ಲವೂ ಬಂದ್ ಆಗಿತ್ತು. ದೇಶಕ್ಕೆ ದೇಶವೇ ಸ್ತಬ್ಧವಾಗಿತ್ತು. ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯವನ್ನ ಕೊರೊನಾ ಕಿತ್ತು ಕೊಂಡಿತ್ತು. ಹೆಮ್ಮಾರಿಯ ನರ್ತನಕ್ಕೆ ಶಾಲಾ-ಕಾಲೇಜುಗಳಿಗೆ ಬೀಗ ಬಿದ್ದಿತ್ತು. ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು […]

ನಾಳೆಯಿಂದ ಪುನರಾರಂಭವಾಗಲಿವೆ ಪದವಿ ಕಾಲೇಜುಗಳು, ಹೇಗಿದೆ ಸಿದ್ಧತೆ..

Updated on: Nov 23, 2020 | 12:48 PM

ಬೆಂಗಳೂರು: ಕಾಲೇಜು ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದ್ದು ನಾಳೆಯಿಂದ ರಾಜ್ಯದಲ್ಲಿ ಕಾಲೇಜುಗಳು ರೀ-ಓಪನ್ ಆಗಲಿವೆ. 8 ತಿಂಗಳಿಂದ ಬಂದ್ ಆಗಿದ್ದ ತರಗತಿಗಳ ಪ್ರಾರಂಭಕ್ಕೆ ಭರ್ಜರಿ ತಯಾರಿ ನಡೀತಿದೆ. ಕಾಲೇಜುಗಳಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ? ಕೊರೊನಾ ತಡೆಯೋಕೆ ಏನೆಲ್ಲಾ ಕಸರತ್ತು ಮಾಡಲಾಗ್ತಿದೆ ಅನ್ನೋದ್ರ ರಿಪೋರ್ಟ್ ‌ಇಲ್ಲಿದೆ.

ಡೆಡ್ಲಿ ವೈರಸ್ ಕಾಲಿಟ್ಟಿದ್ದೇ ಇಟ್ಟಿದ್ದು.. ಎಲ್ಲವೂ ಬಂದ್ ಆಗಿತ್ತು. ದೇಶಕ್ಕೆ ದೇಶವೇ ಸ್ತಬ್ಧವಾಗಿತ್ತು. ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯವನ್ನ ಕೊರೊನಾ ಕಿತ್ತು ಕೊಂಡಿತ್ತು. ಹೆಮ್ಮಾರಿಯ ನರ್ತನಕ್ಕೆ ಶಾಲಾ-ಕಾಲೇಜುಗಳಿಗೆ ಬೀಗ ಬಿದ್ದಿತ್ತು. ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಕಾಲೇಜು ಶುರುವಾದ್ರೆ ಸಾಕು ಅಂತಿದ್ರು. ಈಗ 8 ತಿಂಗಳಿಂದ ಹಾಕಿದ್ದ ಬೀಗ ಓಪನ್ ಆಗುವ ಸಮಯ ಬಂದಿದೆ. ಕಾಲೇಜುಗಳ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ.

ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಕಡ್ಡಾಯ
ಕೊರೊನಾದಿಂದ ಶಾಲಾ-ಕಾಲೇಜುಗಳ ಬಾಗಿಲು ಕ್ಲೋಸ್​ ಆಗಿತ್ತು. ಈಗ, ಎಂಟು ತಿಂಗಳ ಬಳಿಕ, ಪದವಿ ಕಾಲೇಜುಗಳು ಪುನಾರಂಭ ಆಗ್ತಿವೆ. ನವೆಂಬರ್​ 17 ಅಂದ್ರೆ ನಾಳೆಯಿಂದ ತರಗತಿಗಳು ಶುರುವಾಗಲಿದ್ದು, ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.

ಸದ್ಯ, ಪ್ರಾಯೋಗಿಕವಾಗಿ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳನ್ನ ನಡೆಸಲಾಗುತ್ತೆ. ಇದಕ್ಕಾಗಿ, ಟೀಚಿಂಗ್ ಹಾಗೂ ನಾನ್ ಟೀಚಿಂಗ್ ಸ್ಟಾಫ್​ಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗ್ತಿದೆ. ಕೆಲ ಕಾಲೇಜುಗಳಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತವಾಗಿ ಕೊವಿಡ್ ಟೆಸ್ಟ್​ ಮಾಡಿಸಲಾಗ್ತಿದೆ.

ಇನ್ನು, ಕ್ಲಾಸ್​ ಶುರುವಾದ್ರೂ, ಲೈಬ್ರರಿ, ಕ್ಯಾಂಟೀನ್​ಗಳು ಸದ್ಯಕ್ಕೆ ಓಪನ್​ ಆಗಲ್ಲ. ತರಗತಿಗಳಿಗೆ ಹಾಜರಾಗೋಕೆ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರವನ್ನೂ ಕಡ್ಡಾಯವಾಗಿ ಪಡೆಯಬೇಕು.

ದೀಪಾವಳಿಗೆ ಸಾಲು ಸಾಲು ರಜೆ ಇಂದು ತಯಾರಿ!
ವಿದ್ಯಾರ್ಥಿಗಳು ದೀಪಾವಳಿ ಹಬ್ಬ ಮುಗಿಸಿ ನಾಳೆಯಿಂದ ಕಾಲೇಜು ಮೆಟ್ಟಿಲು ಹತ್ತೋದಕ್ಕೆ ರೆಡಿಯಾಗಿದ್ದಾರೆ. ಆದ್ರೆ ಸಾಲು ಸಾಲು ರಜೆ ಇದ್ದಿದ್ರಿಂದ ಸಾಕಷ್ಟು ಜಿಲ್ಲೆಗಳಲ್ಲಿ ಕಾಲೇಜ್‌ ಓಪನ್‌ಗೆ ತಯಾರಿ ನಡೆದಿಲ್ಲ. ಹೀಗಾಗಿ ನಾಳೆಯಿಂದ ಕಾಲೇಜು ತೆರೆಯಲು ಇಂದು ಎಲ್ಲ ತಯಾರಿಗಳನ್ನ ಮಾಡಲಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆಯಾ ಕಾಲೇಜುಗಳು ಕ್ರಮ ಕೈಗೊಳ್ಳಲಿವೆ. ಒಟ್ನಲ್ಲಿ, ಕೊರೊನಾ ತಗ್ಗುತ್ತಿದ್ದಂತೆ ಕಾಲೇಜುಗಳನ್ನ ತೆರೆಯಲು ಸರ್ಕಾರ ಮುಂದಾಗ್ತಿದೆ. ಸರ್ಕಾರದ ಈ ಪ್ರಾಯೋಗಿಕ ಹೆಜ್ಜೆ ಎಷ್ಟರ ಮಟ್ಟಿಗೆ ವರ್ಕೌಟ್​ ಆಗುತ್ತೆ ಅಂತಾ ಕಾದು ನೋಡ್ಬೇಕಿದೆ.

Published On - 8:48 am, Mon, 16 November 20