
ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್‌ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಇದ್ದ ಏರಿಯಾ ಸೀಲ್‌ಡೌನ್ ಮಾಡಲಾಗಿದೆ. ಏರಿಯಾದಲ್ಲಿ ಯಾರೂ ಓಡಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಏರಿಯಾವನ್ನ ಕಂಟೇನ್ಮೆಂಟ್ ಜೋನ್ ಮಾಡಿ, ಕಬ್ಬಿಣದ ಶೀಟ್ಗಳನ್ನ ಹಾಕಿ ಸೀಲ್ ಮಾಡಲಾಗಿದೆ. ಈಗಾಗಲೇ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ 38 ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಹೋಟೆಲ್ ಕ್ವಾರಂಟೈನ್ ಮಾಡಲಾಗಿದ್ದು, ದ್ವಿತೀಯ ಸಂಪರ್ಕದಲ್ಲಿದ್ದ 19 ಜನರಿಗೆ ಹೋಂ ಕ್ವಾರಂಟೈನ್ ಮಾಡಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ ಇಮ್ರಾನ್ ಪಾಷಾ ಹೆಂಡತಿ, ಇಬ್ಬರು ಮಕ್ಕಳು, ಮಾವ, ಅತ್ತೆ ಇದ್ದಾರೆ.
Published On - 7:46 am, Sun, 31 May 20