ಲಸಿಕೆ ಪಡೆಯೋದಕ್ಕೆ ನಾವು ಬೇಕು.. ಸಂಬಳ ಮಾತ್ರ ಹೆಚ್ಚಿಸಲ್ಲ: ಡಿ ಗ್ರೂಪ್​ ನೌಕರರ ಅಳಲು

| Updated By: ಸಾಧು ಶ್ರೀನಾಥ್​

Updated on: Jan 16, 2021 | 1:43 PM

ನಾವು ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮಗೆ ಸಂಬಳ ಹೆಚ್ಚಿಸಲು ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಕೊರೊನಾ ಲಸಿಕೆ ನೀಡೋದಕ್ಕೆ ನಮ್ಮನ್ನೇ ಆಯ್ಕೆ ಮಾಡಿರುವ ಹಿಂದಿನ ಉದ್ದೇಶವೇನು? ನಮ್ಮ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಸಂಬಳವನ್ನೂ ಹೆಚ್ಚಿಸಬೇಕಲ್ವಾ?

ಲಸಿಕೆ ಪಡೆಯೋದಕ್ಕೆ ನಾವು ಬೇಕು.. ಸಂಬಳ ಮಾತ್ರ ಹೆಚ್ಚಿಸಲ್ಲ: ಡಿ ಗ್ರೂಪ್​ ನೌಕರರ ಅಳಲು
ಸಂಬಳ ಹೆಚ್ಚಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿ ಗ್ರೂಪ್​ ನೌಕರರು
Follow us on

ಕೊಡಗು: ಕೊರೊನಾ ಲಸಿಕೆ ಪಡೆಯುವುದಕ್ಕೆ ಮಾತ್ರ ನಾವು ಬೇಕು. ಆದರೆ, ಸಂಬಳ ಹೆಚ್ಚಿಸೋಕೆ ಮನಸ್ಸು ಮಾಡೋದಿಲ್ಲ ಎಂದು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ಪಡೆದ ಡಿ ಗ್ರೂಪ್​ ನೌಕರರು ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಲಸಿಕೆ ನೀಡೋದಕ್ಕೆ ನಮ್ಮನ್ನೇ ಆಯ್ಕೆ ಮಾಡಿರುವ ಹಿಂದಿನ ಉದ್ದೇಶವೇನು? ನಮ್ಮ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಸಂಬಳವನ್ನೂ ಹೆಚ್ಚಿಸಬೇಕಲ್ವಾ? ಎಂದು ಸರ್ಕಾರವನ್ನು ಪ್ರಶ್ನಸಿದ್ದಾರೆ.

ನಾವು ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮಗೆ ಸಂಬಳ ಹೆಚ್ಚಿಸಲು ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಕೊರೊನಾ ಲಸಿಕೆಯನ್ನು ನಮಗೆ ಮೊದಲು ನೀಡೋ ಮೂಲಕ ಕಾಳಜಿ ತೋರಿಸುತ್ತಿರುವುದಾಗಿ ಸರ್ಕಾರ ಹೇಳಿದೆ. ಆದರೆ, ನಿಜವಾಗಿಯೂ ಕಾಳಜಿ ಇದ್ದರೆ ಸಂಬಳ ಹೆಚ್ಚಿಸಲಿ ಎಂದು ಡಿ ಗ್ರೂಪ್​ ನೌಕರರು ಲಸಿಕೆ ಪಡೆದ ನಂತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೌರ ಕಾರ್ಮಿಕರಿಗೆ ಮೊದಲ ಲಸಿಕೆ: ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ! ಅಪಸ್ವರ ತೆಗೆದ ಯು.ಟಿ. ಖಾದರ್