ಲಸಿಕೆ ಪಡೆಯಲು ಹಿಂದೇಟು ಹಾಕಿದ್ದ ನರ್ಸ್ಗೆ ತಿಳಿಯಹೇಳಿ, ಮನವೊಲಿಸಿದ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು
ಸಚಿವರು ತಿಳಿಹೇಳಿದ ಬಳಿಕ ನರ್ಸ್ ಚಿಕ್ಕಮ್ಮ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ಬಳಿಕ, ಚಿಕ್ಕಮ್ಮ ಅವರನ್ನು ಶಾಲು, ಹೂಹಾರ ಹಾಕಿ ಸನ್ಮಾನಿಸಲಾಗಿದೆ.

ಚಿತ್ರದುರ್ಗ: ಕೊವಿಡ್ ಲಸಿಕೆ ಪಡೆಯುವುದಕ್ಕೆ ಹಿಂಜರಿಕೆ ಪಟ್ಟಿದ್ದ ನರ್ಸ್ ಚಿಕ್ಕಮ್ಮ ಎಂಬವರನ್ನು ಮಾಜಿ ಆರೋಗ್ಯ ಸಚಿವ, ಹಾಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮನವೊಲಿಸಿ, ಲಸಿಕೆ ಪಡೆಯಲು ತಿಳಿಯಹೇಳಿದ್ದಾರೆ. ನಗರದ ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಘಟನೆ ನಡೆದಿದೆ. ಲಸಿಕೆ ಪಡೆಯುವ ಬಗ್ಗೆ ಗೊಂದಲದಲ್ಲಿದ್ದ ಸ್ಟಾಫ್ ನರ್ಸ್ ಮನವೊಲಿಸಲು ಶ್ರೀರಾಮುಲು ಯಶಸ್ವಿಯಾಗಿದ್ದಾರೆ.
ಸಚಿವರು ತಿಳಿಹೇಳಿದ ಬಳಿಕ ನರ್ಸ್ ಚಿಕ್ಕಮ್ಮ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ಬಳಿಕ, ಚಿಕ್ಕಮ್ಮ ಅವರನ್ನು ಶಾಲು, ಹೂಹಾರ ಹಾಕಿ ಸನ್ಮಾನಿಸಲಾಗಿದೆ. ಸ್ಥಳದಲ್ಲಿ ಸಚಿವ ಶ್ರೀರಾಮುಲು, ವೈದ್ಯಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

ನರ್ಸ್ ಚಿಕ್ಕಮ್ಮ ಚಿತ್ರದುರ್ಗದಲ್ಲಿ ಕೊರೊನಾ ಲಸಿಕೆ ಪಡೆದರು

ಚಿಕ್ಕಮ್ಮ ಅವರನ್ನು ಸನ್ಮಾನಿಸಲಾಯಿತು
ಲಸಿಕೆ ಪಡೆಯೋದಕ್ಕೆ ನಾವು ಬೇಕು.. ಸಂಬಳ ಮಾತ್ರ ಹೆಚ್ಚಿಸಲ್ಲ: ಡಿ ಗ್ರೂಪ್ ನೌಕರರ ಅಳಲು
Published On - 2:53 pm, Sat, 16 January 21




