ದೇವನಹಳ್ಳಿ: ವಾಯುವಿಹಾರಕ್ಕೆ ತೆರಳಿದ್ದ ವೃದ್ಧನ ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ನೆನ್ನೆ ಸಂಜೆ ಪಟ್ಟಣದ ಹೊರವಲಯದ ಪ್ರಸನ್ನಹಳ್ಳಿ ಬಳಿ ವೃದ್ದ ವಾಕಿಂಗ್​ಗೆ ತೆರಳಿದ್ದರು. ಈ ವೇಳೆ ಕಿಡಿಗೇಡಿಗಳು ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ವೃದ್ದನನ್ನು ಹತ್ಯೆಮಾಡಿದ್ದಾರೆ.

ದೇವನಹಳ್ಳಿ: ವಾಯುವಿಹಾರಕ್ಕೆ ತೆರಳಿದ್ದ ವೃದ್ಧನ ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
ಕೊಲೆಯಾದ ನಾಗರಾಜುಮೂರ್ತಿ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Jan 16, 2021 | 1:35 PM

ದೇವನಹಳ್ಳಿ: ವಾಯುವಿಹಾರಕ್ಕೆ ತೆರಳಿ ನಾಪತ್ತೆಯಾಗಿದ್ದ ವೃದ್ಧ, ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ನಾಗರಾಜುಮೂರ್ತಿ (60) ಹತ್ಯೆಯಾಗಿರುವ ವ್ಯಕ್ತಿಯಾಗಿದ್ದು, ದೇವನಹಳ್ಳಿ ಹೊರವಲಯದ ಖಾಸಗಿ ಬಡಾವಣೆಯಲ್ಲಿ ದುಷ್ಕರ್ಮಿಗಳು ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ನೆನ್ನೆ ಸಂಜೆ ಪಟ್ಟಣದ ಹೊರವಲಯದ ಪ್ರಸನ್ನಹಳ್ಳಿ ಬಳಿ ವೃದ್ದ ವಾಕಿಂಗ್​ಗೆ ತೆರಳಿದ್ದರು. ಈ ವೇಳೆ ಕಿಡಿಗೇಡಿಗಳು ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ವೃದ್ದನನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಮೃತ ವ್ಯಕ್ತಿಯ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಚೈನ್, ಉಂಗುರ ಮತ್ತು ಬ್ರೇಸ್ಲೇಟ್​ ಎಗರಿಸಿ ಪರಾರಿಯಾಗಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್