ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ್ತೆ ಅಗ್ರಿ ವಾರ್ ರೂಮ್ ಸ್ಥಾಪನೆ

ಕಳೆದ ಬಾರಿಯ ಕೊವಿಡ್ ಹೊಡೆತಕ್ಕೆ ರೈತರು ತಾವು ಬೆಳೆದೆ ಹೂವು-ಹಣ್ಣು, ತರಕಾರಿ ಹಾಗೂ ಇತರೆ ಬೆಳೆಗಳನ್ನು ಹಾಳು ಮಾಡಿದ್ದರು. ಇದರಿಂದ ತುಂಬಾ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅಗ್ರಿವಾರ್ ರೂಮ್ ಮೂಲಕ ಅವರಿಗೆ ಸಲಹೆ- ಸೂಚನೆ ನೀಡಿ ಬೆಳೆ ಸಂರಕ್ಷಣೆ, ಮಾರಾಟ ಸಲಹೆ ಸೂಚನೆಯಿಂದ ರೈತರಿಗೆ ತುಂಬ ಅನುಕೂಲವಾಗಿತ್ತು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ್ತೆ ಅಗ್ರಿ ವಾರ್ ರೂಮ್ ಸ್ಥಾಪನೆ
ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಕೊಂಚ ತಿಳಿಯಾಗಿದೆ... ಐಸಿಯು, ವೆಂಟಿಲೇಟರ್ ಬೆಡ್ ಅಭಾವ ಕೊಂಚ ಇಳಿಕೆಯಾಗಿದೆ
Follow us
sandhya thejappa
|

Updated on:Apr 29, 2021 | 11:57 AM

ಧಾರವಾಡ: ಕೊರೊನಾ ಎರಡನೇ ಅಲೆ ರಾಜ್ಯಕ್ಕೆ ಅಪ್ಪಳಿಸಿದ್ದು, ರೈತರಿಗೂ ಭಾರೀ ಪ್ರಮಾಣದಲ್ಲಿ ಪೆಟ್ಟು ನೀಡಬಹುದು ಎಂದು ಅರಿತಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತೆ ಅಗ್ರಿ ವಾರ್ ರೂಮ್ ಸೇವೆ ಶುರು ಮಾಡಿದೆ. ಕೊರೊನಾ ಮೊದಲ ಅಲೆ ಶುರುವಾದ ನಂತರ ಕಳೆದ 2020ರ ಏಪ್ರಿಲ್ ತಿಂಗಳಲ್ಲಿ ಅಗ್ರಿವಾರ್ ರೂಮ್ ಆರಂಭಿಸಲಾಗಿತ್ತು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿತ್ತು. ಇದೀಗ ಅದೇ ಮಾದರಿಯಲ್ಲಿ ರೈತರ ಗೊಂದಲಗಳಿಗೆ ತೆರೆ ಎಳೆಯುವ ದೃಷ್ಟಿಯಿಂದ ಈ ವಾರ್ ರೂಮ್ ಪ್ರಾರಂಭಿಸಲಾಗುತ್ತಿದೆ. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರೈತರು ಸಮಸ್ಯೆಯಲ್ಲಿ ಸಿಲುಕದಿರಲಿ. ಅವರಲ್ಲಿ ಇರುವ ಆತಂಕವನ್ನು ನಿರ್ಭಯದಿಂದ ಹೇಳಿಕೊಳ್ಳುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಳ್ಳಲಿ ಎಂಬ ಉದ್ದೇಶದಿಂದ ಅಗ್ರಿ ವಾರ್ ರೂಮ್ ಏಪ್ರಿಲ್ 28 ರಿಂದ ಶುರು ಮಾಡಲಾಗುತ್ತಿದೆ.

ಕಳೆದ ಬಾರಿ ರೈತರಿಗೆ ಅನುಕೂಲವಾಗಿತ್ತು ಕಳೆದ ಬಾರಿಯ ಕೊವಿಡ್ ಹೊಡೆತಕ್ಕೆ ರೈತರು ತಾವು ಬೆಳೆದೆ ಹೂವು-ಹಣ್ಣು, ತರಕಾರಿ ಹಾಗೂ ಇತರೆ ಬೆಳೆಗಳನ್ನು ಹಾಳು ಮಾಡಿದ್ದರು. ಇದರಿಂದ ತುಂಬಾ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅಗ್ರಿ ವಾರ್ ರೂಮ್ ಮೂಲಕ ಅವರಿಗೆ ಸಲಹೆ- ಸೂಚನೆ ನೀಡಿ ಬೆಳೆ ಸಂರಕ್ಷಣೆ, ಮಾರಾಟ ಸಲಹೆ ಸೂಚನೆಯಿಂದ ರೈತರಿಗೆ ತುಂಬ ಅನುಕೂಲವಾಗಿತ್ತು. ಇದೀಗ ಮತ್ತೇ ವಿಷಮ ಪರಿಸ್ಥಿತಿ ಎದುರಾಗಿದ್ದು, ಅಗ್ರಿ ವಾರ್ ರೂಮ್ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು, ಅವರ ಕೃಷಿ ಸಮಸ್ಯೆಗಳ ಬಗ್ಗೆ ಪರಿಹಾರ ನೀಡುವುದು, ಅವರು ಬೆಳೆದ ಹಣ್ಣು, ತರಕಾರಿ ಹಾಗೂ ಇತರೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮಾಹಿತಿ ಕೊಡುವುದು ಸೇರಿದಂತೆ ಮುಂತಾದ ಪ್ರಮುಖ ಉದ್ದೇಶಗಳೊಂದಿಗೆ ಈ ಅಗ್ರಿ ವಾರ್ ರೂಮ್ ಕೆಲಸ ಮಾಡಲಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಂ.ಬಿ. ಚೆಟ್ಟಿ ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದರು.

ಅಗ್ರಿ ವಾರ್ ರೂಮ್​ನ ಟೋಲ್ ಫ್ರೀ ಸಂಖ್ಯೆ 1800-425-1150 ಆಗಿದ್ದು, ದೇಶದ ಯಾವುದೇ ಭಾಗದಿಂದ ರೈತರು ಈ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಕೇಂದ್ರವು ಮುಂಜಾನೆ 10 ರಿಂದ ಸಂಜೆ 4ರ ವರೆಗೆ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರದಲ್ಲಿ ಸರದಿಯಂತೆ ಕೃಷಿ ವಿಜ್ಞಾನಿಗಳು ರೈತರ ಸಮಸ್ಯೆಗೆ ಸ್ಪಂದಿಸಲು ಲಭ್ಯವಿರುತ್ತಾರೆ. ರೈತ ಬಾಂಧವರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕೆಂದು ಕುಲಪತಿಗಳು ವಿನಂತಿಸಿದ್ದಾರೆ.

ಈ ಹಿಂದೆ ರೈತರು ಸರಣಿ ಆತ್ಮಹತ್ಯೆಗೆ ಒಳಗಾಗಿದ್ದರು. ರೈತರಿಗೆ ಆತ್ಮಸ್ಥೈರ್ಯ ತುಂಬಲು ಅಗ್ರಿ ವಾರ್ ರೂಮ್ ಸ್ಥಾಪಿಸಲಾಗಿತ್ತು. ಆ ಮೂಲಕ ಸಾವಿರಾರು ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿತ್ತು. ಅದೇ ರೀತಿ ಕೊವಿಡ್ ಮೊದಲ ಅಲೆಯ ಸಂದರ್ಭದಲ್ಲೂ ಅಗ್ರಿ ವಾರ್ ರೂಮ್ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಇದೀಗ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮತ್ತೆ ಅಗ್ರಿ ವಾರ್ ರೂಮ್ ಆರಂಭವಾಗಿದ್ದು, ವಿಜ್ಞಾನಿಗಳು ರೈತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ

ಕೊವಿಡ್​ ಸೋಂಕಿತ ಸ್ನೇಹಿತನ ಪ್ರಾಣ ಉಳಿಸಲು 1400 ಕಿಮೀ ದೂರ ಡ್ರೈವ್​ ಮಾಡಿ ಆಕ್ಸಿಜನ್ ಸಿಲಿಂಡರ್ ತಂದ ಶಿಕ್ಷಕ..

ಹಿರೇಕೆರೂರು, ರಟ್ಟಿಹಳ್ಳಿ ವ್ಯಾಪ್ತಿಯ ಬಡ ಕುಟುಂಬಗಳಿಗೆ ಕೃಷಿ ಸಚಿವರ ಸಹಾಯ ಹಸ್ತ; ಕೊರೊನಾ ಸೋಂಕಿತರ ವೆಚ್ಚ ಭರಿಸಲು ಮುಂದಾದ ಬಿ.ಸಿ.ಪಾಟೀಲ್

(agri war room has been set up again at Dharwad Agricultural University)

Published On - 11:38 am, Thu, 29 April 21