ಕೋಲಾರ: ಕೆಜಿಎಫ್ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹೆರಿಗೆ ವೇಳೆ ಕೆಜಿಎಫ್ನ ಅಂಬೇಡ್ಕರ್ ನಗರ ನಿವಾಸಿಗಳಾದ ಬೆನಡಿಕ್ ಜ್ವರಾಲ್ ಹಾಗು ಸೆಲ್ವಂ ಮೈದಲಿ ದಂಪತಿ ಮಗು ಮೃತಪಟ್ಟಿದೆ.
ಮಧ್ಯಾಹ್ನ ಹೆರಿಗೆಗೆಂದು ಸೆಲ್ವಂ ಮೈದಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನಿಂಗ್ ಸೇರಿದಂತೆ ಹಲವು ತಪಾಸಣೆ ಮಾಡಿ ಮಗು ಆರೋಗ್ಯವಾಗಿರುವ ಕುರಿತು ವೈದ್ಯರು ಖಚಿತ ಪಡಿಸಿದ್ದರು. ಆದ್ರೆ ಹೆರಿಗೆ ವೇಳೆ ಮಗು ಮೃತಪಟ್ಟಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಬೆನಡಿಕ್ ಜ್ವರಾಲ್ ಹಾಗು ಸೆಲ್ವಂ ಮೈದಲಿ ದಂಪತಿ ಆರೋಪಿಸಿದ್ದಾರೆ. ಈ ಸಂಬಂಧ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.