GIMS Hospital: ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಚಾಲಕನ ಮತ್ತೊಂದು ಕಾಮದಾಟ ಬಯಲು.. ಬೌನ್ಸರ್‌ಗಳಿಂದ ಹಿಗ್ಗಾಮುಗ್ಗ ಏಟು ತಿಂದವ ಜೈಲಿಗೆ

ಕಾಮುಕ ಪ್ರೇಮಸಾಗರ್ ಅಲಿಯಾಸ್ ಪಿಂಟು, ಜೂನ್ 9ರಂದು ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಸದ್ಯ ಆಕೆ ಚೀರಾಡಿಕೊಂಡಿದ್ದ ಹಿನ್ನೆಲೆ ಆರೋಪಿ ಪಿಂಟು ಅಲ್ಲಿಂದ ಪರಾರಿಯಾಗಿದ್ದ ಆದರೆ ಈ ಘಟನೆಗೂ ಮುನ್ನವೇ ಕಾಮುಕ ಆ್ಯಂಬುಲೆನ್ಸ್ ಚಾಲಕ ಅದೇ ಆಸ್ಪತ್ರೆಯ ಲಿಫ್ಟ್‌ನಲ್ಲಿ ಬರುವಾಗ ಮಹಿಳೆಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.

GIMS Hospital: ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಚಾಲಕನ ಮತ್ತೊಂದು ಕಾಮದಾಟ ಬಯಲು.. ಬೌನ್ಸರ್‌ಗಳಿಂದ ಹಿಗ್ಗಾಮುಗ್ಗ ಏಟು ತಿಂದವ ಜೈಲಿಗೆ
ಬೌನ್ಸರ್‌ಗಳಿಂದ ಹಿಗ್ಗಾಮುಗ್ಗ ಏಟು ತಿಂದವ ಜೈಲು
Edited By: ಸಾಧು ಶ್ರೀನಾಥ್​

Updated on: Jun 22, 2021 | 10:18 AM

ಕಲಬುರಗಿ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಬೌನ್ಸರ್‌ಗಳು ಹಿಗ್ಗಾಮುಗ್ಗ ಥಳಿಸಿದ ಘಟನೆ ಕಲಬುರಗಿ ಜಿಮ್ಸ್‌ನಲ್ಲಿ ನಡೆದಿದೆ. ಕಲಬುರಗಿ ನಗರದ ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕ ಪಿಂಟು ಎಂಬ ವ್ಯಕ್ತಿ ರಾತ್ರಿ ಮಲಗಿದ್ದ ಕೊವಿಡ್ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪ ಕೇಳಿ ಬಂದಿತ್ತು. ಈಗ ಅದೇ ಆರೋಪಿ ಆಸ್ಪತ್ರೆಯ ಲಿಫ್ಟ್‌ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಕಾಮುಕ ಪ್ರೇಮಸಾಗರ್ ಅಲಿಯಾಸ್ ಪಿಂಟು, ಜೂನ್ 9ರಂದು ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಸದ್ಯ ಆಕೆ ಚೀರಾಡಿಕೊಂಡಿದ್ದ ಹಿನ್ನೆಲೆ ಆರೋಪಿ ಪಿಂಟು ಅಲ್ಲಿಂದ ಪರಾರಿಯಾಗಿದ್ದ ಆದರೆ ಈ ಘಟನೆಗೂ ಮುನ್ನವೇ ಕಾಮುಕ ಆ್ಯಂಬುಲೆನ್ಸ್ ಚಾಲಕ ಅದೇ ಆಸ್ಪತ್ರೆಯ ಲಿಫ್ಟ್‌ನಲ್ಲಿ ಬರುವಾಗ ಮಹಿಳೆಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಸ್ಪತ್ರೆಯ ಬೌನ್ಸರ್‌ಗಳು ಕಾಮುಕನನ್ನು ಥಳಿಸಿ ಬುದ್ಧಿ ಹೇಳಿದ್ದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದಾರೆ.

ಖಿನ್ನತೆಯಿಂದ ಕೊರೊನಾ ಸೋಂಕಿತ ಮಹಿಳೆ ಸಾವು
ಕೊರೊನಾ ಹಿನ್ನೆಲೆ 25 ವರ್ಷದ ಸೋಂಕಿತೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂ.9ರ ರಾತ್ರಿ ಆಂಬ್ಯುಲೆನ್ಸ್ ಚಾಲಕ ಪಿಂಟು ಸೋಂಕಿತೆಯ ಬಳಿ ಬಂದು ಅತ್ಯಾಚಾರಕ್ಕೆ ಯತ್ನಿಸಿದ. ಮಲಗಿದ್ದಾಗ ಆಕೆಯ ಡೈಪರ್ ಮತ್ತು ಯೂರಿನ್ ಪೈಪ್ ತೆಗೆದಿದ್ದ. ಹೀಗಾಗಿ ತಕ್ಷಣ ನಿದ್ದೆಯಿಂದ ಎಚ್ಚರಗೊಂಡ ಸೋಂಕಿತೆ ಚೀರಾಡಿದ್ದಳು. ಈ ವೇಳೆ ಅಕ್ಕ-ಪಕ್ಕದ ರೋಗಿಗಳು ಕೂಡ ಎಚ್ಚರಗೊಂಡಿದ್ದರಿಂದ ಆರೋಪಿ ಓಡಿಹೋಗಿದ್ದ. ಬಳಿಕ ಆರೋಪಿ ಪಿಂಟುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮತ್ತೊಂದು ಕಡೆ ಖಿನ್ನತೆಯಿಂದ ಕೊರೊನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೊವಿಡ್ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ, ವ್ಯಕ್ತಿ ಅರೆಸ್ಟ್

Published On - 10:03 am, Tue, 22 June 21

TV9 Web

TV9 Kannada

Read More
Loading...
Unable to load recommendations.
Follow Us