ಬಿಪಿಎಲ್ ಕಾರ್ಡ್ ವಿವಾದ ಮಧ್ಯೆ ಬಡಪಾಯಿ ರೋಗಿಗಳಿಗೆ ಹೊಸ ಸಂಕಷ್ಟ, ಹೆಲ್ತ್ ಕಾರ್ಡ್ ಕಳೆದುಕೊಳ್ಳುವ ಭೀತಿ

| Updated By: Ganapathi Sharma

Updated on: Nov 24, 2024 | 10:29 AM

ಬಿಪಿಎಲ್ ಕಾರ್ಡ್ ರದ್ದು, ಬೆಲೆ ಏರಿಕೆ ಬಿಸಿ ಸಂಕಷ್ಟಗಳ ಮಧ್ಯೆ ಬಡ ರೋಗಿಗಳಿಗೆ ಹೊಸ ಶಾಕ್ ಎದುರಾಗಿದೆ. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ದರ ಏರಿಕೆ ಬಿಸಿಯ ನಡುವೆ ಇದೀಗ ಉಚಿತ ಚಿಕಿತ್ಸೆ ಪಡೆಯಲು ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು ಎಂಬ ವಿವರ ಇಲ್ಲಿದೆ.

ಬಿಪಿಎಲ್ ಕಾರ್ಡ್ ವಿವಾದ ಮಧ್ಯೆ ಬಡಪಾಯಿ ರೋಗಿಗಳಿಗೆ ಹೊಸ ಸಂಕಷ್ಟ, ಹೆಲ್ತ್ ಕಾರ್ಡ್ ಕಳೆದುಕೊಳ್ಳುವ ಭೀತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ನವೆಂಬರ್ 24: ಬೆಂಗಳೂರು ಮೆಡಿಕಲ್ ಕಾಲೇಜು ವ್ಯಾಪ್ತಿಯ ಆಸ್ಪತ್ರೆಗಳ ಚಿಕಿತ್ಸಾ ದರ ಪರಿಷ್ಕರಣೆಯಾಗಿದೆ. ಇದರ ಬೆನ್ನಲ್ಲೇ, ಆರೋಗ್ಯ ಇಲಾಖೆಯ ವ್ಯಾಪ್ತಿಯ ಆಸ್ಪತ್ರೆಗಳ ಬೆಲೆ ಏರಿಕೆಯ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮಾಡಿದೆ ಈ ಮಧ್ಯೆ, ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ರೇಷನ್ ಕಾರ್ಡ್ ಗೊಂದಲದ ಮಧ್ಯೆ ಹೆಲ್ತ್ ಕಾರ್ಡ್ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಬಿಪಿಎಲ್ ಕಾರ್ಡ್ ರದ್ದು ವಿವಾದದ ಬೆನ್ನಲ್ಲೇ ಯಶಸ್ವಿನಿ ಕಾರ್ಡ್​​ನಿಂದ ವಂಚಿತರಾಗುವ ಭಯ ಬಡ ರೋಗಿಗಳಿಗೆ ಎದುರಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಉಚಿತ ಹೆಲ್ತ್ ಕಾರ್ಡ್ ಅಹರ್ತೆ ಕೂಡಾ ರೋಗಿಗಳಿಗೆ ಸಿಗಲ್ಲ. ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಉಚಿತ ಹೆಲ್ತ್ ಕಾರ್ಡ್ ಅರ್ಹತೆ ಇರಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಸದ್ಯ ಆರೋಗ್ಯದ ದೃಷ್ಟಿಯಿಂದ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿದ್ದ ರೋಗಿಗಳಿಗೆ ಟೆನ್ಷನ್ ಶುರುವಾಗಿದೆ.

ಸದ್ಯ, ಹೆಲ್ತ್ ಕಾರ್ಡ್​​ನಿಂದ ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡಂತೆ 823 ವಿವಿಧ ರೀತಿಯ ಯಶಸ್ವಿನಿ ಆರೋಗ್ಯ ಯೋಜನೆಯ ಲಾಭ ಜನರಿಗೆ ಸಿಗುತ್ತದೆ. ಒಂದು ವರ್ಷದಲ್ಲಿ ಒಬ್ಬ ಸದಸ್ಯ ಒಂದು ಬಾರಿ ಆಸ್ಪತ್ರೆಗೆ ದಾಖಲಾದರೆ ಆತ 1.25 ಲಕ್ಷ ರೂ. ಗರಿಷ್ಠ ಮಿತಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಅದೇ ವರ್ಷದಲ್ಲಿ ಆ ವ್ಯಕ್ತಿ ಅನೇಕ ಬಾರಿ ಶಸ್ತ್ರ ಚಿಕಿತ್ಸೆ ಪಡೆಯಬೇಕಾದ ಸಂದರ್ಭದಲ್ಲಿ ಗರಿಷ್ಠ ಮಿತಿ 2 ಲಕ್ಷ ರೂ.ದವರೆಗೆ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ, ಈಗ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಈ ಉಚಿತ ಹೆಲ್ತ್ ಕಾರ್ಡ್ ಅರ್ಹತೆಯೂ ರೋಗಿಗಳಿಗೆ ಇರಲ್ಲ.

ಇದನ್ನೂ ಓದಿ: ಕೆಎಸ್​ಆರ್​ಟಿಸಿ, ಬಿಎಂಟಿಸಿ ಮುಷ್ಕರಕ್ಕೆ ಸಿದ್ಧತೆ: ಬೇಡಿಕೆ ಈಡೇರಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರು

ಒಟ್ಟಿನಲ್ಲಿ ಅನ್ನ, ಬೇಳೆ, ಎಣ್ಣೆ ನಂತರ ಈಗ ಆರೋಗ್ಯದ ಭದ್ರತೆಯ ದೃಷ್ಟಿಯಿಂದಲೂ ಬಿಪಿಎಲ್ ಕಾರ್ಡ್ ರದ್ದು ವಿಚಾರ ಸಂಕಷ್ಟ ತಂದಿಟ್ಟಿದೆ. ಬಡವರು ಉಚಿತವಾಗಿ ಪಡೆಯುವ ಚಿಕಿತ್ಸೆಗೂ ಅಧಿಕ ಹಣ ತೆರಬೇಕಾದ ಪರಿಸ್ಥಿತಿ ಬರುತ್ತಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ