ಹಾಸನ: ಅಮೃತ್ ಮಹಲ್ ಕಾವಲ್ನಲ್ಲಿ 230 ಹಸುಗಳು ಕೆಸರಿನಲ್ಲಿ ಸಿಲುಕಿ ನರಳಾಟ ಪ್ರಕರಣ ಸಂಬಂಧ ಮುಖ್ಯ ಪಶು ವೈದ್ಯಾಧಿಕಾರಿ ಅಮಾನತಾಗಿದ್ದಾರೆ.
ಚನ್ನರಾಯ ಪಟ್ಟಣ ತಾಲೂಕಿನ ರಾಯಸಂದ್ರದಲ್ಲಿನ ಅಮೃತ್ ಮಹಲ್ನಲ್ಲಿ ಮಳೆಯಿಂದ ಕೆಸರಿನಲ್ಲಿ ಸಿಲುಕಿ 230 ಹಸುಗಳು ಸಾವಿನಂಚಿನಲ್ಲಿದ್ದವು. ನ.8ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಶುಸಂಗೊಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ್ ಭೇಟಿ ನೀಡಿದ್ದರು.
ಈ ವೇಳೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ಕರ್ತವ್ಯ ಲೋಪ ಆರೋಪದ ಮೇಲೆ ನುಗ್ಗೆಹಳ್ಳಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಲ್.ಜಿ.ಸೋಮಶೇಖರ್ ಅವರನ್ನ ಇಲಾಖೆ ಅಧಿಕಾರಿಗಳು ಅಮಾನತು ಮಾಡಿದ್ದಾರೆ.
Published On - 12:22 pm, Tue, 12 November 19