ಬೆಂಗಳೂರು: ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ನೋಟಿಸ್ ಕೊಡದೆ ಅದು ಹೇಗೆ ಪ್ರತಿಭಟನೆ ಮಾಡುತ್ತಾರೆ? ಪ್ರತಿಭಟನೆ ಮಾಡುತ್ತಿರುವುದು ನಮ್ಮ ಯೂನಿಯನ್‌ನವರಲ್ಲ ಎಂದು ಕೋಡಿಹಳ್ಳಿಗೆ ಟಾಂಗ್ ಕೊಟ್ಟರು.
ಯಾರೋ ಮೂರನೇಯವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಷ್ಟು ದಿನ ಪ್ರತಿಭಟನೆ ಮಾಡುತ್ತಾರೋ ನೋಡೋಣ. ನಮ್ಮ ನೌಕರರ ಹಿತಕ್ಕಾಗಿ ಇಂದಿನ ಸಭೆಗೆ ಬಂದಿದ್ದೇವೆ ಎಂದು ಸುಬ್ಬರಾವ್ ಹೇಳಿದರು.
60 ವರ್ಷಗಳಿಂದ ನಾನು ಯೂನಿಯನ್ಗಳನ್ನ ನೋಡಿಕೊಂಡು ಬಂದಿದ್ದೇನೆ. ಈಗ ನಾನು ಕೋಡಿಹಳ್ಳಿ ಜೊತೆ ಮಾತಾಡಿ ಎಂದು ಹೇಳಿಲ್ಲ, ಆದರೆ ಉಳಿದವರ ಅಭಿಪ್ರಾಯ ಈ ರೀತಿ ಇರಬಹುದು. ಈ ಕುರಿತು ಸಿಎಂ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದಾರೆ. ಕೋಡಿಹಳ್ಳಿಯನ್ನು ಏನು ಮಾಡುತ್ತಿರಾ ಎಂದು ಬಿಎಸ್ವೈ ಕೇಳಿದ್ದರು. ನಾವು ಸಭೆಗೆ ಬರುತ್ತೇವೆ. ಅವರ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದೇವೆ. ಸಭೆಯಲ್ಲಿ ಸರ್ಕಾರ ನಮ್ಮ ಸಾರಿಗೆ ನೌಕರರಿಗೆ ಅನುಕೂಲ ಆಗೋ ಭರವಸೆ ನೀಡಿದರೆ, ಬಸ್ ಓಡಿಸುವಂತೆ ಸಾರಿಗೆ ನೌಕರರಿಗೆ ಹೇಳುತ್ತೇವೆ ಎಂದು ಸುಬ್ಬರಾವ್ ಹೇಳಿದರು.
ಸಂಬಳ ಹೆಚ್ಚಳ ವಿಚಾರದಲ್ಲಿ ಸರ್ಕಾರ ನಮಗೆ ಒಪ್ಪುವ ನಿರ್ಧಾರ ಮಾಡಲಿ ಎನ್ನುವುದು ನಮ್ಮ ನಿರೀಕ್ಷೆ. ಈ ಮಧ್ಯೆ ಕೋಡಿಹಳ್ಳಿ ನಿಮ್ಮನ್ನ ಹೈಜಾಕ್ ಮಾಡ್ತಿದ್ದಾರಾ ಎಂದು ಪತ್ರಕರ್ತರು ಕೆಳಿದ ಪ್ರಶ್ನೆಗೆ ಉತ್ತರ ನೀಡಿದ ಸುಬ್ಬರಾವ್, ಅನಂತ್ ಸುಬ್ಬರಾವ್ಅನ್ನು ಹೈಜಾಕ್ ಮಾಡಬಹುದು, ಆದರೆ ನೌಕರರ ಫೆಡರೇಷನ್ ಅನ್ನು ಹೈಜಾಕ್ ಮಾಡಲು ಸಾಧ್ಯವಿಲ್ಲ. ರಾತ್ರೋರಾತ್ರಿ ಬಂದ್ಗೆ ಕರೆ ನೀಡಿರುವುದು ಸರಿನಾ? ಎಂದು ಕೋಡಿಹಳ್ಳಿ ವಿರುದ್ಧ ಸುಬ್ಬರಾವ್ ವಾಗ್ದಾಳಿ ನಡೆಸಿದ್ದಾರೆ.
Published On - 1:57 pm, Sun, 13 December 20