ಕೊಲಲೆ ಪಾಂಡು ಕುಮಾರರಾ..ಕೊಲಲೇ.. -ಗ್ರಾ.ಪಂ ಎಲೆಕ್ಷನ್ ಸಿದ್ಧತೆ ಮಧ್ಯೆ G.T.ದೇವೇಗೌಡರ ಭರ್ಜರಿ ಸಿಂಗಿಂಗ್!
ಜಿಲ್ಲಾ ಪೌರಾಣಿಕ ರಂಗಭೂಮಿ ನಿರ್ದೇಶಕರು, ವಾದ್ಯ ವೃಂದದವರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ನಾಟಕದ ತುಣುಕೊಂದನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದ್ದಾರೆ.ನಗರದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ನಾಟಕವೊಂದರ ಹಾಡು ಹಾಡಿದರು.
ಮೈಸೂರು: ಜಿಲ್ಲಾ ಪೌರಾಣಿಕ ರಂಗಭೂಮಿ ನಿರ್ದೇಶಕರು, ವಾದ್ಯ ವೃಂದದವರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ನಾಟಕದ ತುಣುಕೊಂದನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದ್ದಾರೆ.ನಗರದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ನಾಟಕವೊಂದರ ಹಾಡು ಹಾಡಿದರು.
ಒಂದೆಡೆ ಚಾಮುಂಡೇಶ್ವರಿ ಕ್ಷೇತ್ರದ ಗ್ರಾ.ಪಂ ಚುನಾವಣೆಗೆ ಜೆಡಿಎಸ್ ಚುನಾವಣೆ ಸಿದ್ದತೆ ಸಭೆ ನಡೆಸುತ್ತಿದೆ. ಚುನಾವಣೆಯ ಒತ್ತಡದ ನಡುವೆಯೂ ಹಾಡು ಹಾಡುತ್ತಾ ಮನರಂಜನೆ ನೀಡುವ ಮೂಲಕ ಜಿ.ಟಿ.ದೇವೇಗೌಡ ನೋಡುಗರ ಗಮನ ಸೆಳೆದರು. ಕೊಲಲೆ ಪಾಂಡು ಕುಮಾರರಾ.. ಕೊಲಲೇ ಕುಂತೀ ಸುತರಾ.. ಕೊಲಲೇ.. ಕೊಲಲೇ ಎಂದು ನಾಟಕವೊಂದರ ಹಾಡಿನ ತುಣುಕನ್ನು ಹಾಡುವ ಮೂಲಕ ಹೇಳಿದ ಜಿ.ಟಿ.ದೇವೇಗೌಡ ನೆರೆದವರ ಮನಗೆದ್ದರು.
ಜಿಲ್ಲಾ ಪೌರಾಣಿಕ ರಂಗಭೂಮಿ ನಿರ್ದೇಶಕರು, ವಾದ್ಯ ವೃಂದದವರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರಕ್ಕೆ ಹೋಗಲ್ಲ
ಗ್ರಾ.ಪಂ ಚುನಾವಣೆ ಪ್ರಚಾರದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ ನಾನು ಪ್ರಚಾರ ಮಾಡಲು ಯಾವ ಕ್ಷೇತ್ರಕ್ಕೂ ಹೋಗಲ್ಲ ಎಂದರು. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೂ ಹೋಗಲ್ಲ, ಹುಣಸೂರಿಗೂ ಹೋಗಲ್ಲ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಭೆಗೆ ಆಹ್ವಾನ ಸಹ ನೀಡಿಲ್ಲ. ನಾನು ಹಾಜರಾಗೋದೂ ಇಲ್ಲ. ಗ್ರಾ.ಪಂ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವ ಚುನಾವಣೆಯಲ್ಲ. ಈ ಕಾರಣಕ್ಕೋಸ್ಕರ ನಾನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಿನ್ನೆಯಷ್ಟೇ ಜೆಡಿಎಸ್ ಪಕ್ಷದಿಂದ ಹುಣಸೂರು ಕ್ಷೇತ್ರದ ಉಸ್ತುವರಿಯನ್ನಾಗಿ ಮಾಡಲಾಗಿತ್ತು. ಈ ವಿಚಾರವನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಪಕ್ಷದ ಕಡೆಯಿಂದ ನನಗೆ ಮಾಹಿತಿಯೇ ಬಂದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನ ಹೆಚ್.ಡಿ ಕುಮಾರಸ್ವಾಮಿ ಅವರೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನನಗೆ ಹುಣಸೂರು ಕ್ಷೇತ್ರದ ಪರಿಚಯವಿರುವ ಕಾರಣ ಉಸ್ತುವಾರಿ ವಹಿಸಿರಬಹುದು ಎನ್ನುವ ಮೂಲಕ ಗ್ರಾ.ಪಂ ಚುನಾವಣೆಯಿಂದ ದೂರವಿರುವುದಾಗಿ ತಿಳಿಸಿದರು.
ಇನ್ಮುಂದೆ ಪ್ರತಿ ಗ್ರಾ.ಪಂ.ಗೆ ₹ 1.5 ಕೋಟಿ ಅನುದಾನ ನೇರ ಬಿಡುಗಡೆ: ಡಿಸಿಎಂ ಅಶ್ವತ್ಥನಾರಾಯಣ್ ಘೋಷಣೆ
Published On - 2:37 pm, Sun, 13 December 20