ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಬಸ್ ಪ್ರಯಾಣಿಕರ ವೇದಿಕೆ ಮನವಿ

ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮುಂದುವೆರಿಸಲು ಸಾರಿಗೆ ನೌಕರರಿಗೆ ವೇದಿಕೆ ಮನವಿ ಮಾಡಿದೆ. ನಿಮ್ಮ ಹೋರಾಟಕ್ಕೆ ನಾವು ಬೆಂಬಲ ನಿಡುತ್ತೇವೆ ಎಂದು ತಿಳಿಸಿದೆ.

ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಬಸ್ ಪ್ರಯಾಣಿಕರ ವೇದಿಕೆ ಮನವಿ
ಬಿಎಂಟಿಸಿ ಬಸ್​ (ಪ್ರಾತಿನಿಧಿಕ ಚಿತ್ರ)
sandhya thejappa

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 13, 2020 | 4:50 PM

ಬೆಂಗಳೂರು: ರಾಜ್ಯ ಸರ್ಕಾರವು ಸಾರಿಗೆ ನೌಕರರ ಪ್ರತಿನಿಧಿಗಳ ವಿಶ್ವಾಸವನ್ನು ಗಳಿಸಿ ಅವರೊಂದಿಗೆ ಮಾತುಕತೆ ನಡೆಸಿ, ಸಾರಿಗೆ ಸಂಸ್ಥೆಗಳಿಗೆ ಗಣನೀಯವಾಗಿ ಅನುದಾನ ಹೆಚ್ಚಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯೆ ಶಹೀನ್ ಶಸ ಮನವಿ ಮಾಡಿದ್ದಾರೆ.

ಸಂಸ್ಥೆಗಳು ತಮ್ಮ ನೌಕರರಿಗೆ ಸೌಲಭ್ಯಗಳನ್ನು ಒದಗಿಸಲು ಮಾತ್ರವಲ್ಲ ಪ್ರಯಾಣಿಕರಿಗೆ ಉತ್ತಮ ವೇದಿಕೆ ಒದಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೌಕರರ ಬೇಡಿಕೆಗಳ ಬಗ್ಗೆ ಚರ್ಚಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಕೋರಿದೆ.

ಕೊರೊನಾ ಸೋಂಕಿನಂಥ ಅಪಾಯದ ಸ್ಥಿತಿಯಲ್ಲಿಯೂ ಬಸ್​ಗಳು ಚಲಿಸುತ್ತಿದ್ದವು. ಆದರೂ ನಿಗಮದ ಸಿಬ್ಬಂದಿ ಹಲವಾರು ಬಾರಿ ತಮ್ಮ ವೇತನವನ್ನು ಸರಿಯಾದ ಸಮಯಕ್ಕೆ ಪಡೆಯಲು ಹೋರಾಡಬೇಕಾಯಿತು. ಅಲ್ಲದೇ ಕೋವಿಡ್ ಸೋಂಕಿನಿಂದ ಜೀವತೆತ್ತ ನೌಕರರಿಗೆ ಯಾವ ಪರಿಹಾರವೂ ಸಿಗಲಿಲ್ಲ ಇವೆಲ್ಲವನ್ನು ಗಮದಲ್ಲಿರಿಸಿ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಹೇಳಿದೆ.

ನೌಕರರಿಗೂ ಮನವಿ: ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮುಂದುವೆರಿಸಲು ಸಾರಿಗೆ ನೌಕರರಿಗೆ ವೇದಿಕೆ ಮನವಿ ಮಾಡಿದೆ. ನಿಮ್ಮ ಹೋರಾಟಕ್ಕೆ ನಾವು ಬೆಂಬಲ ನಿಡುತ್ತೇವೆ ಎಂದು ತಿಳಿಸಿದೆ.

ಕರ್ನಾಟಕದಾದ್ಯಂತ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ತಲುಪಿದ್ದು, ಇದರಿಂದ ಬಹಳಷ್ಟು ಪ್ರಯಾಣಿಕರಿಗೆ ತೀರಾ ದೊಡ್ಡ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಶಿಕ್ಷಣ, ದುಡಿಮೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರಣಗಳಿಗೆ ಸಾರ್ವಜನಿಕರು ಪ್ರಯಾಣಿಸುತ್ತಾರೆ. ಅದರಲ್ಲೂ ಮಧ್ಯಮ ವರ್ಗ ಹಾಗೂ ದುಡಿಯುವ ವರ್ಗಕ್ಕೆ ಬಸ್ ಸೌಲಭ್ಯ ಅನಿವಾರ್ಯವಾಗಿರುತ್ತದೆ. ಇದರಿಂದ ಯಾರೊಬ್ಬ ಪ್ರಯಾಣಿಕರಿಗೂ ತೊಂದರೆಯಾಗದೆ ಮುಷ್ಕರ ಮಾಡಬೇಕೆಂದು ಕೋರಿದೆ.

ಬಸ್ ಮತ್ತು ಪ್ರಯಾಣಿಕರು ಕೇಂದ್ರಬಿಂದು: ಹೋರಾಟವನ್ನು ನಿರ್ಲಕ್ಷಿಸದೆ ನೌಕರರ ಹಿತಾಸಕ್ತಿಗಾಗಿ ಯೋಚಿಸಬೇಂದು ಸರ್ಕಾರಕ್ಕೆ ಮನವಿ ಮಾಡಿದ ಬಸ್ ಪ್ರಯಾಣಿಕರ ವೇದಿಕೆ, ಬಸ್ ಮತ್ತು ಪ್ರಯಾಣಿಕರು ಈ ನಗರದ ಕೇಂದ್ರಬಿಂದು ಎಂದು ಅಭಿಪ್ರಾಯಪಟ್ಟಿದೆ.

ಸಾರಿಗೆ ಮುಷ್ಕರ: ಸಚಿವ ಲಕ್ಷ್ಮಣ ಸವದಿ ನೇತೃತ್ವದ ಸಭೆ ಅರ್ಧಕ್ಕೆ ಸ್ಥಗಿತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada