ಒಡನಾಡಿಯ ನೆನಪು | ಗೀತಾ ಭಾಷ್ಯ ಮುಗಿಸಿಯೇ ‘ಹೋಗಬೇಕು’ ಅಂದುಕೊಂಡಿದ್ದರು ಬನ್ನಂಜೆ ಗೋವಿಂದಾಚಾರ್ಯ

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು (85) ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಗೋವಿಂದಾಚಾರ್ಯರ ಕುರಿತಾಗಿ ಆಚಾರ್ಯರ ಅಭಿಮಾನಿಯೂ ಆಗಿರುವ ಉಡುಪಿಯ ಸಂಘಟಕ, ಸಾಮಾಜಿಕ ಕಾರ್ಯಕರ್ತ, ಧಾರ್ಮಿಕ ಮುಂದಾಳು ಪರೆಂಬಳ್ಳಿ ವಾಸುದೇವ ಭಟ್ ‘ಟಿವಿ9 ಡಿಜಿಟಲ್’ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಒಡನಾಡಿಯ ನೆನಪು | ಗೀತಾ ಭಾಷ್ಯ ಮುಗಿಸಿಯೇ ‘ಹೋಗಬೇಕು’ ಅಂದುಕೊಂಡಿದ್ದರು ಬನ್ನಂಜೆ ಗೋವಿಂದಾಚಾರ್ಯ
ಬನ್ನಂಜೆ ಗೋವಿಂದಾಚಾರ್ಯರು (ಚಿತ್ರಕೃಪೆ: facebook.com/MandirGuy)
Follow us
ganapathi bhat
|

Updated on:Dec 14, 2020 | 12:55 PM

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು (85) ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಗೋವಿಂದಾಚಾರ್ಯರ ಕುರಿತಾಗಿ ಆಚಾರ್ಯರ ಅಭಿಮಾನಿಯೂ ಆಗಿರುವ ಉಡುಪಿಯ ಸಂಘಟಕ, ಸಾಮಾಜಿಕ ಕಾರ್ಯಕರ್ತ, ಧಾರ್ಮಿಕ ಮುಂದಾಳು ಪರೆಂಬಳ್ಳಿ ವಾಸುದೇವ ಭಟ್ ‘ಟಿವಿ9 ಡಿಜಿಟಲ್’ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಗೋವಿಂದಾಚಾರ್ಯರ ಅಂತ್ಯದೊಂದಿಗೆ ಮಾಧ್ವ ಸಿದ್ಧಾಂತದ ವಾಜ್ಞಯ ಯುಗವೇ ಅಂತ್ಯವಾದಂತೆ ಆಗಿದೆ. ಸಂಸ್ಕೃತದೊಂದಿಗೆ ಇನ್ನೊಂದು ಭಾಷೆಯನ್ನು ಸಮನ್ವಯಗೊಳಿಸಿ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ಸಲ್ಲಿಸಿದ ಓರ್ವ ವ್ಯಕ್ತಿ ಇದ್ದರೆ ಅದು ಬನ್ನಂಜೆ ಗೋವಿಂದಾಚಾರ್ಯರು ಮಾತ್ರ. ಕಳೆದ 200 ವರ್ಷಗಳಲ್ಲಿ ನಾಡು ಇಂಥ ಘನ ವಿದ್ವಾಂಸರನ್ನು ಕಂಡಿರಲಿಲ್ಲ. ಅವರು ರಚಿಸಿದ, ಅವರ ಸಂಪಾದನೆಯಲ್ಲಿ ಪ್ರಕಟವಾದ ಸುಮಾರು 180 ಕೃತಿಗಳೇ ಇದಕ್ಕೆ ಸಾಕ್ಷಿ. ಗೋವಿಂದಾಚಾರ್ಯರು, ಅಗಾಧ ಸಾಹಿತ್ಯ ಕೃತಿಗಳ ರಚನೆಯ ಜೊತೆಗೆ 26 ಸಾವಿರ ಗಂಟೆಗಳಷ್ಟು ದಾಖಲೆಯ ಪ್ರವಚನ ಮಾಡಿದ್ದಾರೆ. ಮೂವತ್ತು ವರ್ಷಗಳಷ್ಟು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಾಚೀನ ಕಾಲದಲ್ಲಿ ವಾದಿರಾಜರು, ಮಧ್ವಾಚಾರ್ಯರು ಗ್ರಂಥಗಳನ್ನು ಬರೆದರು. ಆದರೆ, ಬಹುಮುಖಿಯಾಗಿ ಇನ್ನಿತರ ಆಯಾಮಗಳಿಗೆ ಅಂದು ಅವಕಾಶವಿರಲಿಲ್ಲ. ಋಗ್ಭಾಷ್ಯ, ಉಪನಿಷತ್ತುಗಳನ್ನು ಒಂದು ಪ್ರಾದೇಶಿಕ ಭಾಷೆಗೆ ಭಟ್ಟಿ ಇಳಿಸಿದ ಮಹಾತ್ಮ ಗೋವಿಂದಾಚಾರ್ಯರು. ಸದ್ಯ ಭಗವದ್ಗೀತೆಯ ಪ್ರತೀ ಶ್ಲೋಕಗಳಿಗೆ ಆಚಾರ್ಯ ತ್ರಯರ ಭಾಷ್ಯ ಏನು ಹೇಳುತ್ತದೆ ಎಂಬುದನ್ನು ಗೋವಿಂದಾಚಾರ್ಯರು ಬರೆಯುತ್ತಿದ್ದರು. ಒಂಭತ್ತು ಅಧ್ಯಾಯ ಕೊನೆಗೊಂಡಿತ್ತು. ಮೂರು-ಮೂರು ಅಧ್ಯಾಯಗಳ ಮೂರು ಪುಸ್ತಕ ಬಂದಿತ್ತು. ಅವರಿಗೆ ಹದಿನೆಂಟು ಅಧ್ಯಾಯಗಳನ್ನೂ ಮುಗಿಸಿಹೋಗಬೇಕು ಎಂಬ ಆಸೆ ಇತ್ತು.

ಹೀಗೆ ಭಗವದ್ಗೀತೆಯ ಆಚಾರ್ಯ ತ್ರಯರ ಭಾಷ್ಯವನ್ನು ಒಂದೇ ಕೃತಿಯಲ್ಲಿ ತರಲು ಸಿಂಹ ಧೈರ್ಯ ಬೇಕು. ಆಚಾರ್ಯ ತ್ರಯರ ಬಗ್ಗೆ, ಅವರ ಭಾಷ್ಯಗಳ ಬಗ್ಗೆ ತಳಸ್ಪರ್ಶಿ ಅಧ್ಯಯನ ಬೇಕು. ಅಷ್ಟು ಧೈರ್ಯದಿಂದ ಅವನ್ನು ಬರೆಯಬಲ್ಲ ಏಕೈಕ ವ್ಯಕ್ತಿ ನಮ್ಮ ನಡುವೆ ಇದ್ದದ್ದು ಗೋವಿಂದಾಚಾರ್ಯರು ಮಾತ್ರ.

ಅವರ ಒಂದೊಂದು ಕೃತಿಯೂ ಪ್ರಶಸ್ತಿಗೆ ಅರ್ಹವಾದದ್ದು. ಆದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಅವರನ್ನು ಬ್ರಾಹ್ಮಣ ಎನ್ನುವ ಕಾರಣಕ್ಕೆ ದೂರವಿಟ್ಟರು. ಸರಸ್ವತಿ ಸಮ್ಮಾನ್, ಜ್ಞಾನಪೀಠದಂಥ ಪ್ರಶಸ್ತಿಗಳು ಅವರಿಗೆ ಮರೀಚಿಕೆಯಾದವು. ಅದರಿಂದ ಪ್ರಶಸ್ತಿಗಳಿಗೆ ಸಿಗಬಹುದಾಗಿದ್ದ ಪ್ರತಿಷ್ಠೆಗಳಿಂದ ಅವುಗಳು ವಂಚಿತವಾದವು ಎಂದಷ್ಟೇ ಹೇಳಬಹುದು.

ನಿರೂಪಣೆ: ಗಣಪತಿ ದಿವಾಣ

ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ವಿಧಿವಶ

ಅಸಾಮಾನ್ಯ ಪಾಂಡಿತ್ಯದ ಖನಿ ಬನ್ನಂಜೆ ಗೋವಿಂದಾಚಾರ್ಯ

Published On - 2:52 pm, Sun, 13 December 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ