AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಗಮಗಳು ಅಸ್ಥಿಪಂಜರಗಳಾಗಿವೆ; ಸಾರಿಗೆ ಸಿಬ್ಬಂದಿ ಮುಷ್ಕರದ ಕುರಿತು ಶಂಕರ್​ ಬಿದರಿ ನೇರ ಮಾತುಗಳಿವು..

ಕಳೆದ 15 ವರ್ಷಗಳಲ್ಲಿ ರಣಹದ್ದುಗಳು ಸಾರಿಗೆ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ ಎಂದು ನೇರವಾಗಿ ಹೇಳಿದ್ದಾರೆ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ. ಸಾರಿಗೆ ನಿಗಮಗಳ ನೌಕರರ ಮುಷ್ಕರದ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಿಗಮಗಳು ಅಸ್ಥಿಪಂಜರಗಳಾಗಿವೆ; ಸಾರಿಗೆ ಸಿಬ್ಬಂದಿ ಮುಷ್ಕರದ ಕುರಿತು ಶಂಕರ್​ ಬಿದರಿ ನೇರ ಮಾತುಗಳಿವು..
ಶಂಕರ್​ ಬಿದರಿ
Lakshmi Hegde
| Edited By: |

Updated on:Dec 13, 2020 | 2:36 PM

Share

ಕಳೆದ ಎರಡು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಅತ್ತ ಸರ್ಕಾರ ಹಟ ಬಿಡುತ್ತಿಲ್ಲ. ಇತ್ತ ಸಿಬ್ಬಂದಿ ಹೋರಾಟ ಕೈಬಿಡಲು ಒಪ್ಪುತ್ತಿಲ್ಲ. ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂಬುದು ಸಾರಿಗೆ ಸಿಬ್ಬಂದಿಯ ಬಹುಮುಖ್ಯ ಬೇಡಿಕೆ..ಆದರೆ ಸರ್ಕಾರ ಮತ್ತು ಸಾರಿಗೆ ನೌಕರರ ಹಗ್ಗಜಗ್ಗಾಟದಲ್ಲಿ ಸಾಮಾನ್ಯ ಜನರು ಕಷ್ಟಪಡುತ್ತಿದ್ದಾರೆ.

ಈ ಬಗ್ಗೆ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತುಸು ಕಟುವಾದ ಮಾತಿನಿಂದಲೇ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಅವರ ಮಾತುಗಳು.

‘KSRTC, BMTC, NWKRTC, NEKRTC ಸಿಬ್ಬಂದಿ ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಕೋರಿ ಮುಷ್ಕರ ನಡೆಸುತ್ತಿರುವುದು ತೀವ್ರ ಕಳವಳಕಾರಿ. ಸಾರಿಗೆ ನೌಕರರು ಶ್ರಮಜೀವಿಗಳು, ಪ್ರಾಮಾಣಿಕ ಕೆಲಸಗಾರರು ಮತ್ತು ಒಂದು ಉತ್ತಮ ಪ್ಯಾಕೇಜ್​ಗೆ ಅರ್ಹರು ಎಂಬುದು ಪರಮಸತ್ಯ. ಆದರೆ ಈ ಎಲ್ಲ ನಿಗಮಗಳ ಸ್ವಾಸ್ಥ್ಯ ನನ್ನ ಮಿತ್ರರಾದ ದಿವಂಗತ ಎನ್​.ಗೋಕುಲ್​ರಾಮ್​, ಶಿವಕುಮಾರ್, ಲತಾ ಮತ್ತು ಉಪೇಂದ್ರ ತ್ರಿಪಾಠಿಯವರ ಉಸ್ತುವಾರಿಯಲ್ಲಿದ್ದಂತೆ ಈಗ ಸುಸ್ಥಿರವಾಗಿ ಉಳಿದಿಲ್ಲ. ಕಳೆದ 15 ವರ್ಷಗಳಲ್ಲಿ ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ. ಈಗ ಅಸ್ಥಿಪಂಜರ ಮಾತ್ರ ಉಳಿದಿದೆ.

‘ಇಂಥ ಪರಿಸ್ಥಿತಿಯಲ್ಲೂ ಅವರಿಗೆ ಸರ್ಕಾರಿ ನೌಕರರಿಗೆ ಸಮಾನ ವೇತನವನ್ನು ಸರ್ಕಾರ ನೀಡುತ್ತಿದೆ. ಸದ್ಯದ ಸಂದರ್ಭದಲ್ಲಿ ಸಾರಿಗೆ ನೌಕರರನ್ನು ಕಾನೂನುಬದ್ಧವಾಗಿ, ಪ್ರಾಯೋಗಿಕವಾಗಿ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಸರ್ಕಾರಿ ವೇತನ ಮಾಪಕದೊಂದಿಗೆ ಸಮಾನತೆ ಇರುವ ಪ್ಯಾಕೇಜ್​ ತೃಪ್ತಿದಾಯಕಕ್ಕಿಂತಲೂ ಅಧಿಕವಾಗಿದೆ. ಹಾಗೇ, ಸಾರಿಗೆ ಸಿಬ್ಬಂದಿಯ ಕುಂದುಕೊರತೆಯನ್ನು ನಿರೀಕ್ಷೆಗೂ ಮೀರಿ ಸರ್ಕಾರ ಪರಿಹರಿಸುತ್ತಿದೆ.

‘ನಾನು ಮುಷ್ಕರ ನಿರತರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಒಂದು ನಿಮಿಷವೂ ವಿಳಂಬ ಮಾಡದೆ ಸರ್ಕಾರ ನೀಡಿರುವ ಅವಕಾಶವನ್ನು ಗೌರವಯುತವಾಗಿ ಬಳಸಿಕೊಳ್ಳಿ. ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳಿ. ಸರ್ಕಾರದ ಪ್ರಸ್ತಾಪ ಒಪ್ಪಿಕೊಂಡರೆ ನಿಗಮಗಳ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ಎಂದು ನನಗೂ ಗೊತ್ತಿದೆ. ಆದರೆ ಅದನ್ನು ಹೇಗೋ ನಿಭಾಯಿಸಬಹುದು. ನೌಕರರು ಕೂಡಲೇ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಶುರು ಮಾಡಲಿ. ದಿವಂಗತ ಗೋಕುಲ್​ರಾಂ ಉಸ್ತುವಾರಿಯಲ್ಲಿ ನಿಗಮ ಎಷ್ಟು ಸುಸ್ಥಿತಿಯಲ್ಲಿತ್ತು ಎಂಬುದು ಗೊತ್ತಿದೆ. ಆ ಅದ್ಭುತ ಅವಧಿಯನ್ನು ಮತ್ತೊಮ್ಮೆ ತರಲು ಈಗಿನಿಂದಲೇ ಪ್ರಯತ್ನಿಸೋಣ’.

Published On - 2:33 pm, Sun, 13 December 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ