‘ಅದೆಷ್ಟು ದಿನ ಪ್ರತಿಭಟನೆ ಮಾಡ್ತಾರೋ ನೋಡೋಣ; ದೀಪ ಆರೋ ಮುನ್ನ ಜೋರಾಗಿ ಉರಿಯುತ್ತದೆ’

ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ನೋಟಿಸ್ ಕೊಡದೆ ಅದು ಹೇಗೆ ಪ್ರತಿಭಟನೆ ಮಾಡುತ್ತಾರೆ? ಪ್ರತಿಭಟನೆ ಮಾಡುತ್ತಿರುವುದು ನಮ್ಮ ಯೂನಿಯನ್‌ನವರಲ್ಲ ಎಂದು ಕೋಡಿಹಳ್ಳಿಗೆ ಟಾಂಗ್​ ಕೊಟ್ಟರು.

‘ಅದೆಷ್ಟು ದಿನ ಪ್ರತಿಭಟನೆ ಮಾಡ್ತಾರೋ ನೋಡೋಣ; ದೀಪ ಆರೋ ಮುನ್ನ ಜೋರಾಗಿ ಉರಿಯುತ್ತದೆ’
ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್
Follow us
preethi shettigar
| Updated By: KUSHAL V

Updated on:Dec 13, 2020 | 1:57 PM

ಬೆಂಗಳೂರು: ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ನೋಟಿಸ್ ಕೊಡದೆ ಅದು ಹೇಗೆ ಪ್ರತಿಭಟನೆ ಮಾಡುತ್ತಾರೆ? ಪ್ರತಿಭಟನೆ ಮಾಡುತ್ತಿರುವುದು ನಮ್ಮ ಯೂನಿಯನ್‌ನವರಲ್ಲ ಎಂದು ಕೋಡಿಹಳ್ಳಿಗೆ ಟಾಂಗ್​ ಕೊಟ್ಟರು.

ಯಾರೋ ಮೂರನೇಯವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಷ್ಟು ದಿನ ಪ್ರತಿಭಟನೆ ಮಾಡುತ್ತಾರೋ ನೋಡೋಣ. ನಮ್ಮ ನೌಕರರ ಹಿತಕ್ಕಾಗಿ ಇಂದಿನ ಸಭೆಗೆ ಬಂದಿದ್ದೇವೆ ಎಂದು ಸುಬ್ಬರಾವ್ ಹೇಳಿದರು.

60 ವರ್ಷಗಳಿಂದ ನಾನು ಯೂನಿಯನ್​ಗಳನ್ನ ನೋಡಿಕೊಂಡು ಬಂದಿದ್ದೇನೆ. ಈಗ ನಾನು ಕೋಡಿಹಳ್ಳಿ ಜೊತೆ ಮಾತಾಡಿ ಎಂದು ಹೇಳಿಲ್ಲ, ಆದರೆ ಉಳಿದವರ ಅಭಿಪ್ರಾಯ ಈ ರೀತಿ ಇರಬಹುದು. ಈ ಕುರಿತು ಸಿಎಂ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದಾರೆ. ಕೋಡಿಹಳ್ಳಿಯನ್ನು ಏನು ಮಾಡುತ್ತಿರಾ ಎಂದು ಬಿಎಸ್​ವೈ ಕೇಳಿದ್ದರು. ನಾವು ಸಭೆಗೆ ಬರುತ್ತೇವೆ. ಅವರ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದೇವೆ. ಸಭೆಯಲ್ಲಿ ಸರ್ಕಾರ ನಮ್ಮ ಸಾರಿಗೆ ನೌಕರರಿಗೆ ಅನುಕೂಲ ಆಗೋ ಭರವಸೆ ನೀಡಿದರೆ, ಬಸ್ ಓಡಿಸುವಂತೆ ಸಾರಿಗೆ ನೌಕರರಿಗೆ ಹೇಳುತ್ತೇವೆ ಎಂದು ಸುಬ್ಬರಾವ್ ಹೇಳಿದರು.

ಸಂಬಳ ಹೆಚ್ಚಳ ವಿಚಾರದಲ್ಲಿ ಸರ್ಕಾರ ನಮಗೆ ಒಪ್ಪುವ ನಿರ್ಧಾರ ಮಾಡಲಿ ಎನ್ನುವುದು ನಮ್ಮ ನಿರೀಕ್ಷೆ. ಈ ಮಧ್ಯೆ ಕೋಡಿಹಳ್ಳಿ ನಿಮ್ಮನ್ನ ಹೈಜಾಕ್ ಮಾಡ್ತಿದ್ದಾರಾ ಎಂದು ಪತ್ರಕರ್ತರು ಕೆಳಿದ ಪ್ರಶ್ನೆಗೆ ಉತ್ತರ ನೀಡಿದ ಸುಬ್ಬರಾವ್, ಅನಂತ್ ಸುಬ್ಬರಾವ್ಅ​ನ್ನು ಹೈಜಾಕ್ ಮಾಡಬಹುದು, ಆದರೆ‌ ನೌಕರರ ಫೆಡರೇಷನ್ ಅನ್ನು ಹೈಜಾಕ್ ಮಾಡಲು ಸಾಧ್ಯವಿಲ್ಲ. ರಾತ್ರೋರಾತ್ರಿ ಬಂದ್​ಗೆ ಕರೆ ನೀಡಿರುವುದು ಸರಿನಾ? ಎಂದು ಕೋಡಿಹಳ್ಳಿ ವಿರುದ್ಧ ಸುಬ್ಬರಾವ್ ವಾಗ್ದಾಳಿ ನಡೆಸಿದ್ದಾರೆ.

ಎಸ್ಮಾ ಯಾವಾಗ ಜಾರಿ ಮಾಡ್ತೀರಿ ಸಿಎಂ ಸಾಹೇಬ್ರೇ?.. ನಮ್ಮನ್ನೆಲ್ಲಾ ಯಾವ ಜೈಲಿಗೆ ಕಳಿಸ್ತೀರಿ? -BSYಗೆ ಕೋಡಿಹಳ್ಳಿ ಸವಾಲ್​

Published On - 1:57 pm, Sun, 13 December 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!