ಕೊರೊನಾ ಭೀತಿಯ ನಡುವೆಯೂ ತಲಕಾಡು ಪಂಚಲಿಂಗ ದರ್ಶನದ ಸಂಭ್ರಮ

ಏಳು ವರ್ಷಗಳ ಬಳಿಕ ತಲಕಾಡಿನಲ್ಲಿ ಪಂಚಲಿಂಗ ದರ್ಶನ ನಡೆಯುತ್ತಿದ್ದು, ನಾಳೆ (ಡಿ.14) ಸಿಎಂ ಯಡಿಯೂರಪ್ಪ ಪಂಚಲಿಂಗ ದರ್ಶನ ಪಡೆಯಲಿದ್ದಾರೆ.

ಕೊರೊನಾ ಭೀತಿಯ ನಡುವೆಯೂ ತಲಕಾಡು ಪಂಚಲಿಂಗ ದರ್ಶನದ ಸಂಭ್ರಮ
ಕತ್ತಲಲ್ಲಿ ಕಂಗೊಳಿಸಿದ ತಲಕಾಡು ಪಂಚಲಿಂಗೇಶ್ವರ ದೇಗುಲ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 13, 2020 | 5:20 PM

ಮೈಸೂರು: ಕೊರೊನಾ ಸೋಂಕು ಹರಡುವ ಭೀತಿಯ ನಡುವೆಯೂ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿ‌ನ ತಲಕಾಡಿನ ಪಂಚಲಿಂಗ ದರ್ಶನ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಡಿ.10 ರಂದು ಇದಕ್ಕೆ ಚಾಲನೆ ಸಿಕ್ಕಿದ್ದು, ಅಂಕುರಾರ್ಪಣ ನಡೆದಿದೆ. ಏಳು ವರ್ಷಗಳ ಬಳಿಕ ಪಂಚಲಿಂಗ ದರ್ಶನ ನಡೆಯುತ್ತಿದ್ದು, ನಾಳೆ (ಡಿ.14) ಸಿಎಂ ಯಡಿಯೂರಪ್ಪ ಪಂಚಲಿಂಗ ದರ್ಶನ ಪಡೆಯಲಿದ್ದಾರೆ.

ಪಂಚಲಿಂಗ ದರ್ಶನ ಸಾಮಾನ್ಯವಾಗಿ 3, 5, 7, 12, 13 ವರ್ಷಗಳ ಅಂತರದಲ್ಲಿ ನಡೆಯುತ್ತದೆ. ಕಳೆದ ಬಾರಿ 2013 ರಲ್ಲಿ ಪಂಚಲಿಂಗ ದರ್ಶನ ನಡೆದಿತ್ತು. ಇದೀಗ ಏಳು ವರ್ಷಗಳ ನಂತರ ಪಂಚಲಿಂಗ ದರ್ಶನ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ 5 ಸೋಮವಾರ ಬರುವ ಸಂದರ್ಭದಲ್ಲಿ ಸೂರ್ಯ ವೃಶ್ಚಿಕ ಮಾಸದ 5ನೇ ಸೋಮವಾರದ ಅಮಾವಾಸ್ಯೆ ದಿನ ಪಂಚಲಿಂಗ ದರ್ಶನ ನಡೆಯುತ್ತದೆ. ಸದ್ಯ ಪಂಚಾಂಗದ ಪ್ರಕಾರ ಈ ವರ್ಷದಲ್ಲಿ ಘಳಿಗೆ ಬಂದಿರುವ ಕಾರಣದಿಂದ ಪಂಚಲಿಂಗ ದರ್ಶನ ನಡೆಸಲಾಗುತ್ತಿದೆ.

ಪಂಚಲಿಂಗ ದರ್ಶನ 10 ದಿನಗಳ ಕಾಲ ನಡೆಯಲಿದ್ದು, ಡಿ.10ಕ್ಕೆ ಪ್ರಾರಂಭವಾಗಿರುವ ಮಹೋತ್ಸವ ಡಿ.19 ರವರೆಗೆ ನಡೆಯಲಿದೆ. ಈ ಬಾರಿ ಕೋವಿಡ್-19 ಕಾರಣದಿಂದ ಸರಳವಾಗಿ ಪಂಚಲಿಂಗ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಪಂಚಲಿಂಗ ದರ್ಶನಕ್ಕೆ ಬರುವ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲು ಜಿಲ್ಲಾಡಳಿತ ಆದೇಶ ಮಾಡಿದೆ.

ಭಕ್ತಿ, ಭಾವಗಳ ಸಮ್ಮಿಲನದಲ್ಲಿ ತಲಕಾಡು.

ಡಿ.11 ರಂದು ಧ್ವಜಾರೋಹಣ, ರಕ್ಷಾ ಬಂಧನ ನಡೆದಿದ್ದು, 12 ರಂದು, ಪುಷ್ಪ ಮಂಟಪಾರೋಹಣ ನಡೆದಿದೆ. ಡಿ.13 ರಂದು ವೃಷಭಾರೋಹಣ, 14 ರಂದು ಪಂಚಲಿಂಗ ದರ್ಶನ ಹಾಗೂ ದ್ವಜಾರೋಹಣ ಉತ್ಸವ ನಡೆಯಲಿದೆ. ಡಿ.15ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಡಿ.16 ರಂದು ಶಯನೋತ್ಸವ ಅಶ್ವಾರೋಹಣ ನಡೆಯಲಿದೆ. ಡಿ.17 ರಂದು ಅವಭೃತ ತೀರ್ಥ ಸ್ನಾನ ತೆಪ್ಪೋತ್ಸವ ನಡೆಯಲಿದೆ. ಡಿ.18 ರಂದು ಮಹಾಭಿಷೇಕ ಪಂಚೋಪಚಾರ ಪೂರ್ವಕ ಕೈಲಾಸ ವಾಹನೋತ್ಸವ ನಡೆಯಲಿದೆ. ಕಡೆಯ ದಿನವಾದ 19 ರಂದು ನಂದಿವಾಹನೋತ್ಸವ ಮೂಲಕ ಪಂಚಲಿಂಗ ದರ್ಶನಕ್ಕೆ ತೆರೆಬೀಳಲಿದೆ.

ತಲಕಾಡು ಪಂಚಲಿಂಗ ದರ್ಶನ

ಪಂಚ ದೇಗುಲಗಳು: ಶಿವನ‌ ಐದು ಮುಖಗಳೇ ಪಂಚಲಿಂಗವಾಗಿದ್ದು, ಈ ಪಂಚಲಿಂಗ ಸಮೂಹ ದೇವಸ್ಥಾನಗಳಾದ ವೈದ್ಯನಾಥೇಶ್ವರ, ಪಾತಾಳೇಶ್ವರ, ಮರಳೇಶ್ವರ, ಅರ್ಕೇಶ್ವರ, ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳಲ್ಲಿ ಈ ಪಂಚಲಿಂಗ ದರ್ಶನ ನಡೆಯಲಿದೆ. ಇಲ್ಲಿನ ಒಂದೊಂದು ದೇವಾಲಯಗಳಿಗೂ ಒಂದೊಂದು ಐತಿಹ್ಯವಿದೆ.

ವೈದ್ಯನಾಥೇಶ್ವರ: ತಲ ಮತ್ತು ಕಾಡ ಎಂಬ ಬೇಡರಿಗೆ ಮೋಕ್ಷ ಪ್ರಧಾನಿಸಿದ ಪರಮೇಶ್ವರ ಇಲ್ಲಿ ತಾನೇ ಸ್ವಯಂ ವೈದ್ಯ ಮಾಡಿಕೊಂಡಿದ್ದನಂತೆ. ಇದರಿಂದ ಶಿವನನ್ನ ಇಲ್ಲಿ ವೈದ್ಯನಾಥೇಶ್ವನಾಗಿ ಪೂಜೆ ಮಾಡಲಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ಪೂಜೆ ಮಾಡಿದರೆ ಸಕಲ ರೋಗ ರುಜುನೆಗಳು ವಾಸಿಯಾಗುತ್ತದೆ ಎಂಬ ನಂಬಕೆ ಸಹ ಇದೆ. ಈ ನಿಟ್ಟಿನಲ್ಲಿ ವೈದ್ಯನಾಥನಿಗೆ ಅಗ್ರ ಪೂಜೆಯನ್ನು ಮಾಡಲಾಗುತ್ತದೆ.

ಏಳು ವರ್ಷಗಳ ಬಳಿಕ ನಡೆಯುತ್ತಿರುವ ಪಂಚಲಿಂಗ ದರ್ಶನಕ್ಕೆ ಆಗಮಿಸಿದ ಭಕ್ತರು

ಅರ್ಕನಾಥೇಶ್ವರ: ಗ್ರಹಗಳಿಗೆಲ್ಲಾ ಅಧಿಪತಿಯಾಗಲು, ಪುರಾಣದಲ್ಲಿ ಸೂರ್ಯನಿಂದ ಪೂಜಿಸಲ್ಪಟ್ಟ ಶಿವಲಿಂಗವೇ ಅರ್ಕನಾಥೇಶ್ವರನೆಂದು ಪ್ರಸಿದ್ಧಿಯಾಗಿದೆ. ಇದು ತಲಕಾಡಿನಲ್ಲಿ ವೈದ್ಯನಾಥೇಶ್ವರ ದೇಗುಲದ ಪೂರ್ವ ದಿಕ್ಕಿಗೆ ಮೂರು ಮೈಲಿ ದೂರದ ವಿಜಯಪುರದಲ್ಲಿದ್ದು, ಸಕಲ ಸಂಕಷ್ಟ ನಿವಾರಕ ಲಿಂಗವೆನಿಸಿದೆ. ಅರ್ಕನಾಥೇಶ್ವರನ ಅರ್ಚನೆಗೆ ಮಾಘ ಶುದ್ಧ ಸಪ್ತಮಿ ದಿನವು ಬಹಳ ಶ್ರೇಷ್ಠವಾಗಿದೆ ಎಂದು ಹೇಳಲಾಗುತ್ತದೆ.

ಪಾತಾಳೇಶ್ವರ: ನಾಗಲೋಕದ ಚಕ್ರಾಧಿಪತ್ಯಕ್ಕಾಗಿ ವಾಸುಕಿಯಿಂದ ಪೂಜಿತಗೊಂಡಿರುವ ಈ ಶಿವಲಿಂಗವೇ ಪಾತಾಳೇಶ್ವರ. ವಾಸುಕೀಶ್ವರನೆಂಬುವುದು ಪಾತಾಳೇಸ್ವರನ ಮತ್ತೊಂದು ಹೆಸರಾಗಿದೆ. ಈ ದೇವಾಲಯ ಬೇರೆ ದೇವಾಲಗಳಿಗಿಂದ ಆಳದಲ್ಲಿರುವ ಕಾರಣ ಪಾತಾಳೇಶ್ವರನೆಂದೇ ಹೆಸರಾಗಿದೆ. ಇದರ ಪೂಜೆಗೆ ಶ್ರಾವಣ ಶುದ್ಧ ಪಂಚಮಿ ಅತ್ಯಂತ ಶ್ರೇಷ್ಠ ದಿವಸವಾಗಿದೆ. ಈ ಲಿಂಗವು ಪ್ರತಿದಿನ ಐದು ಬಣ್ಣಗಳನ್ನು ತಾಳುತ್ತದೆಂದು ಹೇಳಲಾಗುತ್ತದೆ.

ಮರಳೇಶ್ವರ: ತಲಕಾಡಿನ ಮರಳಿಗೆಲ್ಲ ಒಡೆಯನೆಂದೆ ಮರಳೇಶ್ವರನನ್ನ ಕರೆಯಲಾಗುತ್ತದೆ. ಮರಳೇಶ್ವರ ಬ್ರಹ್ಮನಿಂದ ಪೂಜಿಸಲ್ಪಟ್ಟವನು ಎಂದು‌ ಹೇಳಲಾಗುತ್ತದೆ. ಇದರಿಂದ ಮರಳೇಶ್ವರನಿಗೆ ಸೈತಕೇಶ್ವರನೆಂಬ ಹೆಸರಿನಿಂದ ಕರೆಯಲಾಗುತ್ತದೆ. ಇದರಿಂದ ಈ ದೇವಾಲಯದಲ್ಲಿ ಪೂಜೆ ಮಾಡಿ ಬೇಡಿಕೊಂಡರೆ ಬೇಡಿದ ವರವನ್ನು ಕೊಡುತ್ತಾನೆ ಎಂಬ ನಂಬಿಕೆ‌ ಇದೆ.

ಮಲ್ಲಿಕಾರ್ಜುನೇಶ್ವರ: ಕಾಮಧೇನುವಿನಿಂದ ಪೂಜೆಗೊಳ್ಳುತ್ತಿದ್ದ ಶಿವಲಿಂಗವೇ ಮಲ್ಲಿಕಾರ್ಜುನೇಶ್ವರ. ಈ ಮಲ್ಲಿಕಾರ್ಜುನೇಶ್ವರ 300 ಅಡಿ ಎತ್ತರದ ಮುಡುಕುತೊರೆ ಬೆಟ್ಟದಲ್ಲಿ ನೆಲೆಸಿದ್ದಾನೆ. ಈತ ಕೂಡ ಕೇಳಿದ ವರವನ್ನ ಕೊಡುತ್ತಾನೆ ಎಂದು ಭಕ್ತರ ನಂಬಿಕೆಯಾಗಿದೆ. ಇಲ್ಲಿ ಕಾವೇರಿ ನದಿಯು 4 ದಿಕ್ಕುಗಳಲ್ಲಿ ಹರಿಯುವುದು ಕ್ಷೇತ್ರದ ವಿಶೇಷವಾಗಿದೆ.

ದೇವಾಲಯದ ಪ್ರಾಂಗಣ

ತಲಕಾಡು ಅಲಮೇಲಮ್ಮನ ಶಾಪ 

ಈ ಶಾಪದ ಕಾರಣದಿಂದ ತಲಕಾಡಿನಲ್ಲಿ ಎತ್ತ ಕಾಲಿಟ್ಟರೂ ಮರಳು ಸಿಗುತ್ತದೆ. ಶ್ರೀರಂಗಪಟ್ಟಣವನ್ನು ವಿಜಯನಗರದ ಅರಸರು ಆಳುತ್ತಿದ್ದರು. ಶ್ರೀರಂಗರಾಯ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪತಟ್ಟಣದಲ್ಲಿ ಆಳುತ್ತಿದ್ದ. ಆ ಕಾಲದಲ್ಲಿ ಆತನಿಗೆ ರೋಗವೊಂದು ಕಾಣಿಸಿಕೊಳ್ಳುತ್ತದೆಯಂತೆ. ಈ ವೇಳೆ ರಂಗರಾಯ ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ಬರುತ್ತಾನಂತೆ. ಆದರೆ ಆ ಸಂಧರ್ಭದಲ್ಲಿ ರೋಗ ಉಲ್ಬಣಗೊಂಡು ಶ್ರೀರಂಗರಾಯ ತಲಕಾಡಿನಲ್ಲೇ ಸಾವಿಗೀಡಾಗುತ್ತಾನಂತೆ. ಈ ಸಂದರ್ಭವನ್ನೇ ಉಪಯೋಗಿಸಿಕೊಂಡ ಮೈಸೂರಿನ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರಂತೆ.

ಆಗ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಿರುತ್ತಾಳಂತೆ. ಈ ವೇಳೆ ಅಲಮೇಲಮ್ಮನ ಬಳಿ ಇದ್ದ ಅತ್ಯಂತ ಮೌಲ್ಯದ ಮೂಗುತಿ ಹಾಗೂ ಒಡವೆಗಳನ್ನ ಮೈಸೂರಿನ ಅಂದಿನ ರಾಜರೊಬ್ಬರು ಕಿತ್ತುಕೊಳ್ಳಲು ಮುಂದಾಗುತ್ತಾರಂತೆ. ಈ‌ ವೇಳೆ ಕೋಪಗೊಂಡ ಅಲಮೇಲಮ್ಮ ಒಡವೆಗಳೊಂದಿಗೆ ಕಾವೇರಿ ನದಿಗೆ ಹಾರುತ್ತಾಳಂತೆ.‌ ಈ ವೇಳೆ ಆಕೆ ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿಎಂದು ಶಾಪಹಾಕುತ್ತಾಳಂತೆ. ಅಂದಿನಿಂದ ತಲಕಾಡು ಮರಳಾಗುತ್ತದೆ, ಮಾಲಂಗಿ‌‌ ಮಡುವಾಗಿದೆ,‌ ಮೈಸೂರು ಅರಸರಿಗೆ ಮಕ್ಕಳಾಗುತ್ತಿಲ್ಲ ಎಂಬ ಕಥೆಗಳು ಇಂದಿಗೂ ಜನಜನಿತವಾಗಿದೆ.

ಪಂಚಲಿಂಗ ದರ್ಶನದಲ್ಲಿ ಮುಖ್ಯಮಂತ್ರಿಗಳು: 1993 ರಲ್ಲಿ ವೀರಪ್ಪ ಮೋಯ್ಲಿ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಿದ್ದರು. ನಂತರ 2006 ರಲ್ಲಿ ಕುಮಾರಸ್ವಾಮಿ ಚಾಲನೆ ನೀಡಿದ್ದರು.‌ 2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಿದ್ದರು. 2013 ಸಿದ್ದರಾಮಯ್ಯ ಸಿಎಂ ಆಗಿ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಿರುತ್ತಾರೆ. ಇದೀಗಾ ಯಡಿಯೂರಪ್ಪ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪಂಚಲಿಂಗ ದರ್ಶನದಲ್ಲಿ‌ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ದಿಲೀಪ್ ಚೌಡಹಳ್ಳಿ

Photo Gallery | ತಲಕಾಡು ಪಂಚಲಿಂಗ ದರ್ಶನದ ಚಿತ್ರ ಮಾಲಿಕೆ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್