ಡ್ರಗ್ಸ್ ಕೇಸ್ನಲ್ಲಿ ತಗ್ಲಾಕ್ಕೊಂಡಿರೋ ಆ್ಯಂಕರ್ ಅನುಶ್ರೀ ಫೋನ್ ಕರೆಯಿಂದಾಗಿ ಈಗ ರಾಜ್ಯದ ಘಟಾನುಘಟಿ ನಾಯಕರು ಅಕ್ಷರಶ: ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಜಿ ಸಿಎಂ ಸೇರಿದಂತೆ ಪ್ರಭಾವಿಗಳು ಬಚಾವ್ ಆಗೋಕೆ ಈಗ ಪೊಲೀಸರ ಮೇಲೆಯೇ ಒತ್ತಡ ಹೇರ್ತಿದ್ದಾರಂತೆ. ಅನುಶ್ರೀ ಕಾಲ್ ರೆಕಾರ್ಡ್ನ್ನ ನಾಶಗೊಳಿಸೋಕೆ ಪ್ರಭಾವಿಗಳು ಯತ್ನಿಸ್ತಿದ್ದು, ಪೊಲೀಸರು ಹೈರಾಣಾಗಿ ಹೋಗಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರಿಗೆ ಆ್ಯಂಕರ್ ಅನುಶ್ರೀ ಮಾಡಿರೋ ಫೋನ್ ಕಾಲ್ ವಿಚಾರ ಈಗ ರಾಜ್ಯದ ಹಾಟೆಸ್ಟ್ ಟಾಪಿಕ್. ಮನೆ ಮನೆಯಲ್ಲೂ ಹೆಸರು ಮಾಡಿರೋ ಅನುಶ್ರೀ, ಸಿಸಿಬಿ ನೋಟಿಸ್ ಬರ್ತಿದ್ದ ಹಾಗೆ ರಾಜ್ಯವನ್ನಾಳಿದ ನಾಯಕರಿಗೇ ಕರೆ ಮಾಡಿ ಮಾತನಾಡಿರೋದು ಈಗಾಗ್ಲೇ ಇಡೀ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದೆ. ಅದ್ರಲ್ಲೂ ಮೊನ್ನೆ ಸಿಎಂ ಕುಮಾರಸ್ವಾಮಿ ಫುಲ್ ಗರಂ ಆಗಿ ಮಾತನಾಡಿರೋದು ಧಗಿಧಗಿಸ್ತಿದ್ದ ಪ್ರಕರಣಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಇದ್ರ ಬೆನ್ನಲ್ಲೇ ಈಗ ಮತ್ತೊಂದು ಸ್ಫೋಟಕ ಬೆಳವಣಿಗೆಯ ಮಾಹಿತಿ ಟಿವಿ9ಗೆ ಸಿಕ್ಕಿದೆ.
ನಿಜ, ಆ್ಯಂಕರ್ ಅನುಶ್ರೀ ಫೋನ್ ಕಾಲ್‌ನಿಂದ ಈಗ ಅಕ್ಷರಶಃ ಆ ಮಾಜಿ ಸಿಎಂ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಎಲ್ಲಿ ತಮ್ಮ ಹೆಸ್ರು ಬಯಲಾಗುತ್ತೋ ಅನ್ನೋ ಭೀತಿಗೆ ಬಿದ್ದಿದ್ದಾರಂತೆ. ಯಾಕಂದ್ರೆ ಕಾಲ್ ಮಾಡಿದ, ಅನುಶ್ರೀ ಕಾಲ್ ರಿಸೀವ್ ಮಾಡಿದ ಆ ಮಾಜಿ ಸಿಎಂ ಈಗ ಬಚಾವ್ ಆಗೋಕೆ ಪರದಾಡ್ತಿದ್ದರಂತೆ.
ಕಾಲ್ ರೆಕಾರ್ಡ್ಸ್ ನಾಶಕ್ಕೆ ಮೇಲಿಂದ ಮೇಲೆ ಆ ಮಾಜಿ ಸಿಎಂ ಒತ್ತಡ..!
ಯೆಸ್..ಅನುಶ್ರೀಗೆ ಕರೆ ಮಾಡಿದ ಆ ಮಾಜಿ ಮುಖ್ಯಮಂತ್ರಿಗೆ ಈಗ ಕೆಲ ದಿನಗಳಿಂದ ನೆಟ್ಟಗೆ ನಿದ್ರೆಯೇ ಬರ್ತಿಲ್ಲ. ಎಲ್ಲಿ ತಮ್ಮ ಹೆಸ್ರು ಬಟಾಬಯಲಾಗುತ್ತೋ ಅಂತ ಕಂಗಾಲಾಗಿರೋ ಆ ಮಾಜಿ ಸಿಎಂ ಈಗ ದೊಡ್ಡ ದುಸ್ಸಾಹಸಕ್ಕೇ ಕೈ ಹಾಕಿದ್ದಾರಂತೆ. ಆ ಮಾಜಿ ಸಿಎಂ ಮಾಡ್ತಿರೋ ದುಸ್ಸಾಹಸ ಮತ್ಯಾವುದೂ ಅಲ್ಲ, ಕಾಲ್ ರೆಕಾರ್ಡ್ಸ್ ನಾಶ.
ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಖಾಕಿ ಪಡೆ ಕಂಗಾಲು..!
ಹೌದು..ಅನುಶ್ರೀಗೆ ಕಾಲ್ ಮಾಡಿದ ಆ ಮಾಜಿ ಮುಖ್ಯಮಂತ್ರಿ ಹಾಗೂ ಇನ್ನೂ ಮೂವರು ರಾಜಕಾರಣಿಗಳು ಈಗ ಕಾಲ್ ರೆಕಾರ್ಡ್ಸ್ನ್ನೇ ನಾಶಗೊಳಿಸೋಕೆ ಪೊಲೀಸ್ ಅಧಿಕಾರಿಗಳಿಗೆ ತೀವ್ರ ಒತ್ತಡ ಹೇರ್ತಿದ್ದಾರಂತೆ. ಈ ಮೂಲಕ ಪ್ರಕರಣದ ದಿಕ್ಕು ತಪ್ಪಿಸೋ ಯತ್ನ ನಡೀತಿದೆ ಎನ್ನಲಾಗಿದೆ. ಪ್ರಭಾವಿ ರಾಜಕಾರಣಿಗಳ ಕಾಟಕ್ಕೆ ಪೊಲೀಸರೇ ಹೈರಾಣಾಗಿ ಹೋಗಿದ್ದಾರಂತೆ.
ಅಷ್ಟಕ್ಕೂ ಪ್ರಭಾವಿ ರಾಜಕಾರಣಿಗಳು ಅನುಶ್ರೀ ಕಾಲ್ ಕಂಟಕದಿಂದ ಬಚಾವಾಗೋಕೆ ಮಾಡ್ತಿರೋದೇನು? ಪೊಲೀಸರಿಗೆ ಯಾವ ರೀತಿ ಒತ್ತಡ ಹೇರ್ತಿದ್ದಾರೆ ಅಂತಾ ಹೇಳ್ತೀವಿ ನೋಡಿ..
ಮಾಜಿ ಸಿಎಂಗೆ ‘ಕಾಲ್’ ಕಂಟಕವಾಗುತ್ತಿದ್ದು ತಮ್ಮ ಹೆಸರು ಕಾಲ್ ಲಿಸ್ಟ್ನಲ್ಲಿದೆಯಾ ಅಂತಾ ಕ್ರಾಸ್ ಚೆಕ್ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಸಂಪರ್ಕಿಸಿ ಪಿಎ, ಆಪ್ತರ ನಂಬರ್ ಇದೆಯಾ ಅಂತಾ ಚೆಕ್. ಹೆಸರಿಲ್ಲದೆ ಸೇವ್ ಆಗಿದ್ದ 15 ನಂಬರ್ಗಳ ಮಾಲೀಕರಿಗೂ ಈಗ ಢವಢವ. ಮಾಜಿ ಸಿಎಂ ಒಬ್ಬರು ಕರೆ ಮಾಡಿದ್ದ ಮಾಹಿತಿಯಂತು ಪಕ್ಕಾ ಆಗಿದೆ.
ಸೆಪ್ಟೆಂಬರ್ 24ರ ರಾತ್ರಿ 10 ಗಂಟೆಯ ಒಳಗೆ 3 ಬಾರಿ ಕಾಲ್ ಹೋಗಿದೆ. ಮಾರನೇ ದಿನ ಕೂಡ ಮಾಜಿ ಸಿಎಂಗೆ ಕರೆ ಮಾಡಿದ್ದ ಅನುಶ್ರೀ. ಪ್ರಕರಣದ ಹಿನ್ನೆಲೆ ಹಲವು ಬಾರಿ ಕರೆ ಮಾಡಿದ್ದ ಬಗ್ಗೆ ಶಂಕೆ..? ಮಾಜಿ ಸಿಎಂ ಜೊತೆಗೆ ಮಾತನಾಡಿದ್ದ ಸಮಯವೂ ನಮೂದು. ಸ್ವತಃ ಗುಪ್ತಚರ ಇಲಾಖೆಯೂ ಈಗ ಕೇಸ್ ಕುರಿತು ಮಾಹಿತಿ ಕಲೆ ಹಾಕುತ್ತಿದೆ.
‘ಹೆಣ್ಣಿನ ಮೂಲವನ್ನ ಅರಿಯೋದಕ್ಕೆ ಆಗಲ್ಲ’ ಹೆಚ್ಡಿಕೆಗೆ ಸಚಿವ ಸಿ.ಟಿ. ರವಿ ತಿರುಗೇಟು..!
ಈ ಮಧ್ಯೆ, ಡ್ರಗ್ಸ್ ಕೇಸ್ನಲ್ಲಿ ಪ್ರಭಾವಿ ರಾಜಕಾರಣಿ ಹಸ್ತಕ್ಷೇಪ ವಿಚಾರ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. ಅನಧಿಕೃತ ಸುದ್ದಿಗೆ ಮಾಜಿ ಸಿಎಂ ಉತ್ತರಿಸಬೇಕಾಗಿರಲಿಲ್ಲ. ಹೆಣ್ಣಿನ ಮೂಲವನ್ನೂ ಅರಿಯೋದಕ್ಕೆ ಆಗಲ್ಲ. ಹಾಗೆಯೇ ಸುದ್ದಿ ಮೂಲ ಕೆದಕಿಕೊಂಡು ಹೋಗಬಾರದು ಎಂದಿದ್ದಾರೆ ಸಚಿವ ಸಿ.ಟಿ. ರವಿ.
ಒಟ್ನಲ್ಲಿ ಮಾಜಿ ಸಿಎಂ ಸೇರಿದಂತೆ ಪ್ರಭಾವಿ ರಾಜಕಾರಣಿಗಳಿಗೆ ಈಗ ಅನುಶ್ರೀ ಕಾಲ್ ಕೇಸ್ ಕಂಟಕವಾಗಿ ಪರಿಣಮಿಸಿದ್ದು, ಸೇಫ್ ಆಗೋಕೆ ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಆದ್ರೆ, ಖಾಕಿ ತನಿಖೆಯಲ್ಲಿ ಈ ನಾಯಕರೂ ತಗ್ಲಾಕ್ಕೊಳ್ತಾರಾ ಅನ್ನೋದೇ ಸದ್ಯದ ಕುತೂಹಲ.
Published On - 8:27 am, Mon, 5 October 20