ಕೊರೊನಾ ವೈರಸ್ ಹರಡುತ್ತಿದೆ.. ಮಾರಿ ಹಬ್ಬ ಮಾಡಬೇಡಿ ಎಂದ ಅಂಗನವಾಡಿ ಕಾರ್ಯಕರ್ತೆಯ ಮನೆಗೆ ನುಗ್ಗಿ ಹಲ್ಲೆ
anganwadi worker: ನಿನ್ನೆ ಮಂಗಳವಾರ ಗ್ರಾಮ ದೇವತೆಯ ಹಬ್ಬ ಇತ್ತು. ದೇವಾಲಯದ ಮುಂಭಾಗ ಮೇಕೆ ಬಲಿ ನೀಡುವ ಮೂಲಕ ಹಬ್ಬ ಆಚರಣೆ ನಡೆದಿತ್ತು. ಆಗ ಅಂಗನವಾಡಿ ಕಾರ್ಯಕರ್ತೆ ಮಂಗಳ ಗೌರಿ ಅವರು ಕೊರೊನಾ ವೈರಸ್ ಹರಡುತ್ತಿದೆ. ಗುಂಪುಗೂಡಬೇಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳುಗಳಿಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು: ಕೊರೊನಾ ಸೋಂಕು ಕಾಲದಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಈ ಅಸಹಾಯಕ ಕೊರೊನಾ ವಾರಿಯರ್ಸ್ ಮೇಲೆ ಆಗಾಗ್ಗೆ ಅಲ್ಲಲ್ಲಿ ಹಲ್ಲೆ, ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ಅಂಗನವಾಡಿ ಕೊರೊನಾ ವಾರಿಯರ್ಸ್ ರಕ್ಷಣೆ ಎಂಬುದು ದುಸ್ತರವಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕುರುಬರ ಹೊಸಳ್ಳಿ ಗ್ರಾಮದಲ್ಲಿಯೂ ನಿನ್ನೆ ಇಂತಹುದೇ ಘಟನೆ ನಡೆದಿದೆ.
ಕೊರೊನಾ ವೈರಸ್ ಹರಡುತ್ತಿದೆ… ಕೊರೊನಾ ಲಾಕ್‌ಡೌನ್ ನಡುವೆ ಮಾರಿ ಹಬ್ಬ ಮಾಡಬೇಡಿ ಎಂದ ಅಂಗನವಾಡಿ ಕಾರ್ಯಕರ್ತೆಯ ಮನೆಗೆ ನುಗ್ಗಿ, ಮೂವರ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಹುಣಸೂರು ತಾಲೂಕಿನ ಕುರುಬರ ಹೊಸಳ್ಳಿ ಗ್ರಾಮದಲ್ಲಿ ನಡೆದ ಈ ಹಲ್ಲೆ ಪ್ರಕರಣದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಂಗಳ ಗೌರಿ, ಅಕ್ಕ ಸರೋಜಮ್ಮ, ಪುತ್ರ ಶರತ್ ಅವರಿಗೆ ಗಾಯಗಳಾಗಿವೆ.
ನಿನ್ನೆ ಮಂಗಳವಾರ ಗ್ರಾಮ ದೇವತೆಯ ಹಬ್ಬ ಇತ್ತು. ದೇವಾಲಯದ ಮುಂಭಾಗ ಮೇಕೆ ಬಲಿ ನೀಡುವ ಮೂಲಕ ಹಬ್ಬ ಆಚರಣೆ ನಡೆದಿತ್ತು. ಆಗ ಅಂಗನವಾಡಿ ಕಾರ್ಯಕರ್ತೆ ಮಂಗಳ ಗೌರಿ ಅವರು ಕೊರೊನಾ ವೈರಸ್ ಹರಡುತ್ತಿದೆ. ಗುಂಪುಗೂಡಬೇಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಆಕೆಯ ಮನೆಗೆ ನುಗ್ಗಿ, ಮನೆಯಲ್ಲಿದ್ದ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳುಗಳಿಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
(anganwadi worker family members beaten up in kurubara hosahalli village in hunsur)