Mysore News: ಅನ್ನಭಾಗ್ಯ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ: ಸಿಎಂ ಸಿದ್ದರಾಮಯ್ಯ

|

Updated on: Jun 10, 2023 | 1:21 PM

ಕಾಂಗ್ರೆಸ್​ ಸರ್ಕಾರದ 5 ಉಚಿತ ಗ್ಯಾರೆಂಟಿಗಳಲ್ಲಿ ಒಂದಾದ "ಅನ್ನಭಾಗ್ಯ" ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆಯಲಿದೆ.

Mysore News: ಅನ್ನಭಾಗ್ಯ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಮೈಸೂರು: ಕಾಂಗ್ರೆಸ್​ ಸರ್ಕಾರದ 5 ಉಚಿತ ಗ್ಯಾರೆಂಟಿಗಳಲ್ಲಿ (Free guarantee) ಒಂದಾದ “ಅನ್ನಭಾಗ್ಯ” (Anna Bhagya Scheme) ಯೋಜನೆಗೆ ಮೈಸೂರು (Mysore) ಜಿಲ್ಲೆಯಲ್ಲಿ ಚಾಲನೆ ದೊರೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತನಾಡಿ ಅನ್ನಭಾಗ್ಯ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ನೀಡುತ್ತೇವೆ. ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುತ್ತೇವೆ. ನಾಳೆ (ಜೂ.11) ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದೇವೆ. ನಾಳೆಯಿಂದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ ಎಂದು ಹೇಳಿದರು.

ನಂಜನಗೂಡು ತಾಲೂಕಿನ ಸುತ್ತೂರು ಹೆಲಿಪ್ಯಾಡ್​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವರುಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ಒತ್ತಾಯ ವಿಚಾರವಾಗಿ ಮಾತನಾಡಿದ ಅವರು ತಾಲೂಕು ಕೇಂದ್ರ ಮಾಡಬೇಕೆಂದು ವರುಣ ಜನ ಕೇಳಿದರೇ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರೇ ಮಾಡುವುದಿಲ್ಲ. ವರುಣವನ್ನು ತಾಲೂಕು ಮಾಡುತ್ತೇವೆ ಅಂತ ಬಿಜೆಪಿಯವರು ಹೇಳಿದ್ದರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ತೆರಿಗೆ ಪಾವತಿಸುವ ಮಕ್ಕಳಿದ್ದರೂ ತಾಯಂದಿರಿಗೆ ಸಿಗಲಿದೆ ಗೃಹಲಕ್ಷ್ಮೀ ಸೌಲಭ್ಯ; ಹೆಬ್ಬಾಳ್ಕರ್

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಸ್ವಕ್ಷೇತ್ರ ವರುಣಾಕ್ಕೆ ಇದೇ ಮೊದಲ ಬಾರಿಗೆ ತೆರಳಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯರಿಂದ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವರುಣಾಕ್ಕೆ ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡುತ್ತಿದ್ದು, ಈ ಹಿನ್ನಲೆ ವರುಣ ಕ್ಷೇತ್ರದ ಜನರು ಬಂಪರ್ ಕೊಡುಗೆ ನಿರೀಕ್ಷೆಯಲ್ಲಿದ್ದಾರೆ.

ಇಂದೇ ವರುಣಾ ಕ್ಷೇತ್ರದಲ್ಲಿ ತಾಲೂಕು ಕೇಂದ್ರ ಘೋಷಣೆ ಮಾಡುವ ಸಾಧ್ಯತೆ ಇದೆ. ಚುನಾವಣೆ ವೇಳೆ ನಂಜನಗೂಡು, ಟಿ.ನರಸೀಪುರ ಹಾಗೂ ಮೈಸೂರು ತಾಲೂಕಗಳಿಗೆ ಹಂಚಿ ಹೋಗಿರುವ ವರುಣಾ ಕ್ಷೇತ್ರವನ್ನ ತಾಲೂಕು ಕೇಂದ್ರ ಮಾಡುವ ಬಗ್ಗೆ ಚರ್ಚೆಯಾಗಿತ್ತು. ಇದೀಗ ಜನರಿಗೆ ಕೃತಜ್ಞತೆ ಸಲ್ಲಿಸಲು ತೆರಳಿರುವ ಸಿಎಂ ಸಿದ್ದಾರಾಮಯ್ಯ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿ ತಾಲೂಕು ಕೇಂದ್ರ ಘೋಷಣೆ ಮಾಡುತ್ತಾರಾ? ಕಾದು ನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ