Electricity Price Hike: ಗ್ರಾಹಕರಿಗೆ ಬರೆ ಎಳೆದ ವಿದ್ಯುತ್ ಕಂಪನಿಗಳು; ಜನರಿಗೆ ಒಂದೇ ತಿಂಗಳಲ್ಲಿ ಬಂದಿದೆ ಒನ್ ಟು ಡಬಲ್ ಬಿಲ್

ಗೃಹ ಜ್ಯೋತಿಗಾಗಿ ಕಾಯುತ್ತಿರುವವರಿಗೆ ವಿದ್ಯುತ್ ಪ್ರಸರಣ ಕಂಪನಿಗಳು ಬರೆ ಎಳೆದಿದೆ. ಹೌದು ಜನರಿಗೆ ಒಂದೇ ತಿಂಗಳಲ್ಲಿ ಒನ್ ಟು ಡಬಲ್ ವಿದ್ಯುತ್​​ ಬಿಲ್ ಬಂದಿದೆ.

Electricity Price Hike: ಗ್ರಾಹಕರಿಗೆ ಬರೆ ಎಳೆದ ವಿದ್ಯುತ್ ಕಂಪನಿಗಳು; ಜನರಿಗೆ ಒಂದೇ ತಿಂಗಳಲ್ಲಿ ಬಂದಿದೆ ಒನ್ ಟು ಡಬಲ್ ಬಿಲ್
ವಿದ್ಯುತ್​ ಬಿಲ್​ ಹೆಚ್ಚಳ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 10, 2023 | 1:29 PM

ಬೆಂಗಳೂರು: ಗೃಹ ಜ್ಯೋತಿಗಾಗಿ ಕಾಯುತ್ತಿರುವವರಿಗೆ ವಿದ್ಯುತ್ ಪ್ರಸರಣ ಕಂಪನಿಗಳು ಬರೆ ಎಳೆದಿದೆ. ಹೌದು ಜನರಿಗೆ ಒಂದೇ ತಿಂಗಳಲ್ಲಿ ಒನ್ ಟು ಡಬಲ್ ವಿದ್ಯುತ್​​ ಬಿಲ್ ಬಂದಿದೆ. ರಾಜ್ಯದ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳು ವಿದ್ಯುತ್ ದರವನ್ನ ಏರಿಕೆ(Electricity Price Hike) ಮಾಡುವ ಮೂಲಕ ಸಾರ್ವಜನಿಕರಿಗೆ ಬರೆ ಎಳೆದಿದೆ. ಕಳೆದ ತಿಂಗಳ ಬಿಲ್​ಗೂ ಈ ಬಿಲ್​ಗೂ ಹೊಂದಾಣಿಕೆಯೇ ಇಲ್ಲದಂತಾಗಿದ್ದು, ಬರೊಬ್ಬರಿ ದುಪ್ಪಟ್ಟು ಏರಿಕೆಯಾಗಿದೆ. ಇನ್ನು ವಿದ್ಯುತ್ ಹೊಂದಾಣಿಕೆ ದರ, ಹಾಗೂ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಬಿಲ್ ಏರಿಕೆಯಾಗಿದ್ದು, ಬಿಲ್​ಗಳಲ್ಲಿ ಬಾಕಿ ಮೊತ್ತ ಎಂದು ನಮೂದಿಸಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿದ್ದಾರೆ. ಇನ್ನು ಏಪ್ರಿಲ್ ತಿಂಗಳಿನಿಂದಲೇ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್(KERC)ವಿದ್ಯುತ್ ದರ ಏರಿಕೆ ಮಾಡಿತ್ತು. ಇದಕ್ಕೆ ಚುನಾವಣೆ ಇರುವ ಹಿನ್ನಲೆ ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಈಗ ಹೊಸ ಸರ್ಕಾರ ಬರ್ತಿದ್ದಂತೆ ಏಪ್ರಿಲ್ ಮೇ ತಿಂಗಳ ಏರಿಕೆ ಮೊತ್ತವನ್ನ ಒಮ್ಮೆಗೆ ಬಿಲ್​ಗೆ ಸೇರಿಸಿದ್ದು, ಬಿಲ್​ನಲ್ಲಿ ಹಳೆ ಬಾಕಿ ಮೊತ್ತವೆಂದು ನಮೂದಿಸಲಾಗಿದೆ.

ಒಮ್ಮೆಗೆ ಡಬಲ್ ಬಿಲ್ ವಸೂಲಿಗೆ ಮುಂದಾದ ಪ್ರಸರಣ ಕಂಪನಿಗಳು

ಉದಾಹರಣೆಗೆ ನೋಡುವುದಾದರೆ ಮೀಟರ್ ಆರ್​ಆರ್ ನಂ. L56791 ಹೀಗಿದ್ದು, ಕಳೆದ ಬಾರಿ ಮೇ ತಿಂಗಳ ಬಿಲ್ ಮೊತ್ತ 881 ರೂಪಾಯಿ ಬಂದಿತ್ತು. ಇದೀಗ ಜೂನ್ ತಿಂಗಳ ವಿದ್ಯುತ್ ಬಿಲ್ ಬಂದಿದ್ದು, ಬರೊಬ್ಬರಿ 2067 ರೂ ಬಂದಿದೆ. ಅದರಂತೆ ಇನ್ನೊಂದು ಮೀಟರ್ ಕುರಿತು ‘ಆರ್ ಆರ್ ನಂಬರ್ W4LG 73189 ಇದ್ದು, ಕಳೆದ ಬಾರಿ ಮೇ ತಿಂಗಳ ಬಿಲ್ 3976 ರೂ ಬಂದಿತ್ತು. ಈ ಬಾರಿ ಜೂನ್ ತಿಂಗಳ ಬಿಲ್ 6052 ರೂ. ಬಂದಿದೆ. ಪ್ರತಿ ಬಿಲ್ ನಲ್ಲೂ ಬಾಕಿ ಮೊತ್ತ ಹಾಗೂ ನಿಗದಿತ ಶುಲ್ಕ ಎಂದು ಹೆಚ್ಚುವರಿ ವಸೂಲಿ ಮಾಡಲಾಗಿದೆ. ಇದೀಗ ಬಿಲ್ ಏರಿಕೆ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿದ್ಯುತ್ ಫ್ರೀ ನಡುವೆಯೇ ಜನರಿಗೆ ಕರೆಂಟ್​ ಶಾಕ್: 2023ರ ಏಪ್ರಿಲ್​ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ, ಎಷ್ಟೆಷ್ಟು? ಇಲ್ಲಿದೆ ವಿವರ

ಜೂನ್ 1ರಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು

‘ಗೃಹಜ್ಯೋತಿ’ ಘೋಷಣೆ ಬೆನ್ನಲ್ಲೇ ಜನತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್​ ನೀಡಿತ್ತು, ಜೂನ್ 1ರಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್, ರಾಜ್ಯದಲ್ಲಿ ಪ್ರತಿ ಯೂನಿಟ್​​ ವಿದ್ಯುತ್​ಗೆ 70 ಪೈಸೆ ಹೆಚ್ಚಳ ಮಾಡಿ, ಮೇ 12ರಂದು ವಿದ್ಯುತ್ ದರ ಏರಿಕೆ ಮಾಡಿ ಆದೇಶ ಪ್ರಕಟಿಸಿತ್ತು. ವಿದ್ಯುತ್ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ಹೆಚ್ಚಳಿಕೆ ಮಾಡಲಾಗಿತ್ತು. ಇದೀಗ ಹೊಸ ಪರಿಷ್ಕೃತ ವಿದ್ಯುತ್​ ದರ ಜೂನ್ 1ರಿಂದಲೇ ಜಾರಿ ಆಗಲಿದೆ ಎಂದು ಹೇಳಿತ್ತು. ಇನ್ನು ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕೆಇಆರ್​ಸಿ ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆಬಿದ್ದಿತ್ತು. ಇದೀಗ ಹಳೆ ಬಾಕಿ ಮೊತ್ತವನ್ನ ಸೇರಿಸಿ ಜನರಿಗೆ ದುಪ್ಪಟ್ಟು ಬಿಲ್​ ನೀಡುವ ಮೂಲಕ ಬರೆ ಎಳೆದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Sat, 10 June 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ