ಮಾರಕಾಸ್ತ್ರಗಳಿಂದ ಕೊಚ್ಚಿ ಕಲಬುರಗಿ ಯುವಕನ ಬರ್ಬರ ಕೊಲೆ

ನಿಖಿಲ್ ಸಂಬಂಧಿಯಾಗಿದ್ದ ಯುವತಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಯುವತಿಯನ್ನು ಮತ್ತೋರ್ವ ಯುವಕನಾದ ಇಂದಿರಾ ನಗರದ ನಿವಾಸಿ ಉದಯ್ ಪ್ರೀತಿಸುತ್ತಿದ್ದನಂತೆ. ಯುವತಿ ನಿಶ್ಚಿತಾರ್ಥ ಪಿಕ್ಸ್ ಆಗಿದ್ದ ಯುವಕನಿಗೆ ಪ್ರೇಮಿ ಫೋನ್ ಮಾಡಿದ್ದನಂತೆ. ಇದೇ ವಿಚಾರವಾಗಿ ಎರಡು ಗುಂಪುಗಳು ನಡುವೆ ಜಗಳವಾಗಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಕಲಬುರಗಿ ಯುವಕನ ಬರ್ಬರ ಕೊಲೆ
ಕೊಲೆಯಾದ ಯುವಕ
Edited By:

Updated on: Jun 06, 2021 | 10:02 AM

ಕಲಬುರಗಿ: ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ವಾಜಪೇಯಿ ಬಡಾವಣೆ ಬಳಿ ನಡೆದಿದೆ. ಕರುಣೇಶ್ವರ ನಗರ ನಿವಾಸಿ ನಿಖಿಲ್ ಕನೇಗಾರ (22) ಕೊಲೆಯಾದ ಯುವಕ. ನಿಖಿಲ್ ಬಜ್ಜಿ ವ್ಯಾಪಾರ ಮಾಡುತ್ತಿದ್ದ. ಯುವಕನ ಸಹೋದರಿ ಮತ್ತು ತಾಯಿ ಮೇಲೆ ಕೂಡಾ ಹಲ್ಲೆ ನಡೆದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಖಿಲ್ ಸಂಬಂಧಿಯಾಗಿದ್ದ ಯುವತಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಯುವತಿಯನ್ನು ಮತ್ತೋರ್ವ ಯುವಕನಾದ ಇಂದಿರಾ ನಗರದ ನಿವಾಸಿ ಉದಯ್ ಪ್ರೀತಿಸುತ್ತಿದ್ದನಂತೆ. ಯುವತಿ ನಿಶ್ಚಿತಾರ್ಥ ಪಿಕ್ಸ್ ಆಗಿದ್ದ ಯುವಕನಿಗೆ ಪ್ರೇಮಿ ಫೋನ್ ಮಾಡಿದ್ದನಂತೆ. ಇದೇ ವಿಚಾರವಾಗಿ ಎರಡು ಗುಂಪುಗಳು ನಡುವೆ ಜಗಳವಾಗಿದೆ. ಇದನ್ನು ಪ್ರಶ್ನಿಸಲು ಯುವಕನ ಮನೆಗೆ ನಿಖಿಲ್ ಹೋಗಿದ್ದನು. ಮಾತುಕತೆ ವೇಳೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಉದಯ್ ಎಂಬುವವನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಈ ಪ್ರಕರಣ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಹಿಳೆಯ ವಿರುದ್ಧ ಅಸಭ್ಯ ಪದ ಬಳಕೆ
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಬುಗುಡನಹಳ್ಳಿ ಗ್ರಾಮದ ಮಹಿಳೆಗೆ ಮಂಜುನಾಥ ಎಂಬುವವನು ಅಸಭ್ಯ ಪದ ಬಳಕೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮನೆ ಬಳಿ ಕುಳಿತಿರುವಾಗ ಮಹಿಳೆ ಬಳಿ ಏಕಾಏಕಿ ಹೋಗಿ ಮಂಜುನಾಥ ಅಸಭ್ಯ ಪದ ಬಳಕೆ ಮಾಡಿದ್ದಾನೆ ಎಂದು ಮಹಿಳೆ ಹಾಗೂ ಸಂಬಂಧಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ವ್ಯಕ್ತಿಯ ಅಸಭ್ಯ ಪದ ಬಳಕೆಯ ಬಗ್ಗೆ ಮಹಿಳೆ ಅಕ್ಕ-ಪಕ್ಕದ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ತಿಳಿಸಿದ್ದು, ಪರಸ್ಪರ ಗಲಾಟೆ ನಡೆದಿದೆ. ಅಲ್ಲದೇ ಮಹಿಳೆ ಮಂಜುನಾಥ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾಳೆ.

ಇದನ್ನೂ ಓದಿ

‘ದಿಯಾ’ ಹೀರೋ ದೀಕ್ಷಿತ್​ ಶೆಟ್ಟಿಯ ಕ್ರೈಂ ಸ್ಟೋರಿ; ಒಂದು ಕೊಲೆಯ ಸುತ್ತ ಎಷ್ಟಿದೆ ರಹಸ್ಯ?

ಮಂಡ್ಯ: ಜಮೀನು ವಿವಾದ; ಚಾಕು ಇರಿದು ತಮ್ಮನಿಂದಲೇ ಅಣ್ಣನ ಕೊಲೆ

(Another young man murdered a young man in Kalaburagi)