Karnataka Assembly election: ದಕ್ಷಿಣ ಕನ್ನಡದಿಂದ ಕಣಕ್ಕಿಳಿಯಲಿದ್ದಾರೆ ಎಎಪಿಯ 3 ಅಭ್ಯರ್ಥಿಗಳು

| Updated By: ವಿವೇಕ ಬಿರಾದಾರ

Updated on: Mar 22, 2023 | 3:30 PM

ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದಲೇ 3 ಅಭ್ಯರ್ಥಿಗಳು ಕಣಕ್ಕೆ ಇಳಿಸಿದೆ.

Karnataka Assembly election: ದಕ್ಷಿಣ ಕನ್ನಡದಿಂದ ಕಣಕ್ಕಿಳಿಯಲಿದ್ದಾರೆ ಎಎಪಿಯ 3 ಅಭ್ಯರ್ಥಿಗಳು
ಆಮ್​ ಆದ್ಮಿ ಪಕ್ಷದ ಚಿಹ್ನೆ
Follow us on

ದಕ್ಷಿಣ ಕನ್ನಡ: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಆಮ್ ಆದ್ಮಿ ಪಾರ್ಟಿ (ಎಎಪಿ) (Aam Aadmi Party) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದಲೇ 3 ಅಭ್ಯರ್ಥಿಗಳು ಕಣಕ್ಕೆ ಇಳಿಸುತ್ತಿದೆ. ಮಂಗಳೂರು ನಗರ ದಕ್ಷಿಣ, ಮುಲ್ಕಿ-ಮೂಡಬಿದರೆ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಮಂಗಳೂರು ನಗರ ದಕ್ಷಿಣ ದಿಂದ ಸಂತೋಷ್‌ ಕಾಮತ​​​, ಮುಲ್ಕಿ-ಮೂಡಬಿದರೆಯಿಂದ ವಿಜಯನಾಥ ವಿಠಲ ಶೆಟ್ಟಿ, ಸುಳ್ಯದಿಂದ ಸುಮನಾ ಸ್ಪರ್ಧಿಸುತ್ತಿದ್ದಾರೆ.

ಕರ್ನಾಟಕ ರಾಜಕೀಯದಲ್ಲೂ ಆಪ್​ ಎಂಟ್ರಿ ಕೊಟ್ಟಿದ್ದು, ಇತ್ತೀಚಿಗೆ 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಈ ಬಗ್ಗೆ ದಕ್ಷಿಣ ಕನ್ನಡ ಆಮ್​ ಆದ್ಮಿ ಪಕ್ಷದ​ ಜಿಲ್ಲಾ ಘಟಕ ಅಧ್ಯಕ್ಷ ಅಶೋಕ್​ ಅಡಮಲೆ ಮಾತನಾಡಿ ದಕ್ಷಿಣ ಕನ್ನಡದಿಂದ ಮೂವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 224 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂದು ಹೇಳಿದರು. ಇನ್ನುಳಿದ 100 ಜನರ ಪಟ್ಟಿಯನ್ನು ಮಾರ್ಚ್​ 27 ರಂದು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಎಎಪಿ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ಸಿಗಲಿದೆ ಪ್ರತಿ ತಿಂಗಳು ಹಣ; ಪ್ರಣಾಳಿಕೆಯಲ್ಲಿ ಏನೇನಿದೆ ನೋಡಿ

ಇನ್ನು ನಟ ಟೆನಿಸ್​ ಕೃಷ್ಣ ಹಾಗೂ ಬ್ರಿಜೇಶ್ ಕಾಳಪ್ಪ ಆಮ್​ ಆದ್ಮಿ ಪಕ್ಷದಿಂದ ಚುನಾವಣೆ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸು ಕಂಡ ನಂತರ ಎಎಪಿ ಕರ್ನಾಟಕ ರಾಜಕೀಯದಲ್ಲೂ ಕಮಾಲ್​ ಮಾಡಲು ಕಸರತ್ತು ನಡೆಸಿದೆ. ಇನ್ನು ಪ್ರಮುಖವಾಗಿ ಎಎಪಿ ಮೊದಲ ಪಟ್ಟಿಯಲ್ಲಿ 7 ರೈತರು, 7 ಮಹಿಳೆಯರು ಹಾಗೂ 5 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದೆ. ಪ್ರಮುಖವಾಗಿ ಕಾಂಗ್ರೆಸ್​ನಿಂದ ಬಂದಿರುವ ಬ್ರಿಜೇಶ್ ಕಾಳಪ್ಪ ಚಿಕ್ಕಪೇಟೆಯಿಂದ ಕಣಕ್ಕಿಳಿಯಲಿದ್ದಾರೆ. ಹಾಗೇ ನಟ ಟೆನ್ನಿಸ್‌ ಕೃಷ್ಣ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Wed, 22 March 23