ಬೆಂಗಳೂರು: ಧಾರ್ಮಿಕ ಪೀಠಗಳಿಗೆ ಪೀಠಾಧಿಪತಿಯಾಗಿ ಅಪ್ರಾಪ್ತರನ್ನು ನೇಮಿಸುವುದಕ್ಕೆ ನಿರ್ಬಂಧ ಹಾಕಲಾಗದು. ಅದು ಪರಂಪರೆ. ಹಾಗಾಗಿ ತಾನು ಆ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತ ಬಾಲಕನ ನೇಮಕ ಪ್ರಶ್ನಿಸಿ, ಪಿಐಎಲ್ ಸಲ್ಲಿಸಲಾಗಿತ್ತು. ಅದರ ವಿಚಾರಣೆ ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಮಗದುಮ್ ಅವರಿದ್ದ ಪೀಠವು ಶಿರೂರು ಮಠ ಭಕ್ತ ಸಮಿತಿಯ ಪಿಐಎಲ್ ವಜಾಗೊಳಿಸಿತು.
ಬೌದ್ಧ ಧರ್ಮದಲ್ಲಿ ಮಕ್ಕಳೂ ಸನ್ಯಾಸ ಸ್ವೀಕರಿಸುವ ಪದ್ಧತಿ ಇದೆ. ಸಂವಿಧಾನದಡಿ ಅಪ್ರಾಪ್ತರು ಸನ್ಯಾಸಿಯಾಗಲು ನಿರ್ಬಂಧವಿಲ್ಲ. ಕೋರ್ಟ್‌ಗಳಿರುವುದು ಧಾರ್ಮಿಕ ನಿಯಮ ರಚಿಸಲು ಅಲ್ಲ ಎಂದು ಅಮೈಕಸ್ ಕ್ಯೂರಿ ಎಸ್ ನಾಗಾನಂದ್ ಧಾರ್ಮಿಕ ಗ್ರಂಥ ಉಲ್ಲೇಖಿಸಿ, ಕೋರ್ಟ್ ಗಮನ ಸೆಳೆದಿದ್ದರು.
800 ವರ್ಷಗಳಿಂದ ಅಷ್ಟ ಮಠಗಳಲ್ಲಿ ಪರಂಪರೆ ಜಾರಿಯಲ್ಲಿದೆ. ಈ ಪರಂಪರೆಯಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾ.ಸಚಿನ್ ಮಗದುಮ್ ಅವರಿದ್ದ ಪೀಠ ಮೇಲಿನ ತೀರ್ಪು ನೀಡಿತು. ಶಿರೂರು ಮಠಕ್ಕೆ ಅನಿರುದ್ಧ ಸರಳತ್ತಾಯರನ್ನು ನೇಮಕ ಮಾಡಲಾಗಿತ್ತು. ಸೋದೆ ವಾದಿರಾಜ ಮಠದಿಂದ ಪೀಠಾಧಿಪತಿ ನೇಮಕವಾಗಿತ್ತು.
ಧರ್ಮಸ್ಥಳ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ನೂತನ ಪೀಠಾಧಿಪತಿ:
ಅನಿರುದ್ಧ ಸರಳತ್ತಾಯ ಅವರನ್ನು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನಾಗಿ ಇತ್ತೀಚೆಗೆ ಘೋಷಿಸಲಾಗಿದೆ. ಸೋದೆ (ವಾದಿರಾಜ) ಮಠದ ವಿಶ್ವವಲ್ಲಭ ತೀರ್ಥರು ನೂತನ ಪೀಠಾಧಿಪತಿಯ ಹೆಸರು ಘೋಷಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀಗಳಾಗಿ ನಿಯುಕ್ತಿಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠದಲ್ಲಿ ಮೇ 11ರಿಂದ 14ರವರೆಗೆ ಶಿಷ್ಯ ಸ್ವೀಕಾರ ವಿಧಿ ವಿಧಾನಗಳು ಜರುಗಲಿವೆ.
ಶಿರೂರು ಮಠಕ್ಕೆ ನೂತನ ಪೀಠಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಅನಿರುದ್ಧ್ ಸರಳತ್ತಾಯ ಮಠದ ಉತ್ತರಾಧಿಕಾರಿಯಾಗಲಿದ್ದಾರೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ಅವರು, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರೈಸಿದ್ದಾರೆ.
ಇದನ್ನೂ ಓದಿ:
ಅಪ್ರಾಪ್ತನಿಗೆ ಸನ್ಯಾಸ ನೀಡಿದಾಗ ಸರ್ಕಾರ ಮೂಕಪ್ರೇಕ್ಷನಾಗಿರಲು ಸಾಧ್ಯವಿಲ್ಲ: ಉಡುಪಿಯ ಶಿರೂರು ಮಠಕ್ಕೆ ಬಾಲಸನ್ಯಾಸಿ ನೇಮಕಕ್ಕೆ ಹೈಕೋರ್ಟ್ ಆಕ್ಷೇಪ
ಇದನ್ನೂ ಓದಿ:
ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ; ಧರ್ಮಸ್ಥಳ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀ
(appointing under aged as plaintiff is traditional judiciary wont interfere says high court)
Published On - 11:14 am, Wed, 29 September 21