ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು (ಜೂನ್ 20) ರಂದು ನಗರಕ್ಕೆ ಆಗಮಿಸುತ್ತಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ, ಅವರು ಸಂಚರಿಸಲಿರುವ ಮಾರ್ಗದಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (Higher Education) ಬಿಗಿಭದ್ರತೆಯ ದೃಷ್ಟಿಯಿಂದ ಅಂದು ರಜೆ ಘೋಷಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Aswath Narayan) ಹೇಳಿದ್ದಾರೆ. ಈ ಸಂಬಂಧ ಇಂದು (ಜೂನ್ 18) ರಂದು ಆದೇಶ ಹೊರಡಿಸಿದ ಸರ್ಕಾರ ಪ್ರಧಾನಿ ಹಾದು ಹೋಗಲಿರುವ ಐಐಎಸ್ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಗುಜರಾತಿನ ವಡೋದರಾದಲ್ಲಿ ಹಬ್ಬದ ವಾತಾವಾರಣ, ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಜೂನ್ 20 ಮತ್ತು 21ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿಯ ಪ್ರವಾಸದ ವೇಳ ಪಟ್ಟಿ
ಪ್ರಧಾನಿ ನರೇಂದ್ರ ಮೋದಿ ಜೂನ್ 20 ಮತ್ತು 21 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಲ್ಲಿ ಭಾಗಿಯಾಗಲಿದ್ದಾರೆ.
-ಜೂನ್ 20 ರಂದು ಬೆಳಗ್ಗೆ 11.55ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.
-ಮಧ್ಯಾಹ್ನ 12.20ಕ್ಕೆ ಯಲಹಂಕ ವಾಯುನೆಲೆಯಿಂದ ಹೆಲಿಕಾಫ್ಟರ್ ಮೂಲಕ ಐಐಎಸ್ಸಿ ಹೆಲಿಪ್ಯಾಡ್ ಗೆ ಆಗಮನ
-ಮಧ್ಯಾಹ್ನ 12.30ರಿಂದ 1 ಗಂಟೆಯವರೆಗೆ ಐಐಎಸ್ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ ಮತ್ತು ಬಾಗಚಿ ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ
-ಮಧ್ಯಾಹ್ನ 1.15 ಕ್ಕೆ ಹೆಲಿಕಾಪ್ಟರ್ ಮೂಲಕ ಐಐಎಸ್ಸಿ ಹೆಲಿಪ್ಯಾಡ್ ನಿಂದ ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಪ್ರಯಾಣ
-ಮಧ್ಯಾಹ್ನ 1.35ಕ್ಕೆ ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಆಗಮನ
-ಮಧ್ಯಾಹ್ನ 1.45ರಿಂದ 3 ಗಂಟೆಯವರೆಗೆ ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಮಾರಂಭ
-ಮಧ್ಯಾಹ್ನ 3.15 ಕ್ಕೆ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟ ಹೆಲಿಪ್ಯಾಡ್ ನಿಂದ ಬೇಸ್ ಹೆಲಿಪ್ಯಾಡ್ ಗೆ ಪ್ರಯಾಣ
-ಮಧ್ಯಾಹ್ನ 3.40 ಕ್ಕೆ ಬೇಸ್ ಹೆಲಿಪ್ಯಾಡ್ ಗೆ ಆಗಮನ
-ಮಧ್ಯಾಹ್ನ 3.45 ರಿಂದ ಸಂಜೆ 4.30 ರವರೆಗೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ, ಬೇಸ್ ಯುನಿವರ್ಸಿಟಿ ಉದ್ಘಾಟನೆ ಮತ್ತು ಮೇಲ್ದರ್ಜೆಗೇರಿಸಲ್ಪಟ್ಟ ಐಟಿಐಗಳ ಲೋಕಾರ್ಪಣೆ
-ಸಂಜೆ 4.30 ರಿಂದ 4.45 ವರೆಗೆ ಕಾಯ್ದಿರಿಸಲ್ಪಟ್ಟ ಸಮಯ
-ಸಂಜೆ 5 ಗಂಟೆಗೆ ಬೇಸ್ ಹೆಲಿಪ್ಯಾಡ್ ನಿಂದ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ
-ಸಂಜೆ 5.50 ಕ್ಕೆ ಮೈಸೂರಿಗೆ ಆಗಮನ
-ಸಂಜೆ 6 ಗಂಟೆಯಿಂದ 7.15 ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ
-ರಾತ್ರಿ 7.30 ರಿಂದ 8 ಗಂಟೆಯವರೆಗೆ ಸುತ್ತೂರು ಮಠದಲ್ಲಿ ಕಾರ್ಯಕ್ರಮ
-ರಾತ್ರಿ 8.15 ರಿಂದ 8.30 ರವರೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ
-ರಾತ್ರಿ 8.55 ಕ್ಕೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ
ಜೂನ್ 21ರ ವೇಳ ಪಟ್ಟಿ
-ಜೂನ್ 21 ಬೆಳಗ್ಗೆ 6.30ಕ್ಕೆ ಖಾಸಗಿ ಹೋಟೆಲ್ ನಿಂದ ಮೈಸೂರು ಅರಮನೆ ಮೈದಾನಕ್ಕೆ ಆಗಮನ
-ಬೆಳಗ್ಗೆ 6.30 ರಿಂದ 7.45 ರವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ
-7.45 ರಿಂದ 8 ಗಂಟೆಯವರೆಗೆ ಕಾಯ್ದಿರಿಸಲ್ಪಟ್ಟ ಸಮಯ
-8 ಗಂಟೆಯಿಂದ 8.20 ರವರೆಗೆ ಪ್ರದರ್ಶನ ವೀಕ್ಷಣೆ
-8.30 ರಿಂದ 9 ಗಂಟೆಯವರೆಗೆ ಮೈಸೂರು ಅರಮನೆಗೆ ಭೇಟಿ
-9.20ಕ್ಕೆ ಮೈಸೂರು ಏರ್ ಪೋರ್ಟ್ ನಿಂದ ದೆಹಲಿಗೆ ನಿರ್ಗಮನ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:37 pm, Sat, 18 June 22