ವಿಧಾನಸಭೆ: ಎಂಟು ವಿಧೇಯಕ ಮಂಡನೆ, ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ-2024 ಅಂಗೀಕಾರ

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಇಂದು ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ-2024 ಅಂಗೀಕಾರಗೊಂಡಿದೆ. ಆ ಮೂಲಕ ಸಹಕಾರಿ ಸಂಘಗಳಲ್ಲಿ ನಾಮನಿರ್ದೇಶನಗಳ ಸಂಖ್ಯೆ ಮೂರಕ್ಕೆ ಹೆಚ್ಚಳ, ಅನಗತ್ಯ ವೆಚ್ಚ ಕಡಿತಕ್ಕಾಗಿ ಸಹಕಾರ ಚುನಾವಣಾ ಪ್ರಾಧಿಕಾರ ರದ್ದು, ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಪ್ರಾತಿನಿಧ್ಯತೆ ಒದಗಿಸುವ ಉದ್ದೇಶ ಹೊಂದಿದೆ. ಇದರ ಜೊತೆಗೆ ಸದನದಲ್ಲಿ ಎಂಟು ವಿಧೇಯಕಗಳು ಮಂಡನೆಯಾಗಿವೆ.

ವಿಧಾನಸಭೆ: ಎಂಟು ವಿಧೇಯಕ ಮಂಡನೆ, ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ-2024 ಅಂಗೀಕಾರ
ವಿಧಾನಸಭೆ: ಎಂಟು ವಿಧೇಯಕ ಮಂಡನೆ, ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ-2024 ಅಂಗೀಕಾರ
Edited By:

Updated on: Feb 19, 2024 | 6:55 PM

ವಿಧಾನಸಭೆ, ಫೆ.19: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ (Karnataka Assembly Session) ಸುದೀರ್ಘ ಚರ್ಚೆ ಬಳಿಕ ಇಂದು ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ-2024 (Karnataka Cooperative Societies Amendment Bill-2024) ಅಂಗೀಕಾರಗೊಂಡಿದೆ. ಆ ಮೂಲಕ ಸಹಕಾರಿ ಸಂಘಗಳಲ್ಲಿ ನಾಮನಿರ್ದೇಶನಗಳ ಸಂಖ್ಯೆ ಮೂರಕ್ಕೆ ಹೆಚ್ಚಳ, ಅನಗತ್ಯ ವೆಚ್ಚ ಕಡಿತಕ್ಕಾಗಿ ಸಹಕಾರ ಚುನಾವಣಾ ಪ್ರಾಧಿಕಾರ ರದ್ದು, ಪ್ರಾಥಮಿಕ, ಮಾಧ್ಯಮಿಕ, ಫೆಡರಲ್ ಹಾಗೂ ಅಪೆಕ್ಸ್ ಬ್ಯಾಂಕ್​ಗಳಲ್ಲಿ ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಪ್ರಾತಿನಿಧ್ಯತೆ ಒದಗಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ದೇವಾಲಯಗಳ ಆದಾಯ ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಯತ್ನಾಳ್ ಗಂಭೀರ ಆರೋಪ

ವಿಧಾನಸಭೆಯಲ್ಲಿ ಎಂಟು ವಿಧೇಯಕಗಳ ಮಂಡನೆ

  1. ಬಿಬಿಎಂಪಿ (ತಿದ್ದುಪಡಿ) ವಿಧೇಯಕ ಮಂಡನೆ
  2. ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ ಮಂಡನೆ
  3. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡನೆ
  4. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ಮಂಡನೆ
  5. ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡನೆ
  6. ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡನೆ
  7. ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ವಿಧೇಯಕ ಮಂಡನೆ
  8. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ ಮಂಡನೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ