ದೇವಾಲಯಗಳ ಆದಾಯ ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಯತ್ನಾಳ್ ಗಂಭೀರ ಆರೋಪ
ಕರ್ನಾಟಕ ಬಜೆಟ್ ಮಂಡನೆ ಬಳಿಕ ದೇವಾಲಯಗಳ ಆದಾಯವನ್ನು ಇತರೆ ಧರ್ಮಗಳಿಗೆ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇಂದು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇವಸ್ಥಾನಕ್ಕೆ ಅಂತಾ ನಾವು ಹಣ ಕೊಡುತ್ತೇವೆ. ಆದರೆ, ಅದನ್ನು ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಇನ್ಯಾರೊಗೋ ಕೊಡುತ್ತೀರಿ ಎಂದು ಆರೋಪಿಸಿದರು.
ವಿಧಾನಸಭೆ, ಫೆ.19: ಕರ್ನಾಟಕ ಬಜೆಟ್ ಮಂಡನೆ ಬಳಿಕ ದೇವಾಲಯಗಳ ಆದಾಯವನ್ನು ಇತರೆ ಧರ್ಮಗಳಿಗೆ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇಂದು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ದೇವಸ್ಥಾನಕ್ಕೆ ಅಂತಾ ನಾವು ಹಣ ಕೊಡುತ್ತೇವೆ. ದೇಗುಲಗಳ ಆದಾಯವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಇನ್ಯಾರೊಗೋ ಕೊಡುತ್ತೀರಿ ಎಂದು ಆರೋಪಿಸಿದರು.
ದೇವಸ್ಥಾನಗಳ ಆದಾಯವನ್ನು ದೇಗುಲಗಳ ಅಭಿವೃದ್ಧಿಗೆ ಬಳಸಬೇಕು. ದೇವಸ್ಥಾನಗಳ ಆದಾಯವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ದೇಗುಲಗಳ ಆದಾಯವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಅಂತಾ ದೆಹಲಿ ಚಲೋ ಮಾಡಿದ್ದರು. ಇಲ್ಲಿ ನಮ್ಮ ದೇವರು ನಮ್ಮ ಹಣ, ನಮ್ಮ ಹಕ್ಕು ಎಂದರು.
ದೇವಸ್ಥಾನಕ್ಕೆ ಅಂತಾ ನಾವು ಹಣ ಕೊಡುತ್ತೇವೆ. ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಯಾಱರಿಗೆ ಬೇಕೋ ಕೊಡುತ್ತೀರಿ. ಇದು ಯಾರಪ್ಪನ ಆಸ್ತಿ? ದೇಗುಲಗಳ ಮೇಲೆ ಮಾತ್ರ ಕಾನೂನೇಕೆ? ಮಸೀದಿ, ಚರ್ಚ್ಗಳ ಮೇಲೆ ಏಕೆ ನಿಮ್ಮ ಕಾನೂನು ಅನ್ವಯ ಆಗಲ್ಲ? ದೇಗುಲಗಳಲ್ಲಿ ಮುಕ್ತ ಆಡಳಿತ ತಂದರಷ್ಟೇ ನಿಜವಾದ ಜಾತ್ಯತೀತತೆ ಆಗಲಿದೆ ಎಂದರು.
ಇದನ್ನೂ ಓದಿ: Karnataka Budget Session: ಸದನದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಶಾಸಕ ಬಸನಗೌಡ ಯತ್ನಾಳ್ ನಡುವೆ ಜುಗಲ್ ಬಂದಿ!
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದುವರಿಸಿದ ಯತ್ನಾಳ್, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಸರ್ಕಾರ ಭಾಷಣ ಸಿದ್ಧ ಮಾಡುತ್ತದೆ, ಇದು ರಾಜ್ಯಪಾಲರ ಘನತೆಗೆ ಧಕ್ಕೆಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ಮಾಡಿದ್ದಾರೆ. ಪಾಠದಲ್ಲಿ ತಾಜಮಹಲ್, ಕೆಂಪುಕೋಟೆ ಕಟ್ಟಿದವರ ಬಗ್ಗೆ ಇರುತ್ತದೆ. ಆದರೆ ಕಾಶಿ, ಮಥುರಾ ಒಡೆದ ಬಗ್ಗೆ ಶಿಕ್ಷಣ ಇರಲ್ಲ ಎಂದರು.
ಹಿಂದೂ ಕಾರ್ಯಕ್ರಮದಲ್ಲಿ ಸ್ಪೀಕರ್ ಭಾಗಿ ಉತ್ತಮ ಸಂಪ್ರದಾಯವಾಗಿದೆ. ನಿಮ್ಮನ್ನು ನಾನು ಮೊಘಲರಿಗೆ ಹೋಲಿಕೆ ಮಾಡಿ ಮಾತನಾಡುವುದಿಲ್ಲ ಎಂದ ಯತ್ನಾಳ್, ರೈತರು ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವರು ಹೇಳುತ್ತಾರೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಶಿವಾನಂದ ಪಾಟೀಲ್, ಆಧಾರ ಇಟ್ಟು ಮಾತನಾಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಕೋರ್ಟ್ನಲ್ಲಿ ಕೇಸ್ ಹಾಕಿದ್ದೇನೆ, ಹೀಗಾಗಿ ಮಾತನಾಡಬಾರದು. ಮಾಧ್ಯಮಗಳಲ್ಲಿ ಬಂದ ವಿಚಾರ ಪ್ರಸ್ತಾಪಿಸಬಾರದು ಅಂದರೆ ಹೇಗೆ ಎಂದರು.
ಡಿಕೆ ಶಿವಕುಮಾರ್-ಯತ್ನಾಳ್ ನಡುವೆ ಏಕವಚನ ಪ್ರಯೋಗ
ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಯತ್ನಾಳ್ ನಡುವೆ ಏಕವಚನದಲ್ಲೇ ವಾಗ್ವಾದ ನಡೆಯಿತು. ನಮ್ಮ ಸರ್ಕಾರದ ವಿರುದ್ಧ ಪೇಸಿಎಂ ಅಂತಾ ಹೇಳಿದರು ಎಂದು ಯತ್ನಾಳ್ ಹೇಳುತ್ತಿದ್ದಂತೆ, ಕೊವಿಡ್ ಸಂಕಷ್ಟದ ವೇಳೆ ಅವ್ಯವಹಾರ ಅಂತಾ ನೀನೇ ಹೇಳಿದ್ದಲ್ಲಪ್ಪಾ, ಆ ಬಗ್ಗೆ ಹೇಳು ಎಂದು ಡಿಕೆ ಶಿವಕುಮಾರ್ ಏಕವಚನ ಪ್ರಯೋಗಿಸಿದರು. ಇದಕ್ಕೆ ಸಿಟ್ಟಾದ ಯತ್ನಾಳ್, ನನಗೆ ಏಕವಚನದಲ್ಲಿ ಮಾತನಾಡಿದರೆ ನಾನು ಏಕವಚನದಲ್ಲಿ ಮಾತನಾಡುತ್ತೇನೆ. ನಾನೇನೂ ನಿನ್ನ ಮುಲಾಜಿನಲ್ಲಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ