ಅಮೇಠಿಯಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು
ಗಾಂಧಿ ಕುಟುಂಬದ ವಿರುದ್ಧ ಅಮೇಠಿ ಜನರ ಆಕ್ರೋಶ ಸ್ಪಷ್ಟವಾಗಿ ಗೋಚರಿಸುತ್ತಿದೆ... ಇಂದು ಅವರು (ರಾಹುಲ್ ಗಾಂಧಿ) ಆಗಮಿಸಿದಾಗ ಅವರಿಗೆ ಸ್ವಾಗತ ಕೋರಿದ್ದು ಖಾಲಿ ಬೀದಿಗಳು. ಅಮೇಠಿಯಲ್ಲಿ ನಾನು ಅನೇಕ ಜನರ ಬೆಂಬಲವನ್ನು ಹೊಂದಿದ್ದ ಅಭ್ಯರ್ಥಿಯ ವಿರುದ್ಧ ಹೋರಾಡಿದೆ. ಗಾಂಧಿ ಕುಟುಂಬಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಖಾಲಿ ಬೀದಿಗಳು ತೋರಿಸುತ್ತಿವೆ ಎಂದು ಅಮೇಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ದೆಹಲಿ ಫೆಬ್ರುವರಿ 19: ಉತ್ತರ ಪ್ರದೇಶದ(Uttar Pradesh) ಅಮೇಠಿ ಲೋಕಸಭಾ (Amethi Lok Sabha) ಕ್ಷೇತ್ರವು ರಾಜಕೀಯ ಹಣಾಹಣಿಗೆ ಸಿದ್ಧವಾಗಿದೆ. ಕೇಂದ್ರ ಸಚಿವೆ ಹಾಗೂ ಹಾಲಿ ಸಂಸದೆ ಸ್ಮೃತಿ ಇರಾನಿ (Smriti Irani) ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಅಮೇಠಿಯಿಂದ ಸ್ಪರ್ಧಿಸುವಂತೆ ಸೋಮವಾರ ಸವಾಲು ಹಾಕಿದ್ದಾರೆ. ಅಮೇಠಿಯ ಮಾಜಿ ಸಂಸದ ವಯನಾಡಿನ ಹಾಲಿ ಸಂಸದ ರಾಹುಲ್ ಅಮೇಠಿ ಜನರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಅಮೇಠಿ ಸಂಕಷ್ಟಕ್ಕೆ ಸಿಲುಕಿದೆ. ರಾಮ್ ಲಲ್ಲಾ ಪ್ರತಿಷ್ಠಾಪನೆಯ ಆಹ್ವಾನವನ್ನು ರಾಹುಲ್ ಮತ್ತು ಅವರ ಕುಟುಂಬ ತಿರಸ್ಕರಿಸಿದೆ. ಇದರಿಂದಲೂ ಅಮೇಠಿ ಸಂಕಷ್ಟಕ್ಕೆ ಸಿಲುಕಿದೆ,” ಎಂದು ಹೇಳಿದ ಸ್ಮೃತಿ, “ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಏಕಾಂಗಿಯಾಗಿ ಸ್ಪರ್ಧಿಸಲು ನಾನು ಅವರಿಗೆ (ರಾಹುಲ್) ಸವಾಲು ಹಾಕುತ್ತೇನೆ” ಎಂದು ಮಾಧ್ಯಮದವರಲ್ಲಿ ಮಾತನಾಡಿದ ಸ್ಮೃತಿ ಇರಾನಿ ಹೇಳಿದ್ದಾರೆ .
ರಾಹುಲ್ ಗಾಂಧಿ ವಿರುದ್ಧ ಇರಾನಿ ವಾಗ್ದಾಳಿ
ನ್ಯಾಯ ಯಾತ್ರೆಯ ಬೆಂಗಾವಲು ಪಡೆ ಪಟ್ಟಣಕ್ಕೆ ಆಗಮಿಸಿದಾಗ ಅದನ್ನು ಖಾಲಿ ಬೀದಿಗಳಲ್ಲಿ ಸ್ವಾಗತಿಸಿದ್ದರಿಂದ ಅಮೇಠಿಯ ಜನರು ರಾಹುಲ್ ಗಾಂಧಿಯವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕೋಪಗೊಂಡಿದ್ದಾರೆ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ನಾಯಕನನ್ನು ವ್ಯಂಗ್ಯವಾಡಿದ್ದಾರೆ
“ಹೂಡಿಕೆದಾರರ ಶೃಂಗಸಭೆಯಲ್ಲಿ ಅಮೇಠಿಗೆ ₹ 6523 ಕೋಟಿ ಬಂಡವಾಳ ಬಂದಿದೆ. ಗಾಂಧಿ ಕುಟುಂಬದ ವಿರುದ್ಧ ಅಮೇಠಿ ಜನರ ಆಕ್ರೋಶ ಸ್ಪಷ್ಟವಾಗಿ ಗೋಚರಿಸುತ್ತಿದೆ… ಇಂದು ಅವರು (ರಾಹುಲ್ ಗಾಂಧಿ) ಆಗಮಿಸಿದಾಗ ಅವರಿಗೆ ಸ್ವಾಗತ ಕೋರಿದ್ದು ಖಾಲಿ ಬೀದಿಗಳು. ಅಮೇಠಿಯಲ್ಲಿ ನಾನು ಅನೇಕ ಜನರ ಬೆಂಬಲವನ್ನು ಹೊಂದಿದ್ದ ಅಭ್ಯರ್ಥಿಯ ವಿರುದ್ಧ ಹೋರಾಡಿದೆ. ಗಾಂಧಿ ಕುಟುಂಬಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಖಾಲಿ ಬೀದಿಗಳು ತೋರಿಸುತ್ತಿವೆ “ಎಂದು ಸ್ಮೃತಿಇರಾನಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.ತಮ್ಮ ಲೋಕಸಭಾ ಕ್ಷೇತ್ರಕ್ಕೆ ನಾಲ್ಕು ದಿನಗಳ ಭೇಟಿಯ ಭಾಗವಾಗಿ ಸೋಮವಾರ ಅಮೇಠಿಯಲ್ಲಿ ಜನಸಂವಾದ ನಡೆಸಿತ್ತಿದ್ದರವರು.
ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ
ಏತನ್ಮಧ್ಯೆ, ರಾಹುಲ್ ಗಾಂಧಿ ತಮ್ಮ ಯಾತ್ರೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಬಿಜೆಪಿ ದಲಿತರ ವಿರುದ್ಧವಾಗಿದೆ. ಅವರು ಮಾಡುತ್ತಿರುವುದು ಹೆಲಿಕಾಪ್ಟರ್ ಸವಾರಿ ಮತ್ತು ಹಣ ಸಂಪಾದಿಸುವುದು. ನ್ಯಾಯ್ ಯಾತ್ರೆಯ ವೇಳೆ ಅಮೇಠಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ “ನೀವು ರಾಮಮಂದಿರ ಕಾರ್ಯಕ್ರಮವನ್ನು ನೋಡಿದ್ದೀರಾ? ಅದನ್ನು ಬಹಳ ಸಂಭ್ರಮದಿಂದ ನಡೆಸಲಾಯಿತು, ಆದರೆ ನೀವು ಯಾವುದೇ ದಲಿತ ಮುಖಗಳನ್ನು ನೋಡಿದ್ದೀರಾ? ನಮ್ಮ ರಾಷ್ಟ್ರಪತಿ ಆದಿವಾಸಿ, ಆದ್ದರಿಂದ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಕಾರ್ಯಕ್ರಮದ ಸಮಯದಲ್ಲಿ ನೀವು ಯಾವುದೇ ರೈತ ಅಥವಾ ಕಾರ್ಮಿಕರನ್ನು ನೋಡಿದ್ದೀರಾ? ಕಾರ್ಯಕ್ರಮದ ಸಮಯದಲ್ಲಿ ಎಲ್ಲಿಯೂ ಹಿಂದುಳಿದ ವರ್ಗದ ಮುಖಗಳು ಕಾಣಿಸಲಿಲ್ಲ. ಆದರೆ ನೀವು ಅದಾನಿ, ಅಂಬಾನಿ ಮತ್ತು ಅವರ ಕುಟುಂಬಗಳನ್ನು ನೋಡಿರಬೇಕು. ಎಲ್ಲಾ ಉದ್ಯಮಿಗಳು ಅಲ್ಲಿದ್ದರು. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಮತ್ತು ನರೇಂದ್ರ ಮೋದಿ ಇದ್ದರು.
ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ 15 ರಾಜ್ಯಗಳಲ್ಲಿ ಮಣಿಪುರದಿಂದ ಮುಂಬೈಗೆ ಭಾರತ್ ಜೋಡೋ ಯಾತ್ರೆಯ ಎರಡನೇ ಆವೃತ್ತಿಯನ್ನು ರಾಹುಲ್ ಗಾಂಧಿ ಜನವರಿ 14 ರಿಂದ ಪ್ರಾರಂಭಿಸಿದ್ದಾರೆ.
ಅಮೇಠಿಯೊಂದಿಗೆ ಗಾಂಧಿ ಕುಟುಂಬದ ಸಂಬಂಧ
1967 ರಲ್ಲಿ ಸ್ಥಾಪನೆಯಾದಾಗಿನಿಂದ ಅಮೇಠಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ 1977 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಆದರೆ ತುರ್ತು ಪರಿಸ್ಥಿತಿಯ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶದಿಂದಾಗಿ ಸೋತರು. 1980 ರಲ್ಲಿ ಅದೇ ಕ್ಷೇತ್ರದಲ್ಲಿ ಗೆದ್ದಿದ್ದರೂ ಒಂದು ವರ್ಷದ ನಂತರ 1981 ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು. ಅವರ ಹಿರಿಯ ಸಹೋದರ ರಾಜೀವ್ ಗಾಂಧಿ ರಾಜಕೀಯಕ್ಕೆ ಬಂದು 1981 ರಲ್ಲಿ ಅಮೇಠಿಯಿಂದ ಕಣಕ್ಕಿಳಿದರು. ಅವರು 1984, 1989 ಮತ್ತು 1991 ರಲ್ಲಿ ಅವರ ಹತ್ಯೆಯವರೆಗೆ ಮರು ಆಯ್ಕೆಯಾದರು.
ಇದನ್ನೂ ಓದಿ: ಅಮೇಥಿಯಲ್ಲಿ ಒಂದೇ ದಿನ ರಾಹುಲ್ ಗಾಂಧಿ, ಸ್ಮೃತಿ ಇರಾನಿ ಕಾರ್ಯಕ್ರಮ!
90 ರ ದಶಕದ ಉತ್ತರಾರ್ಧದಲ್ಲಿ ರಾಜಕೀಯ ಪ್ರವೇಶಿಸಿದ ನಂತರ, ಸೋನಿಯಾ ಗಾಂಧಿಯವರು 1999 ರಲ್ಲಿ ಈ ಸ್ಥಾನದಿಂದ ಸ್ಪರ್ಧಿಸಿದರು. 2004 ರಲ್ಲಿ, ಅವರು ರಾಯ್ ಬರೇಲಿಯಿಂದ ಕಣಕ್ಕಿಳಿದಿದ್ದರು. ಫಿರೋಜ್ ಗಾಂಧಿ ಮತ್ತು ನಂತರ ಇಂದಿರಾ ಗಾಂಧಿಯವರು ಪ್ರತಿನಿಧಿಸಿದ ಕ್ಷೇತ್ರವಾಗಿದೆ ಇದು. 2004 ರಲ್ಲಿ ರಾಹುಲ್ ಗಾಂಧಿ ಅವರು ಕುಟುಂಬದ ಭದ್ರಕೋಟೆಯನ್ನು ವಹಿಸಿಕೊಂಡರು. 2009 ಮತ್ತು 2014 ರಲ್ಲಿ ಪುನರಾಯ್ಕೆಯಾದರು. ಆದರೆ 2019 ರ ಚುನಾವಣೆಯಲ್ಲಿ ಸುಮಾರು 55,000 ಮತಗಳ ಅಂತರದಿಂದ ಸ್ಮೃತಿ ಇರಾನಿ ವಿರುದ್ಧ ಸೋತರು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ