AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೇಥಿಯಲ್ಲಿ ಒಂದೇ ದಿನ ರಾಹುಲ್ ಗಾಂಧಿ, ಸ್ಮೃತಿ ಇರಾನಿ ಕಾರ್ಯಕ್ರಮ!

ಸೋಲಿನ ನಂತರ ಅಮೇಥಿಯಿಂದ ದೂರ ಸರಿಯಲು ಆರಂಭಿಸಿದ ರಾಹುಲ್ ಗಾಂಧಿ ಈಗ ವಯನಾಡಿಗೆ ಸೀಮಿತವಾಗಿದ್ದಾರೆ. ರಾಹುಲ್ ಗಾಂಧಿ ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ ಅಥವಾ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಲ್ಲಿಂದ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಮೇಥಿಯಲ್ಲಿ ಒಂದೇ ದಿನ ರಾಹುಲ್ ಗಾಂಧಿ, ಸ್ಮೃತಿ ಇರಾನಿ ಕಾರ್ಯಕ್ರಮ!
ಸ್ಮೃತಿ ಇರಾನಿ & ರಾಹುಲ್ ಗಾಂಧಿ
Follow us
Ganapathi Sharma
|

Updated on: Feb 19, 2024 | 6:56 AM

ನವದೆಹಲಿ, ಫೆಬ್ರವರಿ 19: ಸುಮಾರು ಎರಡು ವರ್ಷಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಇಂದು (ಸೋಮವಾರ) ಒಂದೇ ದಿನ ಅಮೇಥಿಯಲ್ಲಿರಲಿದ್ದಾರೆ. ಆದರೆ ಇಬ್ಬರೂ ಭೇಟಿಯಾಗುವ ಅಥವಾ ಮುಖಾಮುಖಿಯಾಗುವ ಸಾಧ್ಯತೆ ಇಲ್ಲ. ಅಮೇಥಿ ಹಲವು ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ಈಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಲ್ಲಿಂದ ಲೋಕಸಭಾ ಸಂಸದರಾಗಿದ್ದಾರೆ. ರಾಹುಲ್ ಗಾಂಧಿ ಸತತ ಮೂರು ಬಾರಿ ಇಲ್ಲಿಂದ ಸಂಸದರಾಗಿದ್ದರು. ಅವರ ತಾಯಿ ಸೋನಿಯಾ ಗಾಂಧಿ ಕೂಡ ಈ ಹಿಂದೆ ಅಮೇಥಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಸೋತಿದ್ದರು. ಸೋಲಿನ ನಂತರ ಅವರ ಅಮೇಥಿ ಭೇಟಿ ಕಡಿಮೆಯಾಯಿತು.

ರಾಹುಲ್ ಗಾಂಧಿ ಅಮೇಥಿಯಿಂದ ದೂರ ಸರಿಯುತ್ತಲೇ ಇದ್ದಾರೆ ಮತ್ತು ಈಗ ಅವರು ಕೇರಳದ ವಯನಾಡಿನ ಸಂಸದರಾಗಿದ್ದಾರೆ. ರಾಹುಲ್ ಗಾಂಧಿ ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ ಅಥವಾ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಲ್ಲಿಂದ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಾರಾ ಎಂಬ ಕುತೂಹಲ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜನರಲ್ಲಿ ಮನೆ ಮಾಡಿದೆ. ಆದರೆ, ಈ ವಿಚಾರದಲ್ಲಿ ಇನ್ನೂ ಯಾವುದೂ ಸ್ಪಷ್ಟವಾಗಿಲ್ಲ.

ಸುದೀರ್ಘ ಅವಧಿಯ ಬಳಿಕ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ಒಂದೇ ದಿನ ಅಮೇಥಿಯಲ್ಲಿರದ್ದಾರೆ. ಆದರೆ ಎರಡೂ ಕಾರ್ಯಕ್ರಮಗಳ ಮಾರ್ಗಗಳು ವಿಭಿನ್ನವಾಗಿವೆ. ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ರಾಹುಲ್ ಗಾಂಧಿ ಮಧ್ಯಾಹ್ನ 3 ಗಂಟೆಗೆ ಅಮೇಥಿ ತಲುಪಲಿದ್ದಾರೆ. ಆದರೆ ಸ್ಮೃತಿ ಇರಾನಿ ರಾಹುಲ್​ಗಿಂತ ಮೊದಲು ಅಮೇಥಿ ತಲುಪಲಿದ್ದಾರೆ. ಇಬ್ಬರೂ ನಾಯಕರ ಕಾರ್ಯಕ್ರಮಗಳನ್ನು ಪರಸ್ಪರ ಮುಖಾಮುಖಿಯಾಗದ ರೀತಿಯಲ್ಲಿ ಮಾಡಲಾಗಿದೆ.

ರಾಹುಲ್ ಅಮೇಥಿಗೆ ಬರುತ್ತಿರುವುದು ಕೇವಲ ಒಂದು ದಿನ ಮಾತ್ರ. ಆದರೆ ಸ್ಮೃತಿ ಇರಾನಿ ಇಲ್ಲಿ 4 ದಿನಗಳ ಕಾರ್ಯಕ್ರಮವನ್ನು ಹೊಂದಿದ್ದಾರೆ. ಈ ಹಿಂದೆ 2022ರ ವಿಧಾನಸಭಾ ಚುನಾವಣೆ ವೇಳೆ ಇಬ್ಬರೂ ನಾಯಕರು ಒಂದೇ ಬಾರಿಗೆ ಅಮೇಥಿಯಲ್ಲಿದ್ದರು.

ಫೆಬ್ರವರಿ 22 ರಂದು ಸ್ಮೃತಿ ಇರಾನಿ ಗೃಹಪ್ರವೇಶ

2019ರ ಸೋಲಿನ ನಂತರ ರಾಹುಲ್ ಗಾಂಧಿ ಅಮೇಥಿಗೆ ಬರುವುದು ಅಪರೂಪ. ಆದರೆ ಸ್ಮೃತಿ ಇರಾನಿ ಇಲ್ಲಿನ ಜನರೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿದ್ದಾರೆ. ಈ ಬಾರಿ 4 ದಿನಗಳ ಕಾಲ ಪ್ರವಾಸಕ್ಕೆ ಬರುತ್ತಿದ್ದಾರೆ. ಈ ಭೇಟಿಯಲ್ಲಿ ಅವರು ಸತತ 3 ದಿನಗಳ ಕಾಲ ತಮ್ಮ ಲೋಕಸಭಾ ಕ್ಷೇತ್ರದ ಜನರನ್ನು ಭೇಟಿಯಾಗಲಿದ್ದಾರೆ.

ಫೆಬ್ರವರಿ 22 ರಂದು ಇರಾನಿ ಅವರು ಅಮೇಥಿಯಲ್ಲಿ ನಿರ್ಮಿಸಿರುವ ಗೃಹ ಪ್ರವೇಶ ಮಾಡಲಿದ್ದಾರೆ ಎಂದು ಅವರ ಆಪ್ತ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯ ಗೌರಿಗಂಜ್ ಪ್ರದೇಶದ ಮೆಡಾನ್ ಮೇವಾಯ್‌ನಲ್ಲಿ ಮನೆಯನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ಫೆ.22ರಂದು ಗೃಹ ಪ್ರವೇಶ ಪೂಜೆ ನಡೆಯಲಿದೆ. ಬೆಳಗ್ಗೆ 10ರಿಂದ ಪೂಜಾ ಹವನ ನಡೆಯಲಿದೆ. ಪೂಜೆಯ ನಂತರ ಕ್ಷೇತ್ರದ ಜನರಿಗೆ ಔತಣವನ್ನೂ ಅವರು ಏರ್ಪಡಿಸಿದ್ದಾರೆ.

ಇದನ್ನೂ ಓದಿ: 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಇದೇ ಮೋದಿ ಗ್ಯಾರಂಟಿ ಎಂದ ಪ್ರಧಾನಿ

ಸ್ಮೃತಿ ಇರಾನಿ ಕೂಡ ಈ ಮೂಲಕ ರಾಜಕೀಯ ಸಂದೇಶ ನೀಡಲು ಬಯಸಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿಯನ್ನು ಎಂದಿಗೂ ತಮ್ಮದೆಂದು ಪರಿಗಣಿಸಿಲ್ಲ ಎಂಬ ಸಂದೇಶವನ್ನು ನೀಡಲು ಅವರ ಬಯಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ರಾಹುಲ್ ಗಾಂಧಿ ಅಮೇಠಿಗೆ ಬಂದಾಗಲೆಲ್ಲ ಅತಿಥಿ ಗೃಹದಲ್ಲಿಯೇ ಇರುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ