ಒಂದೇ ದಿನ ರಾಜ್ಯದಲ್ಲಿ 5,030 ಜನರಿಗೆ ಕೊರೊನಾ ಸೋಂಕು, 97 ಸಾವು!
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾದ ಅಟ್ಟ ಹಾಸ ಮುಂದುವರಿದಿದ್ದು. ರಾಜ್ಯದಲ್ಲಿಂದು ಹೊಸದಾಗಿ 5,030 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಕೂಡಾ ಇಂದು ಒಂದೇ ದಿನ 2,207 ಜನರಿಗೆ ಸೋಂಕು ತಗುಲಿರೋದು ಕನ್‌ಫರ್ಮ್ ಆಗಿದೆ. ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 97 ಜನರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1,616 ಜನರ ಸಾವನ್ನಪ್ಪಿದಂತಾಗಿದೆ. ಹಾಗೇನೆ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 47 ಜನರ ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಲ್ಲಿ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 782ಕ್ಕೇರಿಕೆಯಾಗಿದೆ. ಇಂದಿನ ಹೊಸ […]

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾದ ಅಟ್ಟ ಹಾಸ ಮುಂದುವರಿದಿದ್ದು. ರಾಜ್ಯದಲ್ಲಿಂದು ಹೊಸದಾಗಿ 5,030 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಕೂಡಾ ಇಂದು ಒಂದೇ ದಿನ 2,207 ಜನರಿಗೆ ಸೋಂಕು ತಗುಲಿರೋದು ಕನ್‌ಫರ್ಮ್ ಆಗಿದೆ.
ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 97 ಜನರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1,616 ಜನರ ಸಾವನ್ನಪ್ಪಿದಂತಾಗಿದೆ. ಹಾಗೇನೆ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 47 ಜನರ ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಲ್ಲಿ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 782ಕ್ಕೇರಿಕೆಯಾಗಿದೆ.
ಇಂದಿನ ಹೊಸ ಕೊರೊನಾ ಪೀಡಿತರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80,863ಕ್ಕೆ ಏರಿಕೆಯಾಗಿದೆ. ಹಾಗೇನೇ ಬೆಂಗಳೂರಲ್ಲಿ ಕೂಡಾ ಇಂದಿನ ಸಂಖ್ಯೆಯೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 39,200ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Published On - 7:17 pm, Thu, 23 July 20



