ಅಟ್ಲಾಂಟಾ ಸಂಸ್ಥೆಯಿಂದ ಬೆಂಗಳೂರು ನಗರ ಕೇಂದ್ರ ಗ್ರಂಥಾಲಯಕ್ಕೆ 15 ಸಾವಿರ ಪುಸ್ತಕಗಳ ಕೊಡುಗೆ: ಸುರೇಶ್ ಕುಮಾರ್

ಬೆಂಗಳೂರು ನಗರದ ನಗರ ಕೇಂದ್ರ ಗ್ರಂಥಾಲಯಕ್ಕೆ ಅಮೇರಿಕಾದ ಅಟ್ಲಾಂಟಾದ ವಿ-ಸರ್ವ್ ಇಂಟರ್‍ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ವಿಜಯರಾಘವನ್, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಡಿಸ್ಟ್ರಿಕ್ ಗೌರ್ನರ್ ಶ್ರೀ ನಾಗೇಂದ್ರ ಪ್ರಸಾದ್ ಅವರಿಗೆ ಸುರೇಶ್ ಕುಮಾರ್ ಕೃತಜ್ಞತೆ ವ್ಯಕ್ತಪಡಿಸಿದರು.

ಅಟ್ಲಾಂಟಾ ಸಂಸ್ಥೆಯಿಂದ ಬೆಂಗಳೂರು ನಗರ ಕೇಂದ್ರ ಗ್ರಂಥಾಲಯಕ್ಕೆ 15 ಸಾವಿರ ಪುಸ್ತಕಗಳ ಕೊಡುಗೆ: ಸುರೇಶ್ ಕುಮಾರ್
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
Edited By:

Updated on: Jun 28, 2021 | 6:55 PM

ಬೆಂಗಳೂರು: ಅಮೇರಿಕಾದ ಅಟ್ಲಾಂಟಾ ವಿ-ಸ‌ರ್ವ್ ಇಂಟರ್ ನ್ಯಾಷನಲ್ ಫೌಂಡೇಷನ್ ಸಂಸ್ಥೆ ಬೆಂಗಳೂರು ನಗರದ ನಗರ ಕೇಂದ್ರ ಗ್ರಂಥಾಲಯಕ್ಕೆ ರೂಪಾಯಿ ಒಂದೂವರೆ ಕೋಟಿ ಮೌಲ್ಯದ‌ 15 ಸಾವಿರ ಅತ್ಯತ್ಕೃಷ್ಟ ಪುಸ್ತಕಗಳನ್ನು ನೀಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಪುಸ್ತಕಗಳನ್ನು ಇಲಾಖೆ ಪರವಾಗಿ ಸ್ವೀಕರಿಸಿ ಮಾತನಾಡಿದ ಅವರು, ವಿ-ಸರ್ವ್ ಇಂಟರ್ ನ್ಯಾಷನಲ್ ಫೌಂಡೇಷನ್ ಸಂಸ್ಥೆ ಅಧ್ಯಕ್ಷ ಡಾ. ವಿಜಯರಾಘವನ್ ಅವರು ತಮ್ಮ ಸಂಸ್ಥೆಯಿಂದ ನೀಡಿದ ಮೌಲ್ಯಯುತ ಪುಸ್ತಕಗಳನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ಡಾ. ನಾಗೇಂದ್ರ ಪ್ರಸಾದ್ ನಗರ ಕೇಂದ್ರ ಗ್ರಂಥಾಲಯಕ್ಕೆ ಹಸ್ತಾಂತರಿಸಿದ್ದಾರೆ ಎಂದು ತಿಳಿಸಿದರು.

ಅಮೇರಿಕಾದ ಅಟ್ಲಾಂಟದಲ್ಲಿ ಎ.ಕೆ. ಎಜು-ಸ್ಯಾಟ್ ಸಂಸ್ಥೆಯು ಭಾರತದ ಇಸ್ರೋ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಭಾರತದಲ್ಲಿನ ಮೂಲಭೂತ ಸೌಕರ್ಯಗಳಿಲ್ಲದ ಕಟ್ಟಕಡೆಯ ಗ್ರಾಮಗಳಲ್ಲಿನ ಶಿಕ್ಷಣ ವಂಚಿತ ಮಕ್ಕಳಿಗೆ ಎ.ಕೆ. ಎಜು-ಸ್ಯಾಟ್ ಮೂಲಕ ಮೂಲಭೂತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾ‌ರ್ಯನಿರ್ವಹಿಸುತ್ತಿದ್ದು, ಅದರ ಭಾಗವಾಗಿ ಪುಸ್ತಕಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.

ಈ ಪುಸ್ತಕಗಳು ಅತ್ಯಂತ ಮೌಲ್ಯಯುತವಾಗಿದ್ದು, ಕ್ರೀಡೆ, ವೈದ್ಯಕೀಯ ಶಿಕ್ಷಣ ಮತ್ತು ವಿಜ್ಞಾನ, ಶಾಸ್ತ್ರೀಯ ಹಾಗೂ ನವನವೀನ ಕಾದಂಬರಿಗಳು, ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಗಳು, ಮಾಹಿತಿ ಮತ್ತುತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಮತ್ತು ಮೆಕ್ಯಾನಿಕಲ್‍ಇಂಜಿನಿಯರಿಂಗ್ ಸೇರಿದಂತೆ ಹಲವಾರು ಪ್ರಾಕಾರದ ಪುಸ್ತಕಗಳನ್ನು ಒಳಗೊಂಡಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಬೆಂಗಳೂರು ನಗರದ ನಗರ ಕೇಂದ್ರ ಗ್ರಂಥಾಲಯಕ್ಕೆ ಅಮೇರಿಕಾದ ಅಟ್ಲಾಂಟಾದ ವಿ-ಸರ್ವ್ ಇಂಟರ್‍ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ವಿಜಯರಾಘವನ್, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಡಿಸ್ಟ್ರಿಕ್ ಗೌರ್ನರ್ ಶ್ರೀ ನಾಗೇಂದ್ರ ಪ್ರಸಾದ್ ಅವರಿಗೆ ಸುರೇಶ್ ಕುಮಾರ್ ಕೃತಜ್ಞತೆ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಈ ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವರು ಕೋರಿದರು. ಪುಸ್ತಕ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಬೆಂಗಳೂರು ರೋಟರಿ ಸಂಸ್ಥೆಯ ಗವನ೵ರ್ ನಾಗೇಂದ್ರ ಪ್ರಸಾದ್, ರವಿಶಂಕರ್, ಶ್ರೀನಿವಾಸಮೂರ್ತಿ, ಅರುಣ್ ಬೇಲೂರ್, ನೀಲ್‍ಜೋಸೆಫ್, ರಿತೇಶ್‍ಗೋಯಲ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ ಎಸ್. ಹೊಸಮನಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಯಾವಾಗ? ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಗ್ರಾಮೀಣ ಮಕ್ಕಳು ಹೆಸರು ಬರೆಯುವುದನ್ನೂ ಮರೆತಿದ್ದಾರೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ

Published On - 6:43 pm, Mon, 28 June 21