AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಮಕ್ಕಳು ಹೆಸರು ಬರೆಯುವುದನ್ನೂ ಮರೆತಿದ್ದಾರೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ

ಟಿವಿ9 ಜತೆ ಮಾತನಾಡಿದ ಅವರು, ಕೊವಿಡ್​ನಿಂದ ಪರೀಕ್ಷೆ ಇಲ್ಲದೇ ಎಷ್ಟು ಮಕ್ಕಳು ಪಾಸ್ ಆಗಿದ್ದಾರೆ ಎಂಬ ಗೊಂದಲವೂ ಇದೆ. ನಾವು ಬೆಂಗಳೂರಿನಂತಹ ನಗರ ಭಾಗದ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಯೋಚಿಸದೇ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಕುರಿತೂ ಚಿಂತಿಸಬೇಕಿದೆ ಎಂದು ತಿಳಿಸಿದರು.

ಗ್ರಾಮೀಣ ಮಕ್ಕಳು ಹೆಸರು ಬರೆಯುವುದನ್ನೂ ಮರೆತಿದ್ದಾರೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ
ಸಚಿವ ಎಸ್. ಸುರೇಶ್ ಕುಮಾರ್
TV9 Web
| Updated By: guruganesh bhat|

Updated on:Jun 24, 2021 | 6:42 PM

Share

ಬೆಂಗಳೂರು: ನಾವು ಬೆಂಗಳೂರಿನ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ಆದರೆ ಗ್ರಾಮೀಣ ಮಕ್ಕಳು ಹೆಸರು ಬರೆಯುವುದನ್ನೂ ಮರೆತಿದ್ದಾರೆ. ಲೆಕ್ಕಗಳನ್ನು ಕೂಡ ಮರೆತಿದ್ದಾರೆ. ಅವರ ಶಿಕ್ಷಣದ ಕುರಿತು ಗಂಭೀರವಾಗಿ ಯೋಚಿಸುವ ಅಗತ್ಯ ಎಲ್ಲಕ್ಕಿಂತ ಹೆಚ್ಚಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕೊವಿಡ್ ನಿರ್ಮಿಸಿದ ಶೈಕ್ಷಣಿಕ ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದ್ದಾರೆ. ಟಿವಿ9 ಜತೆ ಮಾತನಾಡಿದ ಅವರು, ಕೊವಿಡ್​ನಿಂದ ಪರೀಕ್ಷೆ ಇಲ್ಲದೇ ಎಷ್ಟು ಮಕ್ಕಳು ಪಾಸ್ ಆಗಿದ್ದಾರೆ ಎಂಬ ಗೊಂದಲವೂ ಇದೆ. ನಾವು ಬೆಂಗಳೂರಿನಂತಹ ನಗರ ಭಾಗದ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಯೋಚಿಸದೇ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಕುರಿತೂ ಚಿಂತಿಸಬೇಕಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳು, ಪೋಷಕರು ಶಾಲಾ ಶುಲ್ಕ ಪಾವತಿ ಸಂಬಂಧ ಕುಳಿತು ಚರ್ಚಿಸಬೇಕು. ಅವರೇ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ. ಗೊಂದಲಗಳಿಗೆ ಅವಕಾಶ ಕೊಡುವುದು ಯಾರಿಗೂ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆ ಸಚಿವ ಸುರೇಶ್ ಕುಮಾರ್ ಗ್ರಾಮಾಂತರ ಭಾಗಗಳ ವಿದ್ಯಾರ್ಥಿಗಳು ಆನ್​ಲೈನ್ ತರಗತಿಗೆ ಹಾಜರಾಗಲು ಅಂತರ್ಜಾಲ- ನೆಟ್​ವರ್ಕ್ ಸಮಸ್ಯೆಯನ್ನು ಪರಿಹರಿಸುವಂತೆಯೂ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು.

ಗ್ರಾಮೀಣ ಪ್ರದೇಶದಲ್ಲಿ ನೆಟ್​ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್​ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ನೆಟ್​ವರ್ಕ್ ಸಮಸ್ಯೆಗೆ ಕೊನೆ ಹಾಡಲು ನೆಟ್​ವರ್ಕ್ ಆಪರೇಟರ್‌ ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕೆಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.

ಇಂದಿನ ಸಂದರ್ಭವನ್ನು ಗಮನಿಸಿದರೆ ಕೊವಿಡ್ ಕಾಲಘಟ್ಟದಲ್ಲಿ ಆನ್​ಲೈನ್ ತರಗತಿಗಳೇ ಸಾಮಾನ್ಯವಾಗಬಹುದಾಗಿದೆ. ಕೊವಿಡ್ ಪೂರ್ವದ ಸಹಜ ಸಾಮಾಜಿಕ ಸ್ಥಿತಿಗತಿಗಳು ಸದ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹೊಸ ಸ್ಥಿತಿಗೆ ಹೊಂದಿಕೊಳ್ಳದೇ ಅನ್ಯದಾರಿಯಿಲ್ಲವಾದ್ದರಿಂದ ನಾವು ಅಂತರ್ಜಾಲ ನೆಟ್​ವರ್ಕ್ ಸಮಸ್ಯೆಯನ್ನು ಪರಿಹಸಿಕೊಳ್ಳಲೇಬೇಕಿದೆ ಎಂದು ಸಚಿವರು ತಿಳಿಸಿದ್ದರು .ಈ ಸಮಸ್ಯೆ ಪರಿಹಾರವಾದರೆ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಸರ್ಕಾರದ ಜವಾಬ್ದಾರಿಯ ನಿರ್ವಹಣೆ ಪರಿಣಾಮಕಾರಿಯಾಗಲಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್​ಗಳಿಗೆ ಕೂರಲು ಮೊಬೈಲ್ ನೆಟ್​ವರ್ಕ್, ಅಂತರ್ಜಾಲ ಸಮಸ್ಯೆ ಪರಿಹರಿಸಿ: ಸಚಿವ ಸುರೇಶ್ ಕುಮಾರ್ ಮನವಿ

Viral Photo: ಇಲ್ಲಿ ಮಳೆಯಲ್ಲಿ‌ ನೆನೆದೇ ಆನ್​ಲೈನ್ ಕ್ಲಾಸಿಗೆ ಕೂರಬೇಕು; ಮಗಳ ರಕ್ಷಣೆಗೆ ಸ್ವತಃ ಕೊಡೆ ಹಿಡಿದು ನಿಂತ ಅಪ್ಪ

( Karnataka Education Minister Suresh Kumar says Rural children forget to write name because of schools closed)

Published On - 6:29 pm, Thu, 24 June 21