ಬೆಂಗಳೂರು ದಕ್ಷಿಣ ವಿಭಾಗದಲ್ಲಿ 1000ಕ್ಕೂ ಹೆಚ್ಚು ಆಟೋ ರಿಕ್ಷಾ ಚಾಲಕರಿಗೆ ಉಚಿತ ಲಸಿಕೆ ನೀಡಿಕೆ

| Updated By: ganapathi bhat

Updated on: Jul 02, 2021 | 9:04 PM

ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.‌ ಈ ಬಗ್ಗೆ ತೇಜಸ್ವಿ ಸೂರ್ಯ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ 1000ಕ್ಕೂ ಹೆಚ್ಚು ಆಟೋ ರಿಕ್ಷಾ ಚಾಲಕರಿಗೆ ಉಚಿತ ಲಸಿಕೆ ನೀಡಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಆಟೋ ರಿಕ್ಷಾಗಳು ಹಾಗೂ ಚಾಲಕರು ನಮ್ಮ ಬೆಂಗಳೂರಿನ‌ ಜೀವನಾಡಿ ಆಗಿದ್ದಾರೆ.ಈ ನೆಲೆಯಲ್ಲಿ ಸುಮಾರು 1000ದಷ್ಟು ಆಟೊ ಚಾಲಕರಿಗೆ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಇಂದು (ಜುಲೈ 2) ಬೆಂಗಳೂರು ದಕ್ಷಿಣ ವಿಭಾಗದ ಶಾಲಿನಿ‌ ಮೈದಾನ ಹಾಗೂ ಪದ್ಮನಾಭನಗರದಲ್ಲಿ ಆಯೋಜಿಸಲಾಯಿತು. ಆಟೊ ರಿಕ್ಷಾ ಚಾಲಕರು ಉಚಿತವಾಗಿ ಇದರ ಉಪಯೋಗ ಪಡೆದುಕೊಂಡರು. ಚಾಲಕರಿಗೆ ಕೊವಿಶೀಲ್ಡ್ ಲಸಿಕೆ ನೀಡಲಾಯಿತು.

ಎಸಿಟಿ ಗ್ರಾಂಟ್ಸ್, ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ, ಕ್ಲಿನಿಕ್ ಎಂಬ ಸಂಸ್ಥೆ, ಸಂಘಟನೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದವು. ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.‌ ಈ ಬಗ್ಗೆ ತೇಜಸ್ವಿ ಸೂರ್ಯ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು
ಗರ್ಭಿಣಿಯರು ಕೂಡ ಕೊರೊನಾ ಲಸಿಕೆ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಬಾಣಂತಿಯರು ಲಸಿಕೆ ಪಡೆಯಲು ಈ ಮೊದಲು ಒಪ್ಪಿಗೆ ನೀಡಲಾಗಿತ್ತು. ಇದೀಗ, ಗರ್ಭಿಣಿಯರು ಕೂಡ ಲಸಿಕೆ ಪಡೆಯಬಹುದು ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡ ಶಿಫಾರಸು ಮಾಡಿದೆ. ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕೊವಿಡ್ -19 ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾದ ಕಾರಣ ಅವರಿಗೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಜೂನ್ 25ರಂದು ಹೇಳಿದ್ದರು. ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಹೇಳಿತ್ತು. ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್ ಉಪಯುಕ್ತವಾಗಿದೆ, ಅದನ್ನು ನೀಡಬೇಕು ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಸಾವಿರಾರು ಆಟೊ ಚಾಲಕರಿಗೆ ಉಚಿತ ಲಸಿಕೆ ವಿತರಣೆ: ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಲ್ಲಿ ರೆಮ್​ಡೆಸಿವಿರ್ ಔಷಧ ಕೊಡಿಸುವುದಾಗಿ ಕೊವಿಡ್ ಸೋಂಕಿತರಿಗೆ ವಂಚನೆ