ಬಿ.ಕೆ.ಹರಿಪ್ರಸಾದ್​-ಆಯನೂರು ಮಂಜುನಾಥ್​ ನಡುವೆ ಪರಿಷತ್​ನಲ್ಲಿ ‘ಡಸ್ಟ್​ಬಿನ್’ ಕಿತ್ತಾಟ

| Updated By: ಸಾಧು ಶ್ರೀನಾಥ್​

Updated on: Dec 08, 2020 | 4:09 PM

ಕರ್ನಾಟಕದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಪರಿಷತ್​ನಲ್ಲಿ ಬಿ.ಕೆ.ಹರಿಪ್ರಸಾದ್ ಮಾತನಾಡುತ್ತಿದ್ದರು. ಆದರೆ ಮಧ್ಯಪ್ರವೇಶ ಮಾಡಿದ ಆಯನೂರು ಮಂಜುನಾಥ್ ಕಿಚಾಯಿಸಿದರು.

ಬಿ.ಕೆ.ಹರಿಪ್ರಸಾದ್​-ಆಯನೂರು ಮಂಜುನಾಥ್​ ನಡುವೆ ಪರಿಷತ್​ನಲ್ಲಿ ‘ಡಸ್ಟ್​ಬಿನ್’ ಕಿತ್ತಾಟ
ಆಯನೂರು ಮಂಜುನಾಥ್​(ಎಡ)-ಬಿ.ಕೆ.ಹರಿಪ್ರಸಾದ್​ (ಬಲ)
Follow us on

ಬೆಂಗಳೂರು: ಇಂದು ವಿಧಾನ ಪರಿಷತ್​ನಲ್ಲಿ ಬಿ.ಕೆ. ಹರಿಪ್ರಸಾದ್​ ಮತ್ತು ಆಯನೂರು ಮಂಜುನಾಥ್​ ನಡುವೆ ‘ಡಸ್ಟ್​ಬಿನ್’ ಗಲಾಟೆ ನಡೆಯಿತು. ಆಯನೂರು ಮಂಜುನಾಥ್​ ಟೀಕೆಗೆ, ಹರಿಪ್ರಸಾದ್ ಕಟು ತಿರುಗೇಟು ನೀಡಿದರು.

ಕರ್ನಾಟಕದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಪರಿಷತ್​ನಲ್ಲಿ ಬಿ.ಕೆ.ಹರಿಪ್ರಸಾದ್ ಮಾತನಾಡುತ್ತಿದ್ದರು. ಆದರೆ ಮಧ್ಯಪ್ರವೇಶ ಮಾಡಿದ ಆಯನೂರು ಮಂಜುನಾಥ್​, ನಾನು ಮತ್ತು ಬಿ.ಕೆ.ಹರಿಪ್ರಸಾದ್​ ರಾಜ್ಯಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ದೇಶ, ಪ್ರಪಂಚದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡವರು. ಅಗಾಧವಾದ ಜ್ಞಾನ ಉಳ್ಳವರು. ಆದರೆ ಅವರ ಜ್ಞಾನವನ್ನೆಲ್ಲ ಇದು ಇಲ್ಲಿ ಡಸ್ಟ್​ಬಿನ್​ಗೆ ಸುರಿಯುತ್ತಿದ್ದಾರೆ ಎಂದು ಕಿಚಾಯಿಸಿದರು.

ತೀವ್ರ ವಿರೋಧ, ತಿರುಗೇಟು
ಆದರೆ ಆಯನೂರು ಮಂಜುನಾಥ್ ಹೇಳಿಕೆಗೆ ಹರಿಪ್ರಸಾದ್ ಸೇರಿ, ಇತರ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾನು ಕರ್ನಾಟಕ ಭಾರತದ ಒಂದು ಭಾಗ ಎಂದೇ ಭಾವಿಸಿ ಮಾತನಾಡುತ್ತಿದ್ದೇನೆ. ಹೀಗೆ ಡಸ್ಟ್​ಬಿನ್​ ಎಂಬ ಶಬ್ದ ಬಳಕೆ ಮಾಡುವುದು ಸರಿಯೇ? ರಾಜ್ಯ ಸರ್ಕಾರ ತಂದಿರುವ ಭೂ ಸುಧಾರಣಾ ಕಾಯ್ದೆ ಡಸ್ಟ್​ಬಿನ್​ಗೆ ಅಲ್ಲ, ಚರಂಡಿಗೆ ಎಸೆಯಲೂ ಲಾಯಕ್ಕಿಲ್ಲ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು. ಅದಾದ ಬಳಿಕ ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ, ಡಸ್ಟ್​ಬಿನ್​ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.

ಗಟ್ಟಿಯಾಗಿ ಹೋಗಿ ಕೇಳ್ರೀ.. ನೀವು ಕೊಟ್ಟ 525 ಕೋಟಿ ಪರಿಹಾರ ಸಾಕಾಗಲ್ಲ ಅಂತಾ -ಸಿದ್ದು ಗುಟುರು