ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವಿಜಯೇಂದ್ರ ಪೂಜೆ: ನಂಜನಗೂಡಿನಲ್ಲಿ ಸಚಿವ ಸೋಮಶೇಖರ್ ಗೌಪ್ಯ ಸಭೆ

|

Updated on: May 22, 2021 | 4:52 PM

ನಂಜನಗೂಡು ದೇವಸ್ಥಾನದಲ್ಲಿ ವಿಜಯೇಂದ್ರ ಪೂಜೆ ಹಿನ್ನೆಲೆ ವಿಜಯೇಂದ್ರ ಪೂಜೆ ಬಗ್ಗೆ ಸಭೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಸಾಧ್ಯತೆಯಿದೆ. ವಿಜಯೇಂದ್ರ ಪೂಜೆ ಸಲ್ಲಿಕೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಿಯಮ ಉಲ್ಲಂಘನೆ ಬಗ್ಗೆ ಸ್ವಪಕ್ಷ ಮತ್ತು ವಿಪಕ್ಷದವರಿಂದ ಟೀಕೆಗಳ ಸುರಿಮಳೆಯಾಗಿತ್ತು.

ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವಿಜಯೇಂದ್ರ ಪೂಜೆ: ನಂಜನಗೂಡಿನಲ್ಲಿ ಸಚಿವ ಸೋಮಶೇಖರ್ ಗೌಪ್ಯ ಸಭೆ
ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವಿಜಯೇಂದ್ರ ಪೂಜೆ: ನಂಜನಗೂಡಿನಲ್ಲಿ ಸಚಿವ ಸೋಮಶೇಖರ್ ಗೌಪ್ಯ ಸಭೆ
Follow us on

ಮೈಸೂರು: ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಗುಂಪು ಕೂಡಿಕೊಂಡು, ಕುಟುಂಬಸ್ಥರೊಂದಿಗೆ ನಂಜನಗೂಡಿನಲ್ಲಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ವಿಶೇಷ ಪೂಜೆ ನೆರವೇರಿಸಿದ್ದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಗೌಪ್ಯ ಸಭೆ ನಡೆಸಿದ್ದಾರೆ. ನಂಜನಗೂಡು ಪಟ್ಟಣದ ಮಿನಿವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸ್ಥಳೀಯ ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ತಾಲೂಕು ಮಟ್ಟದ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.

ನಂಜನಗೂಡು ದೇವಸ್ಥಾನದಲ್ಲಿ ವಿಜಯೇಂದ್ರ ಪೂಜೆ ಹಿನ್ನೆಲೆ ವಿಜಯೇಂದ್ರ ಪೂಜೆ ಬಗ್ಗೆ ಸಭೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಸಾಧ್ಯತೆಯಿದೆ. ವಿಜಯೇಂದ್ರ ಪೂಜೆ ಸಲ್ಲಿಕೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಿಯಮ ಉಲ್ಲಂಘನೆ ಬಗ್ಗೆ ಸ್ವಪಕ್ಷ ಮತ್ತು ವಿಪಕ್ಷದವರಿಂದ ಟೀಕೆಗಳ ಸುರಿಮಳೆಯಾಗಿತ್ತು.

ಪ್ರಕರಣ ದಾಖಲಿಸುವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿತ್ತು. ಈ ಬಗ್ಗೆ ಹೈಕೋರ್ಟ್​ಗೆ ಮನವಿ ಸಹ ಸಲ್ಲಿಸಲಾಗಿದೆ. ಅರ್ಜಿ ಅಂಗೀಕರಿಸಿದ ಹೈಕೋರ್ಟ್​, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿರುವ ಆರೋಪದ ಮೇರೆಗೆ ಬಿ ವೈ ವಿಜಯೇಂದ್ರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಕೋರ್ಟ್​ ಸೂಚನೆ ನೀಡಿದೆ.

(b y vijayendra performs special pooja at nanjundeshwara temple minister s t somashekar conducts secret meeting)

ಕೊರೊನಾ ಕಾಲದಲ್ಲಿ ಮಾರ್ಗಸೂಚಿ ಉಲ್ಲಂಘನೆ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ FIR ಸಾಧ್ಯತೆ- ಹೈಕೋರ್ಟ್ ಅಭಿಪ್ರಾಯ