6 ತಿಂಗಳ ಹಿಂದೆ ರಕ್ಷಿಸಲ್ಪಟ್ಟಿದ್ದ ಮರಿ ಆನೆ ‘ವೇದಾವತಿ’ ಮೈಸೂರು ಮೃಗಾಲಯದಲ್ಲಿ ಸಾವು

| Updated By: ganapathi bhat

Updated on: Apr 07, 2022 | 10:43 AM

ಮೈಸೂರು ಮೃಗಾಲಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಆನೆ ಮರಿಯೊಂದು ಸಾವನ್ನಪ್ಪಿದೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

6 ತಿಂಗಳ ಹಿಂದೆ ರಕ್ಷಿಸಲ್ಪಟ್ಟಿದ್ದ ಮರಿ ಆನೆ ‘ವೇದಾವತಿ’ ಮೈಸೂರು ಮೃಗಾಲಯದಲ್ಲಿ ಸಾವು
ಮರಿ ಆನೆ ‘ವೇದಾವತಿ’
Follow us on

ಮೈಸೂರು: ಮೈಸೂರು ಮೃಗಾಲಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಆನೆ ಮರಿಯೊಂದು ಸಾವನ್ನಪ್ಪಿರುವ ಘಟನೆ ಇಂದು ವರದಿಯಾಗಿದೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೃತಪಟ್ಟಿರುವ ಆನೆ ಮರಿಯನ್ನು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಕ್ಷಿಸಲಾಗಿತ್ತು. ಕಳೆದ ಆರು ತಿಂಗಳ ಹಿಂದೆ ಮರಿ ಆನೆಯನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಮೃಗಾಲಯದಲ್ಲಿ ಹೆಣ್ಣು ಆನೆಮರಿಗೆ ‘ವೇದಾವತಿ’ ಎಂದು ಹೆಸರಿಡಲಾಗಿತ್ತು. ಇದೀಗ ಆನೆಮರಿಯು ಅನಾರೋಗ್ಯದಿಂದ ಮೃತಪಟ್ಟಿದೆ.

ಮರಿ ಆನೆ ವೇದಾವತಿ ಚಟುವಟಿಕೆಯಿಂದ ಇದ್ದಾಗ

ಕರ್ನಾಟಕ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಆನೆಗಳ ಅನುಮಾನಸ್ಪದ ಸಾವು..

Published On - 12:56 pm, Tue, 15 December 20